KRGRV
Wednesday, August 26, 2026
Homeಜಿಲ್ಲಾ ಸುದ್ದಿಗಳುಕಿತ್ತೂರ ಪೊಲೀಸರ ಭಾರೀ ಕಾರ್ಯಾಚರಣೆ: ಆಭರಣ ಕಳ್ಳತನ ಮಾಡಿದವರ ಬಂಧನ...

ಕಿತ್ತೂರ ಪೊಲೀಸರ ಭಾರೀ ಕಾರ್ಯಾಚರಣೆ: ಆಭರಣ ಕಳ್ಳತನ ಮಾಡಿದವರ ಬಂಧನ…

ಚನ್ನಮ್ಮನ ಕಿತ್ತೂರು: ಆಭರಣ ಅಂಗಡಿ ಕಳ್ಳತನ ಮಾಡಿದ ರಾಜಸ್ಥಾನ ಮೂಲದ 4 ಜನ ಹಾಗೂ ಮಧ್ಯಪ್ರದೇಶ ಮೂಲದ ಒಬ್ಬ ಆರೋಪಿ ಸೇರಿದಂತೆ ಒಟ್ಟು 5 ಜನ ಅಂತರ ರಾಜ್ಯ ಕಳ್ಳರ ಬಂಧನ,

ಅವರಿಂದ 17 ಲಕ್ಷ ರೂಪಾಯಿ ಮೌಲ್ಯದ 7 ಕೆಜಿ ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ 5 ಲಕ್ಷ ರೂಪಾಯಿ ಕಿಮ್ಮತ್ತಿನ ಐ20 ಕಾರ ಗಾಡಿ ವಶ.

ದಿನಾಂಕ: 12/08/2026 ರಂದು ರಾತ್ರಿ 21:00 ಗಂಟೆಯಿಂದ ದಿನಾಂಕ: 13/08/2026 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮಾನಜ್ಜ ಜ್ಯುವೆಲ್ಲರಿ ಅಂಗಡಿಯ ಬಾಗಿಲಿಗೆ ಹಾಕಿದ ಶೆಟರ್ಸ್ ಕೀಲಿ ಮುರಿದು ಒಳಗೆ ಹೊಕ್ಕು ಅಂಗಡಿಯಲ್ಲಿದ್ದ ಫರ್ನಿಚರ್ಸ್ ನ ಲಾಕ್‌ನ್ನು ಯಾವುದೋ ಸಾಧನದಿಂದ ಮೀಟಿ ಮುರಿದು ತೆಗೆದು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಶ್ರೀ ಸುಬ್ರಮಣ್ಯ ಮಾರ್ತಾಂಡಪ್ಪ ಪತ್ತಾರ ಸಾ।। ಕಿತ್ತೂರ ಇವರು ಕಿತ್ತೂರ ಪೊಲೀಸ ಠಾಣೆಯಲ್ಲಿ ಫಿರ್ಯಾದಿ ನೀಡಿದ್ದು ಅದನ್ನು ಕಿತ್ತೂರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 210/2026 ಕಲಂ: 305, 331(3), 331(4) ಬಿಎನ್ಎಸ್-2023 ನೇದ್ದಕ್ಕೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದರು.

ಈ ಪ್ರಕರಣದ ಪತ್ತೆಯನ್ನು ವೈಜ್ಞಾನಿಕ ತಳಹದಿಯಲ್ಲಿ ಹಾಗೂ ತೀವ್ರ ಗತಿಯಲ್ಲಿ ಕೈಕೊಂಡು ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ
ಪ್ರಕರಣಗಳಲ್ಲಿಯ ಆರೋಪಿತರಾದ
1] ನಾರಸಿಂಗ್ @ ಪವನ ತಂದೆ ಜೇತುಸಿಂಗ್. ಸಾ: ಹನುಟಿಯಾ, ರಾಜಸ್ಥಾನ ರಾಜ್ಯ,
2] ಅರ್ಜುನಸಿಂಗ್ ತಂದೆ ಶಿವಸಿಂಗ್, ಸಾ: ಧಾಖಡಿ, ಮಧ್ಯಪ್ರದೇಶ ರಾಜ್ಯ,
3] ದಿಲೀಪಸಿಂಗ್ ದೇವಿಸಿಂಗ್. ಸಾ:ಭಿಲೋಕಾಬಡಿಯಾ, ರಾಜಸ್ಥಾನ ರಾಜ್ಯ.
4] ಲೋಕೇಶ ಚಿಮನಾರಾಮ ಮೇಗವಾಲ, ಸಾ: ಶಹಾಪೂರ. ರಾಜಸ್ಥಾನ.
5]ನರೇಂದ್ರ ಪ್ರಭುಜಿ @ ಪ್ರಭುಲಾಲ ಗುರ್ಜರ, ಸಾ: ಬೇವರಖಾಸ, ರಾಜಸ್ಥಾನ.
ಇವರನ್ನು ಪತ್ತೆ ಮಾಡಿ ಕಳುವು ಮಾಡಿದ 17 ಲಕ್ಷ ರೂ. ಕಿಮ್ಮತ್ತಿನ 7 ಕೆಜಿ ಬೆಳ್ಳಿಯ ಆಭರಣಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 5 ಲಕ್ಷ ರೂಪಾಯಿ ಕಿಮ್ಮತ್ತಿನ ಒಂದು ಐ20 ಕಾರ ಗಾಡಿಯನ್ನು ವಶಪಡಿಸಿಕೊಂಡು ಆರೋಪಿತರಿಗೆ ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಕಾರ್ಯಾಚರಣೆಯನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕೆ.ರಾಮರಾಜನ್ ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಆರ್.ಬಿ ಬಸರಗಿ ಡಾ।। ವೀರಯ್ಯ ಹಿರೇಮಠ, ಪೊಲೀಸ್ ಉಪಾಧೀಕ್ಷಕರು, ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ, ಶ್ರೀ ಶಿವಾನಂದ ಬಿ ಗುಡಗನಟ್ಟಿ, ಸಿ.ಪಿ.ಐ ಕಿತ್ತೂರ ವೃತ್ತ. ಶ್ರೀ ಭರತ್ ಎಸ್. ಪಿ.ಎಸ್.ಐ. (ಕಾ&ಸು) ಕಿತ್ತೂರ ಪೊಲೀಸ್ ಠಾಣೆ. ಶ್ರೀ ಜಿ.ಜಿ.ಹಂಪಣ್ಣವರ ಪಿ.ಎಸ್.ಐ (ಸಿಬಿ) ಕಿತ್ತೂರ ಠಾಣೆ ಹಾಗೂ ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಆರ್ ಎಸ್ ಶೀಲಿ, ಎಸ್.ಎ.ದಫೇದಾರ, ಎಸ್.ಎಮ್.ಮುರಗೋಡ, ಎ.ಎಮ್.ಚಿಕ್ಕೇರಿ, ಎನ್.ಆರ್.ಗಳಗಿ, ನಾಗರಾಜ ಕಡಗನ್ನವರ, ಎಸ್.ಎಮ್.ಬೆಟಗೇರಿ, ಹಾಗೂ ದೊಡವಾಡ ಠಾಣೆಯ ಸಿಬ್ಬಂದಿಯಾದ ವಿಠಲ ಆರ್ ನಾಯ್ಕ, ಹಾಗೂ ಬೆಳಗಾವಿ ಟಿಕ್ನಿಕಲ್ ಸೆಲ್ ಸಿಬ್ಬಂದಿ ಸಚಿನ ಪಾಟೀಲ ರವರುಗಳ ತಂಡವು ಯಶಸ್ವಿ ಕಾರ್ಯಾಚರಣೆ ಮಾಡಿರುತ್ತಾರೆ. ತಂಡದ ಉತ್ತಮ ಪತ್ತೆ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕೆ.ರಾಮರಾಜನ್ ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಆರ್.ಬಿ ಬಸರಗಿ ಕೆ.ಎಸ್.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ