Severe drought in Karnataka : ಕರ್ನಾಟಕದಲ್ಲಿ ತೀವ್ರ ಬರಗಾಲ, ರೈತರು, ಜನರಿಗೆ ಸಂಕಷ್ಟ!

ಬೆಂಗಳೂರು: 2023 ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲದ ವರ್ಷವಾಗಲಿದೆ. ರಾಜ್ಯದಲ್ಲಿ 2001 ರಿಂದ ಇಲ್ಲಿಯವರೆಗೆ 16 ಬರಗಾಲದ ವರ್ಷಗಳು ದಾಖಲಾಗಿದ್ದರೂ, ಈ ಬಾರಿ ಕಳೆದ 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಈ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್‌ಗಳು ಕಡಿಮೆ ಮಳೆಯನ್ನು ದಾಖಲಿಸಿವೆ, ಇದರ ಪರಿಣಾಮವಾಗಿ 236 ತಾಲ್ಲೂಕುಗಳ ಪೈಕಿ 223 ಬರಪೀಡಿತ ಎಂದು ಘೋಷಿಸಲಾಗಿದೆ. ಈ ವರ್ಷವೂ ರಾಜ್ಯ ‘ಹಸಿರು ಬರ’ ಕಂಡಿದೆ. ಕರ್ನಾಟಕಕ್ಕೆ ಬರ ಪರಿಸ್ಥಿತಿ ಅವಲೋಕಿಸಲು ಅಂತರ್‌ಸಚಿವಾಲಯದ ಕೇಂದ್ರ ತಂಡ ಆಗಮಿಸಿದ್ದಾಗ ಕಂದಾಯ […]

Karntaka BJP : ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ : ಬಿಜೆಪಿ

ಬೆಂಗಳೂರು: ಬರ ಪೀಡಿತ ಜಿಲ್ಲೆಗಳ ಘೋಷಣೆ ಹಾಗೂ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವಿಟ್ಟರ್ (ಎಕ್ಸ್)ನಲ್ಲಿ​ ವಾಗ್ದಾಳಿ ನಡೆಸಿದೆ. ಅಲ್ಲದೆ, ಬರ ಪೀಡಿತ ಭೂಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಗ್ರಾಫಿಕ್ ಮಾಡಿ, ‘ಬರ ಗ್ಯಾರಂಟಿ ಸಿಎಂ’ ಎಂದು ಬರೆದು ವ್ಯಂಗ್ಯವಾಡಿದೆ. ‘ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ. ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ’ ಎಂದು ಬರೆದುಕೊಂಡಿದೆ. ಮಂಗಳವಾರ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡದ್ದಕ್ಕೆ ಮಾಜಿ ಸಿಎಂ ಬಸವರಾಜ […]