KRGRV
Wednesday, September 23, 2026
  • ಐಒಸಿ ಅಧ್ಯಕ್ಷರಾದ ಕಿರ್ಸ್ಟಿ ಕೊವೆಂಟ್ರಿ ಭೇಟಿಯಾದ ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜ್
  • ಕರ್ನಾಟಕದ ಕ್ರೀಡಾಭಿವೃದ್ಧಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ

ನಾಗೋಯಾ (ಜಪಾನ್) : ಜಪಾನ್ ನಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್ ವೇಳೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷರಾದ ಕಿರ್ಸ್ಟಿ ಕೊವೆಂಟ್ರಿ ಅವರನ್ನು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷರು, ಫಿಭಾ ಏಷ್ಯಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜ್ ಅವರು ಭೇಟಿಯಾಗಿ ಮಾತುಕತೆ ನಡೆಸಿದರು.

ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದ ವೇಳೆ ಕಿರ್ಸ್ಟಿ ಕೊವೆಂಟ್ರಿ ಅವರನ್ನು ಭೇಟಿಯಾದ ಡಾ.ಕೆ.ಗೋವಿಂದರಾಜ್ ಅವರು, ಕರ್ನಾಟಕದ ಕ್ರೀಡಾಭಿವೃದ್ಧಿಗೆ ಕೆಒಎ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಕ್ರೀಡಾಭಿವೃದ್ಧಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ತಿಳಿಸಿದರು.

  • ಬೆಂಗಳೂರಿಗೆ ಆಹ್ವಾನಿಸಿದ ಕೆಒಎ ಅಧ್ಯಕ್ಷರು
    ಕ್ರೀಡಾ ಚಟುವಟಿಕೆಗಳ ಸಂಬಂಧ ಮುಂದಿನ ದಿನಗಳಲ್ಲಿ ‌ಬೆಂಗಳೂರಿಗೆ ಭೇಟಿ ನೀಡುವಂತೆ ಐಒಸಿ ಅಧ್ಯಕ್ಷರಾದ ಕಿರ್ಸ್ಟಿ ಕೊವೆಂಟ್ರಿ ಅವರನ್ನು ಡಾ.ಕೆ.ಗೋವಿಂದರಾಜ್ ಅವರು ಆಹ್ವಾನಿಸಿದರು. ಬೆಂಗಳೂರು ನಗರ ಇಡೀ‌ ದೇಶದಲ್ಲಿಯೇ ಬಾಸ್ಕೆಟ್‌ಬಾಲ್ ಹಾಗೂ ಇತರ ಕ್ರೀಡೆಗಳ ಹಬ್ ಆಗಿ ಬೆಳೆಯುತ್ತಿದ್ದು, ಈಗಾಗಲೇ 12ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಟೂರ್ನಿಗಳನ್ನು ಆಯೋಜಿಸಿದ್ದು, ಮುಂದಿನ ತಿಂಗಳು ನಡೆಯಲಿರುವ ಫಿಫಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ನಡೆಯುತ್ತಿರುವ ಬಗ್ಗೆಯೂ ಫಿಬಾ ಏಷ್ಯಾ ಅಧ್ಯಕ್ಷರು ಆದ ಡಾ.ಕೆ.ಗೋವಿಂದರಾಜ್ ಮಾಹಿತಿ ಹಂಚಿಕೊಂಡರು.
  • ಪುರುಷರ ಬಾಸ್ಕೆಟ್‌ಬಾಲ್ ಫೈನಲ್ ಪಂದ್ಯ ವೀಕ್ಷಣೆ
    ಆತಿಥೇಯ ಜಪಾನ್ ಹಾಗೂ ಕೊರಿಯಾ ನಡುವಿನ ಪುರುಷರ ಬಾಸ್ಕೆಟ್‌ಬಾಲ್ ಫೈನಲ್ ಪಂದ್ಯವನ್ನು ಡಾ.ಕೆ.ಗೋವಿಂದರಾಜ್ ಅವರೊಂದಿಗೆ ಐಒಸಿ ಅಧ್ಯಕ್ಷರಾದ ಕಿರ್ಸ್ಟಿ ಕೊವೆಂಟ್ರಿ ಅವರು ವೀಕ್ಷಿಸಿದರು. ಕೊರಿಯಾ ತಂಡ 67-57 ರಿಂದ ಜಪಾನ್ ತಂಡವನ್ನು ಮಣಿಸಿ ಸ್ವರ್ಣ ಪದಕ ಗೆದ್ದುಕೊಂಡಿತು.

ಹೆಚ್ಚಿನ ಸುದ್ದಿ