KRGRV
Sunday, November 16, 2025
Homeಬೆಂಗಳೂರುಬೆಂಗಳೂರು: ಅಪರಿಚಿತನ ಬಳಿ ಕ್ವಾಟರ್ ಎಣ್ಣೆ ಆಸೆಗೆ ಬಿದ್ದು ಆಟೋ ಕಳ್ಕೊಂಡ ಚಾಲಕ ; ಕಳ್ಳತನದ...

ಬೆಂಗಳೂರು: ಅಪರಿಚಿತನ ಬಳಿ ಕ್ವಾಟರ್ ಎಣ್ಣೆ ಆಸೆಗೆ ಬಿದ್ದು ಆಟೋ ಕಳ್ಕೊಂಡ ಚಾಲಕ ; ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು, ಆ.18: ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಮ್ಮ ಬಳಿಯಿರುವ ಮೊಬೈಲ್​, ಪರ್ಸ್​ ಇತ್ಯಾದಿ ವಸ್ತುಗಳು ಮಾಯವಾಗುತ್ತದೆ. ಅದರಂತೆ ಇದೀಗ ಕ್ವಾಟರ್ ಎಣ್ಣೆಗಾಗಿ ತನ್ನ ಹೊಸ ಆಟೋ (Auto) ವನ್ನು ಕಳೆದುಕೊಂಡ ಘಟನೆ ಬೆಂಗಳೂರಿನ(Bengaluru) ದಾಸರಹಳ್ಳಿ (Dasarahalli)ಯ 8ನೇ ಮೈಲಿ ಅಟೋಸ್ಟಾಂಡ್​ನಲ್ಲಿ ನಡೆದಿದೆ. ವಿಜಯ್ ಕುಮಾರ್ ಆಟೋ ಕಳೆದುಕೊಂಡವರುವರು. ನಿನ್ನೆ(ಆ.17) ಮಟ ಮಟ ಮಧ್ಯಾಹ್ನದ ವೇಳೆ ಹಳೆಯ ಅಟೋದಲ್ಲಿ ಬಂದಿದ್ದ ಅಪರಿಚಿತ ಚಾಲಕನೊಬ್ಬ, ಹಾಯ್ ಎಂದುಕೊಂಡು ಆತ್ಮೀಯವಾಗಿ ಈ ಸ್ಟ್ಯಾಂಡ್​ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತೆ ಅಂದುಕೊಂಡು ಪರಿಚಯಸ್ಥನ ತರ ನಟನೆ ಮಾಡಿ, ಆಟೋವನ್ನೇ ಕದ್ದುಕೊಂಡು ಹೋದ ಘಟನೆ ನಡೆದಿದೆ.

ಎಣ್ಣೆ ಕುಡಿಸಿ, ಆಟೋ ಕದ್ದ ಖದೀಮ

ಹೌದು, ಆತ್ಮೀಯವಾಗಿ ಮಾತನಾಡುತ್ತ, ಬಾ ಗುರು ಎಣ್ಣೆ ಹೊಡೆಯೋಣವೆಂದು ಪಕ್ಕದಲ್ಲೇ ಇದ್ದ ಮೂನ್ ಲೈಟ್ ಬಾರ್​ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆತನ ದುಡ್ಡಲ್ಲೇ ಕ್ವಾಟರ್​ ಎಣ್ಣೆಯನ್ನು ಕುಡಿಸಿದ್ದಾನೆ. ಬಳಿಕ ಎಣ್ಣೆ ಕುಡಿದು ಹೊಸ ಅಟೋದಲ್ಲಿ ಮಲಗಬಾರದೆಂದು ವಿಜಯ್ ಕುಮಾರ್ ಅವರು ಅರೋಪಿ ತಂದಿದ್ದ ಹಳೆಯ ಅಟೋದಲ್ಲಿ ಮಲಗಿದ್ದಾರೆ. ಅಷ್ಟೇ, ಮಲಗಿ ಎದ್ದೇಳುವಷ್ಟರಲ್ಲಿ ಆತನ ಹಳೆಯ ಅಟೋ ಬಿಟ್ಟು ಹೊಸ ಆಟೋದಲ್ಲಿ ಪರಾರಿಯಾಗಿದ್ದಾನೆ.

ಆಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ

ಇನ್ನು ಅಟೋದಲ್ಲಿದ್ದ 25ಸಾವಿರ ಬೆಲೆಬಾಳುವ ಮೊಬೈಲ್ ಜೊತೆ ಆಟೋವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಇತ್ತ ಹಳೆಯ ಅಟೋ ಸುದ್ದಗುಂಟೆಪಾಳ್ಯದಲ್ಲಿ ಕದ್ದಿರುವುದು ಎಂದು ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತ ಅಪರಿಚಿತನ ಬಳಿ ಕ್ವಾಟರ್ ಎಣ್ಣೆಯ ಆಸೆಗೆ ಬಿದ್ದು ಆಟೋ ಕಳಕೊಂಡಿದ್ದಾನೆ. ಇನ್ನು ಅಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ IPC 1860 ರೀತ್ಯಾ 379ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿ