ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ ಆಪರೇಷನ್, ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ? ಲಿಸ್ಟ್ನಲ್ಲಿ ಯಾರ್ಯಾರು?

ಬೆಂಗಳೂರು ; ಆ.17 : ಕರ್ನಾಟಕದಲ್ಲಿ (Karnataka Politics) ಮತ್ತೆ ಆಪರೇಷನ್ (Operation Hasta) ಬಿರುಗಾಳಿ ಎದ್ದಿದೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಗೆ (Loksabha Elections 2023) ಸಿದ್ಧವಾಗುತ್ತಿದೆ. ಲೋಕಸಭೆ ಗೆಲುವಿನ ತಂತ್ರದ ಭಾಗವಾಗೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಭರ್ಜರಿ ಪ್ಲ್ಯಾನ್ ರೂಪಿಸಿದ್ದು.. ಖುದ್ದು ಡಿಕೆ ಶಿವಕುಮಾರ್ ಆಪರೇಷನ್ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಆಪರೇಷನ್ಗೆ ಇಂಬುಕೊಡುವಂತೆ ಡಿಕೆ ಸಹೋದರ […]
‘ಬಾಂಬೆ ಬಾಯ್ಸ್’ ಆಪರೇಷನ್ ಗೆ ‘ಕೈ’ ಪಡೆ ಪ್ಲಾನ್ : ರಾಜ್ಯ ರಾಜಕಾರಣದಲ್ಲಿ ಸಂಚಲನ

ಬೆಂಗಳೂರು : August 16: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಂಡಾಯವೆದ್ದು ಕೇಸರಿ ಪಾಳಯ ಸೇರಿದ್ದ ಬಾಂಬೆ ಬಾಯ್ಸ್ ಮತ್ತೆ ಕೈ ಹಿಡಿಯುವ ಸುದ್ದಿ ಹಬ್ಬಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕಮಾಲ್ ಮಾಡಿರುವ ಕೈಪಡೆ, ಲೋಕ ಸಮರದಲ್ಲಿ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದೆ. ಇದಕ್ಕಾಗಿ ತೆರೆಮರೆಯಲ್ಲಿ ದೊಡ್ಡ ಮಟ್ಟದ ಕಸರತ್ತು ಆರಂಭಿಸಿದೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿ-ಜೆಡಿಎಸ್ ನಲ್ಲಿ ಮುನಿಸಿಕೊಂಡಿರುವ ನಾಯಕರನ್ನು ಪಕ್ಷಕ್ಕೆ ಕರೆ ತರುವ ಪ್ಲಾನ್ ಮಾಡಿದೆ ಎನ್ನಲಾಗ್ತಿದೆ. ಕಮಲ ಪಾಳಯದ ಘಟಾನುಘಟಿಗಳಿಗೆ ಈಗಾಗಲೇ ಗಾಳ […]
ಬಿಜೆಪಿ ಶಾಸಕ Vs ಬಿಜೆಪಿ ಸಂಸದ ; ‘ ಭಗವಂತ್ ಖೂಬಾ ಗುಂಡಾಗಳನ್ನ ಹಾಕ್ಕೊಂಡು ತಿರುಗುತ್ತಿದ್ದಾರೆ’ ಎಂದ ಪ್ರಭು ಚೌವ್ಹಾಣ್!

ಬೆಂಗಳೂರು: ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕ v/s ಬಿಜೆಪಿ ಎಂಪಿ ಜಗಳ ತಾರಕಕ್ಕೇರಿದ್ದು, ಲೋಕಸಭಾ ಸದಸ್ಯ, ಕೇಂದ್ರ ಸಚಿವ ಭಗವಂತ್ ಖೂಬಾ ಮತ್ತು ಔರಾದ್ ಶಾಸಕ ಪ್ರಭು ಚೌವ್ಹಾಣ್ ನಡುವಿನ ಮನಸ್ಥಾಪ ಬೀದಿಗೆ ಬಂದು ನಿಂತಿದೆ. ಸಚಿವ ಖೂಬಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಚೌವ್ಹಾಣ್, ಭಗವಂತ್ ಖೂಬಾ ಹಾಗೂ ಬೆಂಬಲಿಗರಿಂದ ನನಗೆ, ನನ್ನ ಕುಟುಂಬಕ್ಕೆ, ಬೆಂಬಲಿಗರಿಗೆ ಜೀವ ಬೆದರಿಕೆ ಇದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬೀದರ್ ಎಸ್ಪಿ ಹಾಗೂ ಐಜಿಗೆ ಪತ್ರ ಅವರು […]