KRGRV
Wednesday, October 14, 2026
Homeಬೆಂಗಳೂರುಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಭೇಟಿ ಮಾಡಿದ ಟಿಬೆಟ್ ಪಾರ್ಲಿಮೆಂಟ್ ಸದಸ್ಯ ಚೋಪೆಲ್ ಥುಫ್ಟೆನ್

ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಭೇಟಿ ಮಾಡಿದ ಟಿಬೆಟ್ ಪಾರ್ಲಿಮೆಂಟ್ ಸದಸ್ಯ ಚೋಪೆಲ್ ಥುಫ್ಟೆನ್

ಬೆಂಗಳೂರು, ಅ.13: ಟಿಬೆಟ್ ಪಾರ್ಲಿಮೆಂಟ್ ಸದಸ್ಯ ಚೋಪೆಲ್ ಥುಫ್ಟೆನ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಇಂದು ಭೇಟಿ ಮಾಡಿ, ಟಿಬೆಟ್‌ನ ಧರ್ಮಗುರು ದಲೈಲಾಮಾ ಅವರ ಕರ್ನಾಟಕ ಭೇಟಿ ಹಿನ್ನೆಲೆಯಲ್ಲಿ ಬೈಲುಕುಪ್ಪೆಯ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಿದರು.

ಬೈಲುಕುಪ್ಪೆಯಲ್ಲಿ ಅಗತ್ಯ ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಬಲಪಡಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಿತು. ಧರ್ಮಗುರು ದಲೈಲಾಮಾ ಅವರ ಭೇಟಿ ಸುಸೂತ್ರವಾಗಿ ನಡೆಯಲು ಅಗತ್ಯ ಸಿದ್ಧತೆಗಳ ಕುರಿತು ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ