Megha Shetty Photos: ನಟಿ ಮೇಘಾ ಶೆಟ್ಟಿ ನಟನೆ ಮತ್ತು ಸೌಂದರ್ಯದಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಅನು ಸಿರಿಮನೆ ಎಂದೇ ಚಿರಪರಿಚಿತರಾಗಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೂ ಈ ಚೆಲುವೆ ಕಾಲಿರಿಸಿದ್ದಾರೆ. ಸದ್ಯ ಸಿನಿಮಾ ಜೊತೆಗೆ ಫೋಟೋಶೂಟ್ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ ಅನ್ನು ಫೋಟೋಗಳ ಮೂಲಕವೇ ರಿವೀಲ್ ಮಾಡುತ್ತಿರುತ್ತಾರೆ.




ಟ್ರೆಡಿಷನಲ್ ಜೊತೆಗೆ ಮಾಡರ್ನ್ ಫೋಟೋಗಳ ಮೂಲಕ ನೋಡುಗರನ್ನು ಆಕರ್ಷಿಸುತ್ತಾರೆ. ಇನ್ಸ್ಟಾದಲ್ಲಿ 1.1 ಮಿಲಿಯನ್ಗೂ ಹೆಚ್ಚು ಪಾಲೋವರ್ಸ್ ಪಡೆದುಕೊಂಡಿದ್ದಾರೆ. ಇವರು ಹಂಚಿಕೊಳ್ಳುವ ಎಲ್ಲಾ ಫೋಟೋಗಳು ಬಹುಬೇಗನೆ ಸೋಷಿಯಲ್ ಮೀಡಿಯಾದಲ್ಲಿ ಜಾಗ ಪಡೆದುಕೊಳ್ಳುತ್ತವೆ. ಫ್ಯಾನ್ಸ್ ಕೂಡ ನಟಿಯ ಹೊಸ ಚಿತ್ರಗಳಿಗಾಗಿ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ನೀವು ಇವರ ಇನ್ಸ್ಟಾ ಓಪನ್ ಮಾಡಿದರೆ ಸಾಕು, ಬಗೆ ಬಗೆಯ ಫೋಟೋಗಳನ್ನು ಕಾಣಬಹುದು. ಇತ್ತೀಚೆಗೆ ಸಿಂಪಲ್ಲಾಗಿ ಮುದ್ದಾದ ಲುಕ್ನಲ್ಲಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಬ್ಯೂಟಿಗೆ ಅಭಿಮಾನಿಗಳು ಲೈಕ್ಸ್ ಮೂಲಕವೇ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಕಮೆಂಟ್ ಮೂಲಕ ಚೆಲುವೆಯ ಅಂದ ಚಂದವನ್ನು ಹಾಡಿ ಹೊಗಳಿದ್ದಾರೆ.

