KRGRV
Thursday, October 1, 2026
Homeಬೆಂಗಳೂರುಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್. ಕೌಲಗಿ ಅವರಿಗೆ ನೂತನ ಸರ್ಕಾರಿ ವಾಹನ ಹಂಚಿಕೆ

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್. ಕೌಲಗಿ ಅವರಿಗೆ ನೂತನ ಸರ್ಕಾರಿ ವಾಹನ ಹಂಚಿಕೆ

ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು (ಸಚಿವ ಶ್ರೇಣಿ) ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ.ಎಸ್. ಕೌಲಗಿ ಅವರಿಗೆ ಕರ್ನಾಟಕ ಸರ್ಕಾರದಿಂದ ನೂತನ ಸರ್ಕಾರಿ ವಾಹನ ಹಂಚಿಕೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭಾರತ್ ಟೊಯೋಟಾ ಶೋರೂಂನಲ್ಲಿ ನೂತನ ಟೊಯೋಟಾ ಇನೋವಾ ಹೈಕ್ರಾಸ್ ವಾಹನದ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇಂಡಿ ಕ್ಷೇತ್ರದ ಅಭಿಮಾನಿಗಳು ಉಪಸ್ಥಿತರಿದ್ದು ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್. ಕೌಲಗಿ ಅವರು, ಕಳೆದ ಆರು ದಶಕಗಳಿಂದ ಯಾವುದೇ ಅಧಿಕಾರ ಅಥವಾ ಪ್ರತಿಫಲದ ನಿರೀಕ್ಷೆಯಿಲ್ಲದೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದು, ತಮ್ಮ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಶ್ರೇಣಿ ನೀಡಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಇಂಡಿ ಕ್ಷೇತ್ರದ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಯಶವಂತರಾಯಗೌಡ ಪಾಟೀಲ ಅವರ ಮಾರ್ಗದರ್ಶನ ಮತ್ತು ಬೆಂಬಲವನ್ನು ಸ್ಮರಿಸಿದ ಕೌಲಗಿ ಅವರು, ತಮ್ಮ ರಾಜಕೀಯ ಪಯಣದಲ್ಲಿ ಸಹಕಾರ ನೀಡಿದ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಇಂಡಿ ಕ್ಷೇತ್ರದ ಸಮಸ್ತ ಜನತೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ನೂತನ ಸರ್ಕಾರಿ ವಾಹನದ ಪೂಜಾ ಕಾರ್ಯಕ್ರಮವು ಸರಳ ಹಾಗೂ ಗೌರವಯುತವಾಗಿ ನಡೆಯಿತು. ಉಪಸ್ಥಿತರಿದ್ದ ಗಣ್ಯರು ಬಿ.ಎಸ್. ಕೌಲಗಿ ಅವರಿಗೆ ಶುಭಾಶಯಗಳನ್ನು ತಿಳಿಸಿ, ಅವರ ಮುಂದಿನ ಸಾರ್ವಜನಿಕ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.

ಹೆಚ್ಚಿನ ಸುದ್ದಿ