India vs Ireland: ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ಆಯ್ಕೆ ಮಾಡಿದ ಭಾರತ; ಟೀಮ್ ಇಂಡಿಯಾಗೆ ರಿಂಕು ಸಿಂಗ್, ಪ್ರಸಿದ್ಧ್ ಕೃಷ್ಣ ಪದಾರ್ಪಣೆ

India vs Ireland: ಟೀಮ್‌ ಇಂಡಿಯಾಗೆ ಇಂದು ಇಬ್ಬರು ಯುವ ಕ್ರಿಕೆಟಿಗರು ಪದಾರ್ಪಣೆ ಮಾಡುತ್ತಿದ್ದಾರೆ. ಇಂದಿನ ಪಂದ್ಯದ ಮೂಲಕ ಐಪಿಎಲ್‌ ಸೆನ್ಸೇಷನ್‌ ರಿಂಕು ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ಪ್ರಸಿದ್ಧ್‌ ಕೃಷ್ಣ ಕೂಡಾ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಸೋತಿರುವ ಟೀಮ್ ಇಂಡಿಯಾ, ಐರ್ಲೆಂಡ್ (Ireland vs India 1st T20I)​ ವಿರುದ್ಧ ಮತ್ತೊಂದು ವಿದೇಶಿ ಸರಣಿಯಲ್ಲಿ ಶುಕ್ರವಾರದಿಂದ (ಆಗಸ್ಟ್ 18) ಕಣಕ್ಕಿಳಿಯುತ್ತಿದೆ. […]