ಧಾರವಾಡ : ಡ್ರಗ್ಸ್ ವಿರುದ್ಧ ರಾಜ್ಯಾದ್ಯಂತ ಸಮರ ಸಾರಿದ್ದು, ಇದನ್ನು ಕಟ್ಟುನಿಟ್ಟಾಗಿ ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಡ್ರಗ್ಸ್ ಹಾವಳಿ ಇದ್ದು, 6 ತಿಂಗಳಲ್ಲಿ ಇದನ್ನು ಶೂನ್ಯ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವೆ , ಧಾರವಾಡ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಗಿಂತ ಕ್ರಿಮಿನಲ್ ಪ್ರಕರಣದಲ್ಲಿ ಸಂಖ್ಯೆ ಕಡಿಮೆ ಇದೆ, ಕ್ರಿಮಿನಲ್ ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ ಎಂದರು.
ಸೈಬರ್ ಕ್ರೈಂನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವ ಹಿನ್ನೆಲೆ ಅಂತಹವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹೊಸ ಪೊಲೀಸ್ ಠಾಣೆ ಮಾಡಲು ಕೆಲವು ನಿಯಮಗಳಿವೆ, ಧಾರವಾಡದಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಸ್ತಾವನೆ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಿಎಸೈ ನೇಮಕಾತಿ ಪ್ರಕರಣ ಹಿನ್ನೆಲೆ ತನಿಖೆ ನಡೆಯುತ್ತಿದೆ, ಸ್ಕ್ಯಾಂನಲ್ಲಿ ಇಲ್ಲದೇ ಇರುವವರಿಗೆ ಮರು ಪರೀಕ್ಷೆ ಮಾಡುವ ವಿಚಾರ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ, ಕೋರ್ಟ್ ಮುಖಾಂತರ ಆದೇಶ ಬಂದ್ರೆ 1 ತಿಂಗಳೊಳಗೆ ಮರುಪರೀಕ್ಷೆ ಮಾಡಲು ನಿರ್ಧಾರ ಕೈಗೊಳ್ಳುತ್ತೇವೆ 2 ವರೆ ಸಾವಿರ ಬೆಂಗಳೂರಿಗೆ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುವುದು, ಹಾಗೂ ರಾಜ್ಯಾದ್ಯಂತ 3 ವರೆ ಸಾವಿರ ಪೊಲೀಸ್ ಸಿಬ್ಬಂದಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ ಅಮಾಯಕರ ಮೇಲೆ ಅನಾವಶ್ಯಕವಾಗಿ ಹಾಕಿರುವ ಹಳೆಯ ಕೇಸಗಳನ್ನು ವಾಪಸ್ ಪಡೆಯಲಾಗುವುದು, ಪೊಲೀಸ್ ಇಲಾಖೆ ಮಾಹಿತಿ ಅನ್ವಯ ಕ್ಯಾಬಿನೆಟ್ ನಲ್ಲಿ ನಿರ್ಣಯ ತೆಗೆದುಕೊಂಡು ಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.