KRGRV
Thursday, October 15, 2026
Homeಬೆಂಗಳೂರುಸ್ಟಿಂಗ್ ಆಪರೇಷನ್ ಪ್ರಕರಣ: ಸಿದ್ದರಾಮಯ್ಯ ಅರ್ಜಿ ಇಂದು ನ್ಯಾಯಾಲಯದ ವಿಚಾರಣೆಗೆ

ಸ್ಟಿಂಗ್ ಆಪರೇಷನ್ ಪ್ರಕರಣ: ಸಿದ್ದರಾಮಯ್ಯ ಅರ್ಜಿ ಇಂದು ನ್ಯಾಯಾಲಯದ ವಿಚಾರಣೆಗೆ

ಬೆಂಗಳೂರು, ಅ.13: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಎನ್ನಲಾದ “ಸ್ಟಿಂಗ್ ಆಪರೇಷನ್” ವಿಡಿಯೊ ಪ್ರಸಾರ ಹಾಗೂ ಪ್ರಕಟಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಇಂದು ಬೆಂಗಳೂರಿನ 18ನೇ ಸಿಸಿಎಚ್ (CCH) ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಖಾಸಗಿ ಸುದ್ದಿ ವಾಹಿನಿಗಳು, ಪತ್ರಿಕೆಗಳು ಸೇರಿದಂತೆ ಒಟ್ಟು 42 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವುದಾಗಿ ಹೇಳಿಕೆ ನೀಡಿದ ಬಳಿಕ ರಾಜ್ಯ ರಾಜಕೀಯದಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, “ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎನ್ನುವುದು ನಿಜವಾಗಿದ್ದರೆ, ಅದರ ಹಿಂದೆ ಯಾರು ಇದ್ದಾರೆ ಎಂಬುದು ಬಹಿರಂಗವಾಗಬೇಕು” ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಸಲ್ಲಿಸಿರುವ ತಡೆಯಾಜ್ಞೆ ಅರ್ಜಿ ಇಂದು ನ್ಯಾಯಾಲಯದ ವಿಚಾರಣೆಗೆ ಬರುತ್ತಿದ್ದು, ನ್ಯಾಯಾಲಯದ ಆದೇಶದತ್ತ ರಾಜಕೀಯ ವಲಯ ಹಾಗೂ ಮಾಧ್ಯಮಗಳ ಗಮನ ನೆಟ್ಟಿದೆ.

ಹೆಚ್ಚಿನ ಸುದ್ದಿ