ಅಡವಿಹುಳಗಬಾಳ ಬೀರಪ್ಪನ ಬೆಟ್ಟದಲ್ಲಿ ನ.10ಕ್ಕೆ ಜಾತ್ರಾ ಮಹೋತ್ಸವ8 ನವಜೋಡಿಗಳ ಸಾಮೂಹಿಕ ವಿವಾಹ; 25 ಸಾವಿರ ಭಕ್ತರು ಸೇರುವ ನಿರೀಕ್ಷೆ

ಮುದ್ದೇಬಿಹಾಳ:ತಾಲೂಕಿನ ಅಡವಿಹುಳಗಬಾಳ ಗ್ರಾಮದ ಬೀರಪ್ಪನ ಬೆಟ್ಟದಲ್ಲಿ ನ.10ರಂದು ಬೀರಲಿಂಗೇಶ್ವರ, ಮಾಳಿಂಗರಾಯ ಹಾಗೂ ಸಿಡಿಯಾನ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಲಿದ್ದು, ಈ ಸಂದರ್ಭದಲ್ಲಿ 8 ನವಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಗೂ ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ತಿಳಿಸಿದರು. ಪಟ್ಟಣದ ಪಂಜುರ್ಲಿ ಸಭಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹಗಳು ಸರ್ಕಾರದ ನಿಯಮ ಹಾಗೂ ಆದೇಶಗಳ ಪ್ರಕಾರ ನಡೆಯಲಿವೆ. ಈಗಾಗಲೇ […]

ಅಡವಿಹುಳಗಬಾಳ ಬೀರಪ್ಪನ ಬೆಟ್ಟದಲ್ಲಿ ನ.10ಕ್ಕೆ ಜಾತ್ರಾ ಮಹೋತ್ಸವ8 ನವಜೋಡಿಗಳ ಸಾಮೂಹಿಕ ವಿವಾಹ; 25 ಸಾವಿರ ಭಕ್ತರು ಸೇರುವ ನಿರೀಕ್ಷೆ

ಮುದ್ದೇಬಿಹಾಳ:ತಾಲೂಕಿನ ಅಡವಿಹುಳಗಬಾಳ ಗ್ರಾಮದ ಬೀರಪ್ಪನ ಬೆಟ್ಟದಲ್ಲಿ ನ.10ರಂದು ಬೀರಲಿಂಗೇಶ್ವರ, ಮಾಳಿಂಗರಾಯ ಹಾಗೂ ಸಿಡಿಯಾನ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಲಿದ್ದು, ಈ ಸಂದರ್ಭದಲ್ಲಿ 8 ನವಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಗೂ ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ತಿಳಿಸಿದರು. ಪಟ್ಟಣದ ಪಂಜುರ್ಲಿ ಸಭಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹಗಳು ಸರ್ಕಾರದ ನಿಯಮ ಹಾಗೂ ಆದೇಶಗಳ ಪ್ರಕಾರ ನಡೆಯಲಿವೆ. ಈಗಾಗಲೇ […]

ಸತ್ಸಂಗದಿಂದ ಜ್ಞಾನ, ಜ್ಞಾನದಿಂದ ಆನಂದಮಯ ಜೀವನ: ಅಮೃತಾನಂದ ಸ್ವಾಮೀಜಿ

ಚನ್ನಮ್ಮನ ಕಿತ್ತೂರು: ಹಣ ಮತ್ತು ಆಸ್ತಿ ಸಂಪಾದಿಸುವುದಷ್ಟೇ ನಿಜವಾದ ಶ್ರೀಮಂತಿಕೆಯಲ್ಲ. ಜ್ಞಾನವನ್ನು ಪಡೆದು, ಇರುವುದರಲ್ಲಿ ತೃಪ್ತಿ ಕಂಡುಕೊಂಡು, ಇತರರ ಸಂತೋಷದಲ್ಲಿ ಸಂತೋಷಪಡುವುದೇ ನಿಜವಾದ ಶ್ರೀಮಂತಿಕೆ ಎಂದು ಬಾಲಗಾಂವ್ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿ ಹೇಳಿದರು. ಚೆನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಹೊಳಿಹೊಸೂರು ರಸ್ತೆಯಲ್ಲಿರುವ ಅನುಭವ ಮಂಟಪ ಮಂಗಳ ಕಾರ್ಯಾಲಯದಲ್ಲಿ ಬುಧವಾರ (ಅ. 28) ನಡೆದ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಮಾತನಾಡಿದರು. ಸಂತರ ಮತ್ತು ಶರಣರ ಬೋಧನೆಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಸತ್ಸಂಗವು ಮನುಷ್ಯನ ಅಜ್ಞಾನವನ್ನು […]

ಲಿಂಗೈಕ್ಯ ಪೂಜ್ಯ ಶ್ರೀ ಪ್ರಭುದೇವರ ಪುಣ್ಯಸ್ಮರಣೆ ತಮ್ಮ ಬದುಕನ್ನು ಸಮಾಜಕ್ಕಾಗಿ ಸಮರ್ಪಿಸಿದ ಮಹಾನ್ ಚೇತನ

ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬದುಕುತ್ತಾರೆ. ಕೆಲವರು ತಮ್ಮ ಕುಟುಂಬಕ್ಕಾಗಿ ಬದುಕುತ್ತಾರೆ. ಆದರೆ ಅಪರೂಪದ ಮಹಾತ್ಮರು ಮಾತ್ರ ಸಮಾಜದ ಸುಖ, ಶಾಂತಿ ಮತ್ತು ಕಲ್ಯಾಣವನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಳ್ಳುತ್ತಾರೆ. ಅಂತಹ ಅಪರೂಪದ ಮಹಾನ್ ಚೇತನರಲ್ಲಿ ಲಿಂಗೈಕ್ಯ ಪೂಜ್ಯ ಶ್ರೀ ಪ್ರಭುದೇವರು ಒಬ್ಬರು. ಸುಮಾರು ಎಂಬತ್ತೇಳು ವರ್ಷಗಳ ಸಾರ್ಥಕ ಬದುಕನ್ನು ನಡೆಸಿದ ಪೂಜ್ಯ ಶ್ರೀ ಪ್ರಭುದೇವರು ಮಾನವೀಯತೆ, ಕರುಣೆ ಮತ್ತು ಸೇವಾಮನೋಭಾವದ ಪ್ರತಿರೂಪವಾಗಿದ್ದರು. ಪರರ ನೋವನ್ನು ತಮ್ಮ ನೋವೆಂದು ಭಾವಿಸುವ ಹೃದಯ, ಸಂಕಷ್ಟದಲ್ಲಿರುವವರ ಬದುಕಿಗೆ ಆಸರೆಯಾಗುವ ಮನಸ್ಸು ಹಾಗೂ ಸಮಾಜದ […]

ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ 10 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಭೂಮಿಪೂಜೆ

ಅಥಣಿ ಪಟ್ಟಣದ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಪುರಸಭೆ ಆದ್ಯತೆ — ದತ್ತಾ ವಾಸ್ಟರ್ ಅಥಣಿ: ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಪುರಸಭೆಯ ಅನುದಾನದಡಿ ಸುಮಾರು 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಸಿ ರಸ್ತೆ ಕಾಮಗಾರಿಗೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಅವರು, “ಶ್ರೀ ಸಿದ್ದೇಶ್ವರ ದೇವಸ್ಥಾನವು ಅಥಣಿ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿನಿತ್ಯ ಹೆಚ್ಚಿನ […]

ಮಾಧ್ಯಮ ಪ್ರಕಟಣೆ

19 ಗುರುಪೀಠಗಳು, ಒಂದೇ ಆಧ್ಯಾತ್ಮಿಕ ಯಾತ್ರೆ: ಹಿಂದುಳಿದ ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯಗಳ ಸ್ವಾಮೀಜಿಗಳಿಗೆ ತಿರುಮಲ ದರ್ಶನ ತಿರುಮಲ, ಸೆಪ್ಟೆಂಬರ್ 29: ಕರ್ನಾಟಕದ ವಿವಿಧ ಭಾಗಗಳ ಹಿಂದುಳಿದ ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯಗಳನ್ನು ಪ್ರತಿನಿಧಿಸುವ 19 ಬ್ರಹ್ಮಚಾರಿ ಪೀಠಾಧೀಶರು ಮತ್ತು ಸ್ವಾಮೀಜಿಗಳು ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ವಿವಿಧ ಗುರುಪೀಠಗಳ ಆಧ್ಯಾತ್ಮಿಕ ನಾಯಕರನ್ನು ಒಂದೇ ಯಾತ್ರೆಯಲ್ಲಿ ಒಗ್ಗೂಡಿಸಿದ ಈ ಭೇಟಿ ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಮಹತ್ವ ಪಡೆದುಕೊಂಡಿತು. ಈ ಯಾತ್ರೆಗೆ ಟಿಟಿಡಿ ಮಂಡಳಿ ಸದಸ್ಯ ಎಸ್. […]

ಜೋಕುಮಾರಸ್ವಾಮಿ: ಮಳೆ, ಮಣ್ಣು ಮತ್ತು ಕೋಲಿ–ಬೆಸ್ತರ ಜನಪದ ಪರಂಪರೆಯ ಜೀವಂತ ಸಂಕೇತ

✍️ ವಿಶೇಷ ವರದಿ: ಅಮರೇಶಣ್ಣ ಕಾಮನಕೇರಿ ಉತ್ತರ ಕರ್ನಾಟಕದ ಜನಪದ ಸಂಸ್ಕೃತಿಯಲ್ಲಿ ಮಳೆ, ಕೃಷಿ ಮತ್ತು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಅತ್ಯಂತ ಅಪರೂಪದ ಆಚರಣೆಗಳಲ್ಲಿ ಜೋಕುಮಾರಸ್ವಾಮಿ ಹಬ್ಬ ಪ್ರಮುಖವಾಗಿದೆ. ಗ್ರಾಮೀಣ ಬದುಕಿನ ಆತ್ಮವೆಂದೇ ಪರಿಗಣಿಸಲ್ಪಡುವ ಈ ಹಬ್ಬ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ರೈತರ ಬದುಕಿನ ತತ್ವ, ಭೂಮಿತಾಯಿಯ ಆರಾಧನೆ, ಮಳೆಯ ಮೇಲಿನ ಆಶಾಭಾವನೆ ಮತ್ತು ಶತಮಾನಗಳ ಜನಪದ ಜ್ಞಾನದ ಜೀವಂತ ಅಭಿವ್ಯಕ್ತಿಯಾಗಿದೆ. ಜನಪದ ನಂಬಿಕೆಗಳ ಪ್ರಕಾರ, ಜೋಕುಮಾರಸ್ವಾಮಿಯನ್ನು ಬುಡಕಟ್ಟು ಜನಾಂಗದ ಕೋಲಿ–ಬೆಸ್ತ ಮನೆತನದ ಮಗನೆಂದು ಅನೇಕ ಗ್ರಾಮಗಳಲ್ಲಿ […]

ನೂತನ ಸಚಿವ ಅಜಯ ಸಿಂಗ್‌ಗೆ ತುಳಜಾ ಭವಾನಿ ದೇವಸ್ಥಾನದಲ್ಲಿ ಭವ್ಯ ಸ್ವಾಗತ, ಸನ್ಮಾನ

ಲಿಂಗಸುಗೂರು, ಆ. 7: ರಾಜ್ಯದ ನೂತನ ಸಚಿವ ಅವರು ಗುರುವಾರ ಲಿಂಗಸುಗೂರಿನ ಐತಿಹಾಸಿಕ ತುಳಜಾ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಭಕ್ತರು ಹಾಗೂ ಮುಖಂಡರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಅವರು ಸಚಿವರೊಂದಿಗೆ ಸಾಥ್ ನೀಡಿದರು. ಸತ್ಯನಾರಾಯಣ್ ಸಿಂಗ್, ದಶರಥ ಮಿರಜಕರ, ಆನಂದ್, ರಾಘವೇಂದ್ರ, ಶ್ಯಾಮ್, ರಾಜಶೇಖರ್, ಶ್ರೀನಿವಾಸ್, ನಾರಾಯಣ್, ಯಲ್ಲಪ್ಪ, ಆನಂದ್, ಶೋಭಾ ಆನಂದ್, ಸುಗುಂದಿ ವಿಜಯಕುಮಾರ್ ಸೇರಿದಂತೆ […]

ಮಾನವೀಯತೆ, ಸಮಾನತೆ ಇದೇ ನಿಜವಾದ ಧರ್ಮ: ಸಿಎಂ ಡಿ‌ ಕೆ ಶಿವಕುಮಾರ್

ನನಗೆ ಮುಖ್ಯಮಂತ್ರಿ ಸ್ಥಾನ; ರಂಭಾಪುರಿ ಶ್ರೀಗಳ ಆಸೆಯಾಗಿತ್ತು ವೀರಶೈವ- ಲಿಂಗಾಯತ ಧರ್ಮ ಗೊಂದಲ; ಶ್ರೀಗಳ ಕ್ಷಮೆ ಕೇಳಿದ್ದೆ ಬರ ಪ್ರಕೃತಿ ನಿಯಮ ಬೆಂಗಳೂರು, ಆ.2 “ಧರ್ಮ ಎಂದರೆ ಪೂಜೆ-ಪುನಸ್ಕಾರವಲ್ಲ. ಸತ್ಯ, ಶಿಸ್ತು, ನೀತಿ, ಪ್ರಾಮಾಣಿಕತೆ. ಜೊತೆಗೆ ಎಲ್ಲರನ್ನು ಸಮನಾಗಿ ಕಾಣುವ ಮಾನವೀಯತೆಯೇ ನಿಜವಾದ ಧರ್ಮ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಭಾರತ್ ನಗರದಲ್ಲಿ ಭಾನುವಾರ ನಡೆದ ಧರ್ಮಜಾಗೃತಿ ಸಮಾರಂಭವನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು. “ಮಾನವ ಧರ್ಮಕ್ಕೆ […]

ಅಗ್ನಿಪರೀಕ್ಷೆ: ರಾಷ್ಟ್ರ ಸೇವಾ ತಪಸ್ವಿಯೊಬ್ಬರ ಧರ್ಮನಿಷ್ಠೆಗೆ ಸಾಕ್ಷಿ ಶ್ರೀರಾಮನೇ!

“ರಾಷ್ಟ್ರವೇ ಮೊದಲು, ಸ್ವಾರ್ಥ ನಂತರ” ಎಂಬ ತತ್ವವನ್ನು ಬರಿಯ ಘೋಷಣೆಯಾಗಿ ಉಳಿಸಿಕೊಳ್ಳದೆ, ಅಕ್ಷರಶಃ ತಮ್ಮ ಬದುಕಿನ ಉಸಿರಾಗಿಸಿಕೊಂಡವರು ಆದರಣೀಯ ಗೋಪಾಲ್‌ ಜೀ. ಎಂ.ಎಸ್.ಸಿ ಪದವಿಯಲ್ಲಿ ಚಿನ್ನದ ಪದಕ ಗಳಿಸಿ, ಉನ್ನತ ಉದ್ಯೋಗ ಮತ್ತು ಸುಖೀ ಜೀವನದ ಎಲ್ಲಾ ಬಾಗಿಲುಗಳು ತೆರೆದಿದ್ದರೂ, ಅದೆಲ್ಲವನ್ನೂ ಲೀಲಾಜಾಲವಾಗಿ ತ್ಯಜಿಸಿ ರಾಷ್ಟ್ರ ಸೇವೆಯ ಹಾದಿಯನ್ನು ತುಳಿದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಿಷ್ಠಾವಂತ ಪ್ರಚಾರಕರಾಗಿ ಅವರು ಸಾಗುತ್ತಿರುವ ದಾರಿ ದಿಗಂತದಷ್ಟು ವಿಶಾಲವಾದುದು. ಇಂದು ವಿಶ್ವ ಹಿಂದೂ ಪರಿಷತ್‌ನ (VHP) ಕೇಂದ್ರೀಯ ಸಹ ಕಾರ್ಯದರ್ಶಿಗಳಾಗಿ […]