ದೇವದಾಸಿಯರ ಮರು ಸರ್ವೆಗೆ ಆಗ್ರಹಿಸಿ ಶಾಸಕರಿಗೆ ಮನವಿ

ಚಿಕ್ಕೋಡಿ : ‘ದೇವದಾಸಿಯರಿಗೆ ಸಂಬಂಧಿಸಿದಂತೆ ಪುನಃ ಸರ್ವೆ ಮಾಡಿಸಿ, ಪಟ್ಟಿಯಿಂದ ಹೊರಗಿರುವ ದೇವದಾಸಿ ಮಹಿಳೆಯರನ್ನು ಸೇರಿಸಬೇಕು. ಮಾಶಾಸನ ಮಂಜೂರು ಮಾಡಬೇಕು’ ಎಂದು ದೇವದಾಸಿ ಮಹಿಳೆ ಮಹಾದೇವಿ ದೇವರವರ ಅವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಲ್ಲಿ ಮನವಿ ಮಾಡಿದರು. ಶಾಸಕರ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಿದ ಅವರು, ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು. ‘ಬಾಲ್ಯದಲ್ಲಿ ಅರಿವಿಲ್ಲದೇ ನಾವು ಅನಿಷ್ಠ ಪದ್ಧತಿಗೆ ಒಳಗಾಗಿದ್ದೇವೆ. ದೇವದಾಸಿಯರ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿ ಎಂದು 1997ರಲ್ಲಿಯ ಅಂದಿನ ಸರ್ಕಾರ ಸರ್ವೆ ಮಾಡಿಸಿ ಅವರಿಗೆ ಮಾಸಾಶನ […]

ಕಾಂಗ್ರೆಸ್ ಪಕ್ಷ ಸೇರುವುದು ಮಾಧ್ಯಮಗಳ ಊಹಾಪೋಹ ಎಂದ ಶಿವರಾಮ ಹೆಬ್ಬಾರ

ಇಂದು ಯಲ್ಲಾಪುರ ತಾಲೂಕಿನ ತಮ್ಮ ಕಛೇರಿಯಲ್ಲಿ ಮಾತನಾಡಿದ ಮಾಜಿ ಕಾರ್ಮಿಕ ಸಚಿವ ಮತ್ತು ಹಾಲಿ ಶಾಸಕ ಶ್ರೀ ಶಿವರಾಮ ಹೆಬ್ಬಾರ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕುರಿತು ಮಾತನಾಡಿ ನಾನು ಪಕ್ಷ ಬಿಡುವುದು ಮಾಧ್ಯಮಗಳ ಸೃಷ್ಟಿ ಅಂತಹ ವಿಷಯವನ್ನು ನಾನು ಇದುವರೆಗೂ ಏಲ್ಲಿಯೂ ಪ್ರಸ್ತಾಪಿಸಿಲ್ಲಾ ಎಂದು ಮಾತನಾಡಿದ್ದಾರೆ. ಬಿಜೆಪಿ ಪಕ್ಷದಲ್ಲೇ ಇಂದು ಕೊಂಡು ನನ್ನನ್ನು ಸೋಲಿಸಲು ಕೆಲವೊಂದು ಮುಖಂಡರು ಪ್ರಯತ್ನ ಮಾಡಿದ್ದಾರೆ ಅವರ ವಿರುದ್ಧ ಲಿಖಿತ ವಾಗಿ ಪಕ್ಷಕ್ಕೆ ಮತ್ತು ಮುಖಂಡರಿಗೆ ಮಾಹಿತಿ ನೀಡಿದ್ದೇನೆ […]

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಪತ್ನಿಗೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಸಂಪುಟದಲ್ಲಿ ಸ್ಥಾನ!

ಇಸ್ಲಮಾಬಾದ್: ಸಾರ್ವತ್ರಿಕ ಚುನಾವಣೆಗೂ ಮುನ್ನ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್-ಹಕ್ 18 ಸದಸ್ಯರ ಉಸ್ತುವಾರಿ ಸಚಿವ ಸಂಪುಟವನ್ನು ರಚಿಸಿದ್ದು ಇದರಲ್ಲಿ ಜಮ್ಮು-ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ, ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಪತ್ನಿ ಮುಷಾಲ್ ಹುಸೇನ್ ಕೂಡಾ ಸೇರಿದ್ದಾರೆ ಮುಷಾಲ್ `ಮಾನವ ಹಕ್ಕುಗಳ ವಿಷಯದಲ್ಲಿ ಪ್ರಧಾನಿಗೆ ವಿಶೇಷ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿ ಹೇಳಿದೆ. ಯಾಸಿನ್ ಮಲಿಕ್ ನನ್ನು ಭಾರತದ ತಿಹಾರ್ ಜೈಲಿನಲ್ಲಿ ಬಂಧನದಲ್ಲಿರಿಸಲಾಗಿದೆ. ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಪಾಕಿಸ್ತಾನ ಮೂಲದವರು. ಅವರ […]

ಶ್ರಾವಣ ಮಾಸ ಶುರುವಾಗಿದೆ, ಹಿಂದೂ ಧರ್ಮದಲ್ಲಿ ಕಲಶಕ್ಕೆ ವಿಶೇಷ ಸ್ಥಾನವಿದೆ: ವಾಸ್ತು ದೋಷ ತಡೆಯಲು ಕಲಶ ಎಲ್ಲಿಡಬೇಕು?

Kalash Puja: ಹಿಂದೂ ಧರ್ಮದಲ್ಲಿ ಕಲಶವನ್ನು ಗಣಪತಿಯ ರೂಪವೆಂದು ಪರಿಗಣಿಸಲಾಗಿದೆ. ಸಂಪ್ರದಾಯದಲ್ಲಿ ಇದನ್ನು ಮಂಗಳದ ಸಂಕೇತವಾಗಿ ಬಳಸುತ್ತಾರೆ. ಮಂಗಳಕರ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕಲಶವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಸಂಬಂಧಿಸಿದ ಎಲ್ಲಾ ರೀತಿಯ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಇಂದು ಮಾನವನ ಜೀವನ ಪಯಣ ಬಹಳಷ್ಟು ಬಾರಿ ಜೀವನಪರ್ಯಂತ ಸುಖ ದುಃಖಗಳಿಂದ ಕೂಡಿರುತ್ತದೆ. ಕೆಲವೊಮ್ಮೆ ಯಾರ ಜೀವನದಲ್ಲೂ ಕೆಲವೊಂದು ಸಮಸ್ಯೆಗಳು ದಿಢೀರನೆ ಉದ್ಭವಿಸಿಬಿಡುತ್ತವೆ. ಅವು ದೂರವಾಗುವ ಲಕ್ಷಣಗಳೇ ಇರುವುದಿಲ್ಲ. ಅಂತಹಯ […]

Vijay Raghavendra: ನಿನ್ನನ್ನೇ ಉಸಿರಾಡುತ್ತಿರುವೆ ಚಿನ್ನ; ಪತ್ನಿ ಸ್ಪಂದನಾಳಿಗೆ ಭಾವುಕ ಪದಗಳ ಸಾಲು ಅರ್ಪಿಸಿದ ವಿಜಯ್‌ ರಾಘವೇಂದ್ರ

ಪತ್ನಿ ಸ್ಪಂದನಾ ಅವರನ್ನು ನೆನೆದು ನಟ ವಿಜಯ್‌ ರಾಘವೇಂದ್ರ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಸ್ಪಂದನ, ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ ಎಂದು ಮರೆಯಾದ ಮಡದಿ ಬಗ್ಗೆ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. Vijay Raghavendra: ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ರಾಘವೇಂದ್ರ ನಿಧನರಾಗಿ ಎರಡು ವಾರ ಕಳೆಯುತ್ತ ಬಂತು. ಇಂದಿಗೂ ಆ ಎರಡೂ ಕುಟುಂಬಗಳಲ್ಲಿ ಕಣ್ಣೀರು ನಿಂತಿಲ್ಲ. ಅಲ್ಲಿ ಮಡುಗಟ್ಟಿದ ಮೌನ, ಉಮ್ಮಳಿಸಿ […]

ISSF ವಿಶ್ವ ಚಾಂಪಿಯನ್‌ಶಿಪ್‌: 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತೀಯ ಪುರುಷರ ತಂಡಕ್ಕೆ ಕಂಚಿನ ಪದಕ

ಬಾಕು:  ಗುರುವಾರ ಇಲ್ಲಿ ಆರಂಭವಾದ ISSF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಿಯಾನ ಪರಿಣಾಮಕಾರಿಯಾಗಿ ಆರಂಭವಾಗಲಿಲ್ಲ. ಏಕೆಂದರೆ ಸ್ಪರ್ಧಿಸಿದ್ದ 6 ಮಂದಿ 10 ಮೀಟರ್ ಏರ್ ಪಿಸ್ತೂಲ್ ಶೂಟರ್ ಗಳಲ್ಲಿ ಯಾರೂ ಕೂಡಾ  2024 ರ ಪ್ಯಾರಿಸ್ ಒಲಿಂಪಿಕ್ ಅರ್ಹತೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಆದರೂ ಪುರುಷರ ತಂಡ ಸ್ಪರ್ಧೆಯಲ್ಲಿ ಸಮಾಧಾನಕರ ಕಂಚಿನ ಪದಕವನ್ನು ಪಡೆಯಿತು. ಶಿವ ನರ್ವಾಲ್ (579 ಅಂಕಗಳು) ಸರಬ್ಜೋತ್ ಸಿಂಗ್ (578) ಮತ್ತು ಅರ್ಜುನ್ ಸಿಂಗ್ ಚೀಮಾ (577) ಅವರನ್ನು ಒಳಗೊಂಡ ಭಾರತೀಯ ಪುರುಷರ 10 ಮೀಟರ್ […]

Varamahalakshmi Vrata 2023: ವರಮಹಾಲಕ್ಷ್ಮೀ ಹಬ್ಬದಂದು ಮನೆಯ ಅಲಂಕಾರ ಈ ರೀತಿಯಲ್ಲಿ ಮಾಡಿ

ವರಮಹಾಲಕ್ಷ್ಮೀವ್ರತವನ್ನು ಸುಮಂಗಲಿಯರು ಬಹಳ ಶ್ರದ್ಧಾ ಪೂರ್ವಕವಾಗಿ ಆಚರಿಸುತ್ತಾರೆ. ಹಾಗೂ ಈ ದಿನ ಲಕ್ಷ್ಮೀ ದೇವಿಯನ್ನು ಮನೆಗೆ ಬರ ಮಾಡಿಕೊಳ್ಳಲು ಮನೆಯನ್ನು ಸುಂದರವಾಗಿ ಅಲಂಕಾರ ಮಾಡುತ್ತಾರೆ. ಯಾವ ಮನೆಯು ಸ್ವಚ್ಛವಾಗಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸುತ್ತಾಳೆ ಎಂಬ ಮಾತಿದೆ. ಆ ಮಾತಿಗೆ ಅನುಗುಣವಾಗಿ ಈ ಹಬ್ಬದಂದು ಪೂರ್ತಿ ಮನೆಯನ್ನು ಸ್ವಚ್ಛವಾಗಿಸುವುದರ ಜೊತಗೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಮನೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಈ ಬಾರಿ ಆಗಸ್ಟ್ 25 ರಂದು ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಲಿದ್ದು, ಈ ದಿನ ಮನೆಯನ್ನು […]

ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

ಬೆಂಗಳೂರು : ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ಶುಕ್ರವಾರ ಉದ್ಘಾಟಿಸಿದರು. ಬೆಂಗಳೂರಿನ ಕೆಂಬ್ರಿಡ್ಜ್‌ ಲೇಔಟ್‌ನಲ್ಲಿ ನಿರ್ಮಾಣವಾಗಿರುವ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು ಅಶ್ವಿನಿ ವೈಷ್ಣವ್‌ ಅವರು ಉದ್ಘಾಟಿಸಿದ್ದು, ಬಳಿಕ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಚೇರಿಯ ಮಾದರಿ​ ಬಿಡುಗಡೆ ಮಾಡಿದರು. Vidverto Player ಬೆಂಗಳೂರಿನ ಕೆಂಬ್ರಿಡ್ಜ್‌ ಲೇಔಟ್‌ನಲ್ಲಿ ನಿರ್ಮಾಣವಾಗಿರುವ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು ಅಶ್ವಿನಿ ವೈಷ್ಣವ್‌ ಅವರು […]

ದೇವಸ್ಥಾನಗಳಿಗೆ ಅನುದಾನ ತಡೆ : ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕಿಡಿ

ಚಿಕ್ಕೋಡಿ : ದೇವಸ್ಥಾನಗಳಿಗೆ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ತಡೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸರ್ಕಾರದ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಮಹತ್ವ ಇದೆ. ನಮ್ಮ ಸರ್ಕಾರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದೆವು ಎಂದು ತಿಳಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣಕ್ಕೆ ಎರಡನೇ ಕಂತು ಬಿಡುಗಡೆ ಆಗಿರಲಿಲ್ಲ, ಈಗ ಅನುದಾನ ತಡೆ […]

ʼ10 -15 ಮಂದಿ ಮಾಜಿ, ಹಾಲಿ‌ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆʼ : ಹೊಸ ಬಾಂಬ್‌ ಸಿಡಿಸಿದ ಚಿವ ಚೆಲುವರಾಯಸ್ವಾಮಿ

ಮಂಡ್ಯ : 10 ರಿಂದ 15 ಜನ ಮಾಜಿ ಹಾಗೂ ಹಾಲಿ‌ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ದರಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಗ್ಗೆ ಮಾತು ಕತೆ ನಡೆಯುತ್ತಿದೆ.ಕೆಲವೇ ದಿನಗಳಲ್ಲಿ ಎಲ್ಲವೂ ಕೂಡ ಅಂತಿಮವಾಗಲಿದೆ, ಯಾರ ಹೆಸರನ್ನು ಈಗ ಹೇಳಲು ಸಾಧ್ಯವಿಲ್ಲ, BJP, JDS ಪಕ್ಷದಿಂದ ನಮ್ಮ ಪಕ್ಷಕ್ಕೆ ಬರುವುದು ಖಚಿತ ಎಂದರು. ರಾಜ್ಯದಲ್ಲಿ ಬರ ಘೋಷಣೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಸಭೆ ನಡೆಸಿದ್ದೇವೆ, ಜೂನ್ […]