KRGRV
Monday, September 21, 2026
Homeಜಿಲ್ಲಾ ಸುದ್ದಿಗಳು​ಕುರುಬ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಒತ್ತು: ಶರಣು ಬಿ. ತಳ್ಳಿಕೆರಿ

​ಕುರುಬ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಒತ್ತು: ಶರಣು ಬಿ. ತಳ್ಳಿಕೆರಿ

​ವಿಜಯಪುರ: ಸಮಾಜದ ಏಳಿಗೆಯಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದು. ಸಮಾಜದ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಕ್ರಿಯಾಶೀಲತೆ ಒಂದಾದಾಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣು ಬಿ. ತಳ್ಳಿಕೆರಿ ಅಭಿಪ್ರಾಯಪಟ್ಟರು.
​ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಜಿಲ್ಲಾ ಕುರುಬ ಸಮಾಜದ ಪ್ರಮುಖರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಹಿರಿಯರು ಮತ್ತು ಯುವಕರು ತೋರಿದ ಪ್ರೀತಿ, ವಿಶ್ವಾಸಕ್ಕೆ ತಮಗೆ ಧನ್ಯವಾದಗಳನ್ನು ಅರ್ಪಿಸಿದರು. ಸಮಾಜದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

​ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು:
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ನಾಗಪ್ಪ ಶಿರೂರ, ಜಿ.ಪಂ. ಮಾಜಿ ಸದಸ್ಯರಾದ ಸಾಯಿಬಣ್ಣ ಅಲ್ಯಾಳ, ಸಾಬು ಮಾಶ್ಯಾಳ, ಸಿದ್ದು ಬುಳ್ಳಾ, ಶ್ರೀಮತಿ ಶಿಲ್ಪಾ ಕುಂದರಗೊಂಡ, ಬಸವರಾಜ್ ಹೊನವಾಡ, ಸಂತೋಷ್, ಸಿದ್ದರಾಮ್ ಕಾಕಂಡಕಿ, ರಾಜಕುಮಾರ್ ಸಗಾಯಿ, ಮಲ್ಲು ನಾಯ್ಕಲ್, ಪ್ರಕಾಶ್ ದೊಡ್ಡಮನಿ, ಮುತ್ತು ಹಿರೇಹಾಳ್, ವಿಕಾಸ್ ಜೋಗಿ, ಸಂಗಮ್ಮ ದೇವರಮನಿ, ಲಕ್ಷ್ಮಣ್ ಬಿಜ್ಜೂರು, ವಿಠಲ್, ಜಕ್ಕು, ರಾಜು ಕಗ್ವಾಡ್, ರಾಜು, ರಾಹುಲ್ ಸೇರಿದಂತೆ ಸಮಾಜದ ಅನೇಕ ಗಣ್ಯರು ಹಾಗೂ ಯುವ ಮುಖಂಡರು ಭಾಗವಹಿಸಿದ್ದರು

ಹೆಚ್ಚಿನ ಸುದ್ದಿ