KRGRV
Monday, December 23, 2024
Homeದೇಶಸಮಸ್ತ ನಾಡಿನ ಜನತೆಗೆ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.

ಸಮಸ್ತ ನಾಡಿನ ಜನತೆಗೆ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.

ಶಿವಭಕ್ತರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಹಾ ಶಿವರಾತ್ರಿ ವಿಶೇಷ ಹಬ್ಬವಾಗಿದೆ. ಶಿವರಾತ್ರಿ ದಿನದಂದು ಕೈಲಾಸವಾಸಿ ಪರಶಿವನನ್ನು ಕೋಟಿ ಕೋಟಿ ಭಕ್ತರು ಭಜಿಸಿ ಪೂಜಿಸುತ್ತಾರೆ. ತನ್ನನ್ನು ನಂಬಿದ ಅಪಾರ ಭಕ್ತ ಸಮೂಹದ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ದೇಶಾದ್ಯಂತ ಮಾತ್ರವಲ್ಲದೆ ವಿಶ್ವದಾದ್ಯಂತ ವಿಶೇಷ ಪೂಜೆಗಳು, ಭಜನೆಗಳು ನಡೆಯುತ್ತವೆ.

ಉಪವಾಸದ ಜೊತೆಗೆ ರಾತ್ರಿಯಿಡೀ ಜಾಗರಣೆ ಮಾಡುವುದು ಈ ಹಬ್ಬದ ವಿಶೇಷ. ಸಾಕ್ಷಾತ್ ಶಿವನು ಶಿವರಾತ್ರಿಯ ಈ ಪವಿತ್ರ ದಿನದಂದು ಭೂಲೋಕ ಸಂಚಾರ ಕೈಗೊಳ್ಳುತ್ತಾನೆ ಎಂಬುದಾಗಿ ಶಿವಪುರಾಣಗಳಿಂದ ತಿಳಿದು ಬರುತ್ತದೆ. ಲೋಕ ಕಲ್ಯಾಣಕ್ಕಾಗಿ, ಬ್ರಹ್ಮಾಂಡದ ರಕ್ಷಣೆಗಾಗಿ, ಸಮಸ್ತ ಮನುಕುಲದ ಉದ್ಧಾರಕ್ಕಾಗಿ ವಿಷವನ್ನೇ ಕುಡಿದ ಕರುಣಾಮಯಿ, ತ್ಯಾಗಮಯಿ, ದಯಾಮಯಿಯು ಆದ ನೀಲಕಂಠನಿಗೆ ನನ್ನ ಭಕ್ತಿಪೂರ್ವಕ ಶಿರಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾವೆ.

ಎಲ್ಲೆಡೆ ಸುಖ, ಶಾಂತಿ,ಸಮೃದ್ಧಿ ನೆಲೆಸಲಿ, ಎಲ್ಲರ ಬದುಕು ಬಂಗಾರವಾಗಲಿ, ಎಲ್ಲರ ಕಷ್ಟಗಳು ದೂರಾಗಿ ಸಂತೋಷದ ಜೀವನವನ್ನು ನಡೆಸುವಂತಾಗಲು ಪರಮೇಶ್ವರನ ಕೃಪೆ ನಮ್ಮೆಲ್ಲರ ಮೇಲೆ ಇರಲಿ ಎಂದು ಆ ಪರಶಿವನಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇವೆ.

ನಮ್ಮ ‌ನ್ಯೂಸ್ ಗೃಪ ತಂಡ

ಹೆಚ್ಚಿನ ಸುದ್ದಿ