KRGRV
Monday, December 23, 2024
HomeUncategorizedಕಡಿಮೆ ಬೆಲೆಗೆ ಬೆಂಗಳೂರಿನಲ್ಲಿ ಮನೆ ಖರೀದಿಸುವ ಯೋಚನೆ ಮಾಡಿದ್ದಿರಾ ?- ಈ ಮಾಹಿತಿ ನೋಡಿ

ಕಡಿಮೆ ಬೆಲೆಗೆ ಬೆಂಗಳೂರಿನಲ್ಲಿ ಮನೆ ಖರೀದಿಸುವ ಯೋಚನೆ ಮಾಡಿದ್ದಿರಾ ?- ಈ ಮಾಹಿತಿ ನೋಡಿ

ಬೆಂಗಳೂರು ಅ, 25: ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಮತ್ತೊಂದೆಡೆ ನಗರದಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆ ಹುಡುಕುವವರು ಈ ಮಹತ್ವದ ಮಾಹಿತಿಯನ್ನು ಗಮನಿಸಲೇಬೇಕಾಗುತ್ತದೆ. ಹಗಾದರೆ, ಯಾವೆಲ್ಲಾ ಅಂಶಗಳನ್ನು ತಿಳಿದುಕೊಳ್ಳಬೇಕು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿದು 8 ಮಂದಿ ಮೃತಪಟ್ಟಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಬೃಹತ್‌ ಪಿಲ್ಲರ್ ಹಾಕದೇ ಅವೈಜ್ಞಾನಿಕವಾಗಿ ಕಟ್ಟಡವನ್ನು ನಿರ್ಮಿಸಿದ ಹಿನ್ನೆಲೆ ಕಟ್ಟಡ ಕುಸಿದು ಬಿದ್ದು ಅಪಾರ ಪ್ರಾಣಹಾನಿ ಸಂಭವಿಸಿದೆ.

ಆದ್ದರಿಂದ ಅಲರ್ಟ್ ಆದ ಬಿಬಿಎಂಪಿ ಬೆಂಗಳೂರಿನಲ್ಲಿ ಬಿರುಕು ಬಿಟ್ಟ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿದ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದೆ. ಆದ್ದರಿಂದ ನೀವು ಬೆಂಗಳೂರಿನಲ್ಲಿ ಮನೆ, ಕಟ್ಟಡ ಖರೀದಿಸುವ ಮುನ್ನ ಎಚ್ಚರ ಆಗಿರಬೇಕಾಗುತ್ತದೆ. ಮಾಲೀಕರು ಕಡಿಮೆ ಖರ್ಚಿನಲ್ಲಿ ಕಳಪೆ ಕಾಮಗಾರಿ ಮಾಡಿ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ

ಕಳಪೆ ಪಿಲ್ಲರ್‌ಗಳನ್ನು ನಿರ್ಮಿಸಿ, ಕಳಪೆ ವಸ್ತುಗಳನ್ನು ಬಳಸಿ 3-4 ಅಂತಸ್ತಿನ ಕಟ್ಟಡ ನಿರ್ಮಿಸಿ ಬಳಿಕ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇಂತಹ ಕಟ್ಟಡ 2-3 ವರ್ಷದಲ್ಲಿ ಕುಸಿದು ಬೀಳುವ ಸಾಧ್ಯತೆಗಳಿರುತ್ತದೆ. ಇನ್ನು ಹೆಣ್ಣೂರು ಬೆನ್ನಲ್ಲೇ ನಗರದ ಹೊರಮಾವು ನಂಜಪ್ಪ ಗಾರ್ಡನ್‌ನಲ್ಲಿರುವ ಕಟ್ಟಡವೊಂದು ಕುಸಿದಿದೆ.

ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದ್ದು, ಈ ಹಿನ್ನೆಲೆ ಕಟ್ಟಡ ತೆರವಿಗೆ ಬಿಬಿಎಂಪಿ ಸೂಚನೆ ನೀಡಿದೆ. ಆದ್ದರಿಂದ ಕಡಿಮೆ ಬೆಲೆಗೆ ಮನೆ ಅಥವಾ ಕಟ್ಟಡ ಸಿಕ್ಕಿದೆ ಎಂದು ಖರೀದಿ ಮಾಡುವ ಮುಂಚೆ ನೀವು ಎಚ್ಚರ ವಹಿಸಬೇಕಾಗುತ್ತದೆ. ಕಟ್ಟಡ ಖರೀದಿಸುವ ಮುನ್ನ ಕಟ್ಟಡದ ನಕ್ಷೆ, ಕಟ್ಟಡದ ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ.

ಅನಧಿಕೃತ ಕಟ್ಟಡ, ಲೇಔಟ್ ವಿರುದ್ಧ ಸರ್ಕಾರ ಇದೀಗ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ ಮಾಲೀಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡಗಳು ಹಾಗೂ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ವಲಯ ಆಯುಕ್ತರಿಗೆ ಜವಾಬ್ದಾರಿ ನೀಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಮಂಜೂರಾಗುವ ಕಟ್ಟಡ ನಕ್ಷೆಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ನಕ್ಷೆ ಮಂಜೂರಾದ ಒಂದು ತಿಂಗಳೊಳಗೆ ಕಟ್ಟಡ ಮಾಲೀಕರು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಬಿಲ್ಡಿಂಗ್ ಪ್ಲಿಂಥ್ ಲೈನ್ ಅನ್ನು ನಗರ ಯೋಜನೆ ಅಧಿಕಾರಿಗಳು ಗುರುತು ಮಾಡಿಕೊಡಬೇಕಾಗುತ್ತದೆ. ಬಳಿಕ ಅದನ್ನು ಕೇಂದ್ರ ಹಾಗೂ ವಲಯ ಕಚೇರಿಯ ಜಂಟಿ ನಿರ್ದೇಶಕರು ದೃಢೀಕರಿಸಬೇಕು ಎಂದು ಹೇಳಿದ್ದಾರೆ.

ವಾರ್ಡ್‌ನಲ್ಲಿ ಕಿರಿಯ, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್‌ಗಳು ಮಂಜೂರಾದ ನಕ್ಷೆಯ ವಿವರ ಪಡೆದುಕೊಂಡು ಅದರನ್ವಯ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿರುವುದನ್ನು ಆಗಾಗ ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ ಎಂದು ಸೂಚಣೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ