KRGRV
Sunday, August 16, 2026
Homeಜಿಲ್ಲಾ ಸುದ್ದಿಗಳುವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸಚಿವ ಎಂ.ಬಿ.ಪಾಟೀಲ ಸೇರಿ ಶಾಸಕರುಗಳಿಗೆ ಹೋರಾಟ...

ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸಚಿವ ಎಂ.ಬಿ.ಪಾಟೀಲ ಸೇರಿ ಶಾಸಕರುಗಳಿಗೆ ಹೋರಾಟ ಸಮಿತಿಯಿಂದ ಒತ್ತಾಯ*

ವಿಜಯಪುರ :ಸಂವಿಧಾನದ 371(ಜೆ ) ಗೆ ತಿದ್ದುಪಡಿ ಮಾಡಲು ತಾವು ಮುಖ್ಯಮಂತ್ರಿಗಳ ಮನ ಒಲಿಸಿ ಭಾರತ(ಕೇಂದ್ರ ) ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳಿಸಿಕೊಡಬೇಕು ಹಾಗೂ ಮೀಸಲಾತಿಗೆ ಸೇರ್ಪಡೆಯಾಗುವವರೆಗೆ ತಾತ್ಕಾಲಿಕವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸೌಲಭ್ಯಗಳನ್ನು ವಿಜಯಪುರ ಜಿಲ್ಲೆಗೂ ವಿಸ್ತರಿಸಬೇಕು. ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ 371 ಜೆ ಹೋರಾಟ ಸಮಿತಿ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಮುದ್ದೇಬಿಹಾಳ ಶಾಸಕರಾದ ಸಿ ಎಸ್ ನಾಡಗೌಡ, ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಹಾಗೂ ಶಾಸಕರುಗಳು ಹೋರಾಟ ಸಮಿತಿ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ 371ಜೆ ಮೀಸಲಾತಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.

ವಿಜಯಪುರ ಜಿಲ್ಲೆಯ ೨೫ ಲಕ್ಷ ಜನರಿಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಯುವಕರಿಗೆ ನೇಮಕಾತಿಯಲ್ಲಿ ಮೀಸಲಾತಿ,ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುವ ವಿಶೇಷ ಅನುದಾನ ಸೌಲಭ್ಯ ಹಾಗೂ ಜಿಲ್ಲೆಯ ಮಕ್ಕಳ ಭವಿಷ್ಯದ ದೃಷ್ಟಿಯಿಂದ 371(ಜೆ) ತಿದ್ದುಪಡಿ ಪ್ರಸ್ತಾವನೆಯನ್ನು ಕಳುಹಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಇದೆ ಸಂದರ್ಭದಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೋರಾಟಗಾರರಾದ ವಿನೋದ ಖೇಡ,ಎನ್ ಸುರೇಶಕುಮಾರ, ಲಾಯಪ್ಪ ಇಂಗಳೆ, ಸುರೇಶ ಬಿಜಾಪುರ, ಚಂದ್ರಶೇಖರ ಹೊಸಮನಿ,ಅನಿಲ ಇಕ್ಕಡೆ, ಮಲ್ಲಿಕಾರ್ಜುನ ಬಟಗಿ, ಶರಣಗೌಡ ಪಾಟೀಲ, ಮಲ್ಲನಗೌಡ ಬಿರಾದಾರ (ಬರಟಗಿ),ಸಂಜೀವ ಪಾಟೀಲ (ಕನ್ನೂರ), ನೀಲಾಂಬಿಕಾ ಬಿರಾದಾರ, ಜಗದೇವ ಸೂರ್ಯವಂಶಿ, ಎಂ ಆರ್ ಗುರಿಕಾರ, ವಸಂತ ಬೈರಾಮಡಿ ಗಿರೀಶ ಕಲಘಟಗಿ, ದಾನೇಶ ಅವಟಿ ಅಂಬಣ್ಣ ಗುನ್ನಾಪುರ, ಅಶೋಕ ಚೋಳಕೆ, ಸಂತೋಷ ಕಲಗುಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ