KRGRV
Monday, December 23, 2024
HomeUncategorizedಉದ್ಯಮಿ ಇದ್ದರೆ ಮಾತ್ರ ಉದ್ಯೋಗ ಸೃಷ್ಟಿ: ಡಿಸಿಎಂ ಡಿ. ಕೆ. ಶಿವಕುಮಾರ್

ಉದ್ಯಮಿ ಇದ್ದರೆ ಮಾತ್ರ ಉದ್ಯೋಗ ಸೃಷ್ಟಿ: ಡಿಸಿಎಂ ಡಿ. ಕೆ. ಶಿವಕುಮಾರ್

ಬೆಂಗಳೂರು, ಆ. 2:

“ಉದ್ದಿಮೆದಾರರು ಕರ್ನಾಟಕದ ರಾಯಭಾರಿಗಳು. ಉದ್ಯಮಿ ಇದ್ದರೆ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಅವರು;

“ಕರ್ನಾಟಕ ಉದ್ದಿಮೆಗಳಲ್ಲಿ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ನಿಮ್ಮ ಶ್ರಮ ಹೆಚ್ಚಿದೆ. ನಿಮ್ಮ ಜೊತೆಗೆ ಕಾರ್ಮಿಕರ ಶ್ರಮವೂ ಬಹುಮುಖ್ಯ” ಎಂದು ಹೇಳಿದರು.

“ಕೊರೋನ ಸಮಯದಲ್ಲಿ ಕಾರ್ಮಿಕರ ಜೀವನ ಹಾಗೂ ಅವರ ಭವಿಷ್ಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಯಿತು. ಈಗ ಆ ಆತಂಕ ಸಲ್ಪ ಕಡಿಮೆಯಾಗಿದೆ. ನಿಮ್ಮಿಂದ ಹೆಚ್ಚಿನ ರಾಷ್ಟ್ರ ಹಾಗೂ ರಾಜ್ಯದ ಸೇವೆ ಅಗತ್ಯವಿದೆ” ಎಂದರು.

“ನೀವು ಉದ್ದಿಮೆಯಿಂದ ನೀವು ಒಂದಷ್ಟು ಲಾಭ ಮಾಡಬಹುದು. ನಿಮ್ಮ ಉದ್ದಿಮೆಯಿಂದ ದೇಶಕ್ಕೆ ಕೊಡುಗೆಯಿದೆ. ದೇಶದ ಸಂಪತ್ತು, ಶಕ್ತಿ, ಸಾಮರ್ಥ್ಯ ಹೆಚ್ಚುತ್ತದೆ. ನಿಮ್ಮ ಬೆಳವಣಿಗೆಗೆ ಸರ್ಕಾರ ಮತ್ತು ಡಿ. ಕೆ. ಶಿವಕುಮಾರ್ ಜೊತೆಗೆ ಇರುತ್ತಾನೆ” ಎಂದು ಹೇಳಿದರು.

“ಮುಂದಿನ ದಿನಗಳಲ್ಲಿ ಭಾರತವನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತದೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಕರ್ನಾಟಕದ ಉದ್ದಿಮೆದಾರರೇ ಕಾರಣ. ಈ ದಿನ ಶಿಕ್ಷಣ ಸಂಸ್ಥೆಗಳು ಇಲ್ಲಿನ ಸಣ್ಣ ಕೈಗಾರಿಕೆಗಳು, ದೊಡ್ಡ ಉದ್ಯಮಿಗಳು, ಐಟಿ ಬಿಟಿ ಕಂಪನಿಗಳಿಂದ ಇದು ಸಾಧ್ಯವಾಯಿತು” ಎಂದರು.

“ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು. ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಹೆಸರನ್ನು ಅಂತರರಾಷ್ಟೀಯ ಮಟ್ಟಕ್ಕೆ ಬೆಳೆಸಿದರು. ಇಂತಹ ಬೆಂಗಳೂರನ್ನು ನಾವು ಉಳಿಸಬೇಕಾಗಿದೆ” ಎಂದು ಹೇಳಿದರು.

“ನನಗೆ ಬಂಗಾರಪ್ಪ ಅವರ, ಎಸ್ಎಮ್ ಕೃಷ್ಣ ಅವರ ಸಂಪುಟದಲ್ಲಿ ಮಂತ್ರಿ ಆದಾಗ, ಡಿ ಸಿ ಎಂ ಆದಾಗ ಸಂತೋಷವಾಗಲಿಲ್ಲ. ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಡಿಗ್ರಿ ಪಡೆದಾಗ ಅತಿ ಹೆಚ್ಚು ಸಂತೋಷವಾಯಿತು. ಮನುಷ್ಯನಿಗೆ ಜ್ಞಾನ ಪ್ರಮುಖವಾದುದು” ಎಂದರು.

“ಬೆಂಗಳೂರಿನಲ್ಲಿ ಕೆಲವೊಂದು ಕಡೆ ಬಿಟ್ಟರೆ ಹಲೋ ಕಡೆ ಅಗಲವಾದ ರಸ್ತೆಗಳಿಲ್ಲ. ಈಗ ಪೆರಿಫೆರಲ್ ರಿಂಗ್ ರಸ್ತೆ ಮಾಡಲು ಯೋಜನೆ ರೂಪಿಸಲಾಗಿದೆ. ಇದು ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚು ಕೊಡುಗೆ ನೀಡುತ್ತದೆ” ಎಂದರು.

“ಉದ್ದಿಮೆದಾದರೂ ತಮ್ಮ ಸಿಎಸ್ಆರ್ ಹಣವನ್ನು ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣಕ್ಕೆ ಮೀಸಲಿಡಬೇಕು. ಇದರಿಂದ ನಮ್ಮ ಗ್ರಾಮಾಂತರ ಭಾಗದ ಮಕ್ಕಳು ಗ್ಲೋಬಲ್ ಮಟ್ಟದಲ್ಲಿ ಸ್ಪರ್ಧಿಸಲು ಅನುಕೂಲವಾಗುತ್ತದೆ” ಎಂದರು.

“ಶಿಕ್ಷಣ, ಬ್ಯಾಂಕಿಂಗ್, ಹೋಟಲ್, ಆಹಾರ ಸಂಸ್ಕರಣೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಕರ್ನಾಟಕ ಮತ್ತು ಬೆಂಗಳೂರು ಮುಂದಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕಕ್ಕೆ ಹೆಚ್ಚು ತೆರಿಗೆಯನ್ನು ಕಟ್ಟುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ನಮಗೆ ಕಡಿಮೆ ಹಣ ಬರುತ್ತಿದೆ. ಆದರೂ ನಾವು ಅಭಿವೃದ್ಧಿಯಲ್ಲಿ ಮುಂದಿದ್ದೇವೆ” ಎಂದು ಹೇಳಿದರು.

“ಕರ್ನಾಟಕದ ಉತ್ಪಾದನಾ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಿಸಿಐಸಿ ಸಂಸ್ಥೆಯು ರಾಜ್ಯ ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಉತ್ತಮ ಬಂಡವಾಳ ಹೂಡಿಕೆಯೊಂದಿಗೆ ಉದ್ಯೋಗವನ್ನು ಸೃಷ್ಟಿಸುತ್ತಿದೆ. ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರತಿನಿಧಿಸುತ್ತಿರುವ ಈ ಸಂಸ್ಥೆ ಉದ್ಯಮದಲ್ಲಿ ಹೊಸ ಭರವಸೆ ಮೂಡಿಸುತ್ತಿದೆ” ಎಂದರು.

ಹೆಚ್ಚಿನ ಸುದ್ದಿ