ISSF ವಿಶ್ವ ಚಾಂಪಿಯನ್‌ಶಿಪ್‌: 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತೀಯ ಪುರುಷರ ತಂಡಕ್ಕೆ ಕಂಚಿನ ಪದಕ

ಬಾಕು:  ಗುರುವಾರ ಇಲ್ಲಿ ಆರಂಭವಾದ ISSF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಿಯಾನ ಪರಿಣಾಮಕಾರಿಯಾಗಿ ಆರಂಭವಾಗಲಿಲ್ಲ. ಏಕೆಂದರೆ ಸ್ಪರ್ಧಿಸಿದ್ದ 6 ಮಂದಿ 10 ಮೀಟರ್ ಏರ್ ಪಿಸ್ತೂಲ್ ಶೂಟರ್ ಗಳಲ್ಲಿ ಯಾರೂ ಕೂಡಾ  2024 ರ ಪ್ಯಾರಿಸ್ ಒಲಿಂಪಿಕ್ ಅರ್ಹತೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಆದರೂ ಪುರುಷರ ತಂಡ ಸ್ಪರ್ಧೆಯಲ್ಲಿ ಸಮಾಧಾನಕರ ಕಂಚಿನ ಪದಕವನ್ನು ಪಡೆಯಿತು. ಶಿವ ನರ್ವಾಲ್ (579 ಅಂಕಗಳು) ಸರಬ್ಜೋತ್ ಸಿಂಗ್ (578) ಮತ್ತು ಅರ್ಜುನ್ ಸಿಂಗ್ ಚೀಮಾ (577) ಅವರನ್ನು ಒಳಗೊಂಡ ಭಾರತೀಯ ಪುರುಷರ 10 ಮೀಟರ್ […]