ಬೆಂಗಳೂರು, ಕಿತ್ತೂರು, ಅ.12- ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವ-2026ರ ಅಂಗವಾಗಿ ವೀರ ಜ್ಯೋತಿ ಯಾತ್ರೆಗೆ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಸತೀಶ್ ಜಾರಕಿಹೊಳಿ ಹಾಗೂ ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನದ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಕಿತ್ತೂರು ಶಾಸಕರಾದ ಶ್ರೀ ಬಾಬಾಸಾಹೇಬ ಪಾಟೀಲ ಅವರ ಸಮ್ಮುಖದಲ್ಲಿ ಇಂದು ಮುಂಜಾನೆ 11 ಗಂಟೆಗೆ ವಿಧಾನ ಸೌಧದಲ್ಲಿ ವೀರ ಜ್ಯೋತಿಗೆ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ವೀರ ಜ್ಯೋತಿ ಯಾತ್ರೆಯು ಅಕ್ಟೋಬರ 12 ರಿಂದ ಅಕ್ಟೋಬರ 22 ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳ ಮುಖಾಂತರ ಸಂಚರಿಸಿ ಅಕ್ಟೋಬರ 23 ರಂದು ಮುಂಜಾನೆ 10 ಗಂಟೆಗೆ ಸೈನಿಕ ಶಾಲೆಯಿಂದ ನಿರ್ಗಮಿಸಿ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸುತ್ತದೆ ಎಂದು ತಿಳಿಸಿದರು..
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಅಭಿಮಾನಿ ಬಳಗದವರು ಹಾಗೂ ಇತರರು ಉಪಸ್ಥಿತರಿದ್ದರು..

