KRGRV
Monday, December 23, 2024
Homeಜಿಲ್ಲಾ ಸುದ್ದಿಗಳುCM ಸಿದ್ದು ಗೆ ಮೂಡಾ ಚಿಂತೆ, ಸಚಿವ ರಹೀಂ ಖಾನ್ ಗೆ ಇತ್ತಾ ಕಚೇರಿಯ ರಿನೋವೇಷನ್...

CM ಸಿದ್ದು ಗೆ ಮೂಡಾ ಚಿಂತೆ, ಸಚಿವ ರಹೀಂ ಖಾನ್ ಗೆ ಇತ್ತಾ ಕಚೇರಿಯ ರಿನೋವೇಷನ್ ಚಿಂತೆ.

ಬೆಂಗಳೂರು ::  ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸಿದೆ, ಜನರಿಗೆ ಉತ್ತಮ‌ ಆಡಳಿತ ನೀಡಿ ಜನರ ಅವಶ್ಯಕತೆಗಳಿಗೆ ಹಣ ಖರ್ಚು ಮಾಡಬೇಕಾದ ಸಚಿವರು   ವಿಧಾನಸೌ ಮತ್ತು ವಿಕಾಸಸೌಧದಲ್ಲಿರುವ ಸಚಿವರ ಕಚೇರಿ ನವೀಕರಣ ಕಾರ್ಯ ಮಾತ್ರ ಮಹತ್ವ ಕೋಡುತ್ತಿದ್ದು ಇನ್ನೂ ಪೂರ್ಣಗೊಳಿಲ್ಲ. ಇತ್ತಾ ಸಿ.ಎಂ ಸಿದ್ಧರಾಮಯ್ಯ ಮೂಡಾ ಪ್ರಕರಣದ ಚಿಂತೆಯಲ್ಲಿದ್ದರೆ , ಅವರ ಸಂಪುಟದ ಸಚಿವರು ಮಾತ್ರ ಕಚೇರಿ ನವೀಕರಣದ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಕಸ್ಟೋಮೈಜ್ಡ್ ವಿಂಡೋಸ್ ಸ್ಕ್ರೀನ್ , ಇಂಟಿರೀಯರ್ ಡಿಸೈನ್ ಮಾಡುವುದು, ವಾಲ್ ಪೇಪರ್ ಹಾಕುವುದು, ಪೇಂಟಿಂಗ್ ಮತ್ತು ಹೊಸ ಪೀಠೋಪಕರಣ ಹಾಕುವುದು ನವೀಕರಣ ಕಾರ್ಯದಲ್ಲಿ ಒಳಗೊಂಡಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೆಲವು ಸಚಿವರು ಮೇ ಎರಡನೇ ವಾರದಲ್ಲಿ ಮತ್ತು ಉಳಿದವರು ಮೇ ಅಂತ್ಯದ ವೇಳೆಗೆ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರದ ಬಳಿಕ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕಚೇರಿಗಳನ್ನು ಹಂಚಿಕೆ ಮಾಡಲಾಗಿತ್ತು. ಅವರಲ್ಲಿ ಹೆಚ್ಚಿನವರು ಜೂನ್‌ನಲ್ಲೇ ತಮ್ಮ ಕಚೇರಿಗಳಲ್ಲಿ ಕೆಲಸ ಆರಂಭಿಸಿ ಕಾಮಗಾರಿ ಮುಕ್ತಾಯಗೊಳ್ಳಿಸಿದರು.

ಆದರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಇನ್ನೂ ತಮ್ಮ ವಿಕಾಸಸೌಧದ ಕೊಠಡಿ ಸಂಖ್ಯೆ 38 ಮತ್ತು 39 ನ್ನು ರೀನೋವೇಷನ್ ಮಾಡಿಸುತ್ತಿದ್ದಾರೆ. ವಿಕಾಸಸೌಧದ ನೆಲ ಮಹಡಿಯಲ್ಲಿ ಅವರಿಗೆ ಮಂಜೂರಾಗಿದ್ದ ಕಚೇರಿ ಜಾಗವನ್ನು ನವೀಕರಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಸಚಿವ ರಹೀಂ ಖಾನ್ ಗೆ ಕೊಠಡಿ ಮಂಜೂರು ಮಾಡಲಾಗಿತ್ತು. ಅವರು ಈಗ ಅದನ್ನು ಖಾಸಗಿ ಗುತ್ತಿಗೆದಾರರಿಂದ ನವೀಕರಿಸುತ್ತಿದ್ದಾರೆ, ಲೋಕೋಪಯೋಗಿ ಇಲಾಖೆ ನವೀಕರಣ ಕಾರ್ಯ ಮಾಡುತ್ತಿಲ್ಲ (PWD) ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ .

ನವೀಕರಣ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಸಚಿವರ ಕಚೇರಿ ಹಾಗೂ ಅವರ ಆಪ್ತ ಕಾರ್ಯದರ್ಶಿ ಡಾ.ಕೆ ಮುರಳೀಧರ್ ಅವರ ಕಚೇರಿ ಸಹ, ಈಗ ಹೊಸ ವಾಲ್ ಪೇಪರ್ ಗಳು, ಹೊಸ ವಿಂಡೋಸ್ ಸ್ಕ್ರೀನ್ ಮತ್ತು ಪೀಠೋಪಕರಣಗಳಿಂದ ಕಂಗೊಳಿಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಕಾಮಗಾರಿಯ ಹೊರತಾಗಿಯು ಇನ್ನು ವಿಧಾನಸೌಧ ಮತ್ತು ವಿಕಾಸಸೌಧ ಕೆಲ ಕೊಠಡಿಗಳನ್ನು ನವೀಕರಿಸಲಾಗುತ್ತಿದೆ. ಸಚಿವರಿಗೆ ಮಂಜೂರು ಮಾಡಲಾದ ಕೆಲವು ಕೊಠಡಿಗಳು ಅವರ ನಿರ್ದೇಶನದಂತೆ ಪ್ರಮುಖ ನವೀಕರಣ ಕಾರ್ಯವನ್ನು ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ಒಂದಾದರಂತೆ ಒಂದು ಸಮಸ್ಯೆ ಉದ್ಭವಿಸುತ್ತನೆ ಇದೆ, ಎಲ್ಲಾ ಸಚಿವರು ಕೂಡಾ ಫುಲ್ ಅಲರ್ಟ್ ಮೂಡ್ ನಲ್ಲಿದ್ದಾರೆ, ಇತ್ತಾ ಸಿ. ಎಂ ಸಿದ್ಧರಾಮಯ್ಯ ಮೂಡಾ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿರುವ ಸಮಯದಲ್ಲಿ ಸಚಿವ ರಹೀಂ ಖಾನ್ ಮಾತ್ರ ಇನ್ನು ರೀನೋವೆಷನ್ ಮೂಡ್ ನಲ್ಲಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಹೆಚ್ಚಿನ ಸುದ್ದಿ