ರಾಜ್ಯಸಭೆಯ ಶೇ.12 ರಷ್ಟು ಸಂಸದರು ಕೋಟ್ಯಾಧಿಪತಿಗಳು, 75 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ

ನವದೆಹಲಿ: ರಾಜ್ಯಸಭೆಯ ಶೇ.12 ರಷ್ಟು ಹಾಲಿ ಸಂಸದರು ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಅತಿ ಹೆಚ್ಚು ಶ್ರೀಮಂತ ರಾಜ್ಯಸಭಾ ಸದಸ್ಯರನ್ನು ಹೊಂದಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಒಟ್ಟು 233 ರಾಜ್ಯಸಭಾ ಸಂಸದರ ಪೈಕಿ 225 ಸದಸ್ಯರ ಅಪರಾಧ, ಹಣಕಾಸು ಮತ್ತು ಇತರ ವಿವರಗಳನ್ನು ವಿಶ್ಲೇಷಿಸಿದೆ. ಪ್ರಸ್ತುತ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದೆ. ವರದಿಯ ಪ್ರಕಾರ, ಆಂಧ್ರಪ್ರದೇಶದ […]