ತುಮಕೂರು :: ಕರ್ನಾಟಕ ರಾಜ್ಯ ಗುತ್ತಿಗೆದಾರರ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದಲ್ಲಿ ನೂತನವಾಗಿ ಆರಂಭವಾಗುತ್ತಿರುವ ಜಿಆರ್ ವಿ ನ್ಯೂಸ ಎಂಬ ಸುದ್ದಿವಾಹಿನಿ ಕುರಿತಾಗಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಿಗಳು ಚಾನಲ್ ಶುಭ ಹಾರೈಸಿ ಮಾನಾಡಿದ ಶ್ರೀಗಳು ಗುತ್ತಿಗೆದಾರರ ನೋವಿಗೆ ಸ್ಪಂದಿಸುವ ಉದ್ದೇಶದಿಂದ , ಗುತ್ತಿಗೆದಾರರ ಪರವಾಗಿ ಧ್ವನಿಯನ್ನ ರಾಜ್ಯಾದ್ಯಂತ ಮೊಳಗಿಸಬೇಕು ಎಂಬ ಉದ್ದೇಶದಿಂದ ಜಿಆರ್ ವಿ ನ್ಯೂಸ್ ಚಾನೆಲ್ ಆರಂಭಿಸಿರುವುದು ಸಂತಸದ ವಿಷಯ ಎಂದು ನುಡಿದ ಸಿದ್ದಗಂಗಾ ಶ್ರೀಗಳು, ಎಲ್ಲಾ ಟಿವಿಗಳು ಇದ್ದರು ಸಹ ವಿಶೇಷವಾಗಿ ಗುತ್ತಿಗೆದಾರರ ಕಷ್ಟಗಳು, ಹಾಗು ಅವರ ನೋವಿಗೆ ಸ್ಪಂದಿಸಲು ವೇದಿಕೆಯನ್ನ ಒದಗಿಸಲು ಈ ಮಾಧ್ಯಮ ಅತ್ಯಂತ ಉಪಕಾರಿಯಾಗಲಿದೆ.
ಈ ಮಾಧ್ಯಮದ ಮೂಲಕ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯಲಿ, ಅವರೆಲ್ಲ ಒಗ್ಗಟ್ಟಿನಿಂದ ಈ ದೇಶವನ್ನ, ನಮ್ಮ ನಾಡನ್ನ ಕಟ್ಟುವಂತಹ ಸೇವಾ ಕಾರ್ಯವನ್ನ ಮಾಡಲಿ, ಈ ಮೂಲಕ ಅವರಿಗೆ ಬಂದಂತಹ ಸಮಸ್ಯೆಗಳು ಈ ಮಾಧ್ಯಮಗಳ ಮೂಲಕ ಪರಿಹಾರವಾಗಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದು ಸಿದ್ದಗಂಗಾ ಶ್ರೀಗಳು ಜಿಆರ್ ವಿ ಚಾನೆಲ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.

