ಸುರಪುರ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಚ್ಚುವರಿ ಕಾಮಗಾರಿಯ ಕ್ರಿಯಾ ಯೋಜನೆ ರದ್ದುಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಭೈರಣ್ಣ ಡಿ ಅಂಬಿಗೇರ್ ಒತ್ತಾಯ.
ಸುರಪುರ : ೦೨ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮ ಪಂಚಾಯತ್ ನಲ್ಲಿ 2022-23 ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಒಗ್ಗೂಡಿಸುವಿಕೆ ಬೂದು ನೀರು ನಿರ್ವಹಣೆ ಕಾಮಗಾರಿಯ ಅಂದಾಜು ಮೊತ್ತ.
192.89 ಲಕ್ಷ ಹೆಚ್ಚುವರಿ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೆ ತರದೆ ಗ್ರಾಮ ಸಭೆಯನ್ನು ಕರೆಯದೆ ತಮ್ಮ ಮನಸ್ಸಿಗೆ ಬಂದ ಹಾಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಜಿಲ್ಲಾ ಪಂಚಾಯತನಿಂದ ಕ್ರಿಯಾ ಯೋಜನೆಗೆ ಅನುಮತಿ ಪಡೆಯಲಾಗಿದೆ
ಕಾಮಗಾರಿಗಳನ್ನು ಎಮ್ ಎನ್ಸನ್ ಎಮ್ ಆರ್ ತೆಗೆದು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟು ಉಂಟು ಮಾಡಿ ಮುಂದೆನು ಕೂಡಾ ಸರ್ಕಾರದ ಬೊಕ್ಕಸಕ್ಕೆ ನಷ್ಟು೭ ತರದ ತಕ್ಷಣ ಉಂಟು ಮಾಡುವ ಸಂಭವವಿರುವುದರಿಂದ
ಪಂಚಾಯತ ರಾಜ್ಯ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಂತ ಗ್ರಾಮ ವತಪಂಚಾಯತ ಅಭಿವೃದ್ಧಿ ಅಧಿಕಾರಿ, ಮತ್ತು ಸಂಬಂಧಪಟ್ಟ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಅಧಿಕಾರಿಗಳು ಕೂಡಾ ಈ ಒಂದು ಕಾಮಗಾರಿಯ ಅನುದಾನವನ್ನು ದುರ್ಬಳಕ್ಕೆ ಮಾಡಲು ಪ್ರೋತ್ಸಾಹ ನೀಡಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು .
ಮತ್ತು ಗುತ್ತಿಗೆದಾರರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಒಗ್ಗೂಡಿಸುವಿಕೆಯಡಿ ಬೂದು ನೀರು ನಿರ್ವಹಣ ಕಾಮಗಾರಿಯ ಅನುದಾನವನ್ನು ಮರಳಿ ಕಟ್ಟಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಇಂದು ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಕರ್ನಾಟಕ ಜನದರ್ಶನ ವೇದಿಕೆ ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷ ಭೈರಣ್ಣ ಡಿ ಅಂಬಿಗೇರ್ ಅವರು ಪತ್ರಿಕಾ ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ಶರಣು ಸಾಹುಕಾರ್ ಶಾಂತಪುರ, ಕರ್ನಾಟಕ ಜನದರ್ಶನ ವೇದಿಕೆ ಮುಖಂಡ ವೆಂಕೋಬ ದೊರೆ ಇತರರು ಉಪಸ್ಥಿತರಿದ್ದರು.

