Snow fall : ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಮಪಾತ

ಡಿಸೆಂಬರ್ 16 : ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಳಿಗಾಲ ಶುರುವಾಯಿತೆಂದರೆ ಹಿಮಪಾತದ ಮಧುರ ಕ್ಷಣಗಳು ಶುರುವಾಗುತ್ತವೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ಸಿಕ್ಕಿಂ ಸಹಿತ ಏಳೆಂಟು ರಾಜ್ಯಗಳಲ್ಲಿ ವರ್ಷದ ಹಿಮಪಾತ ಶುರುವಾಗಿದೆ. ಸ್ಥಳೀಯರು ಈ ಖುಷಿಯ ಕ್ಷಣಗಳನ್ನು ಅನುಭವಿಸಿದರೆ, ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಅಲ್ಲಿನ ಹಿಮ ಕ್ಷಣಗಳ ನೋಟ ಇಲ್ಲಿದೆ. ಉತ್ತರಾಖಂಡದ ಬಹುಭಾಗದಲ್ಲಿ ಈಗ ಹಿಮಪಾತ ನೋಡುವ ವಿಶೇಷ ಕ್ಷಣ., ಹಿಮಾಚಲ ಪ್ರದೇಶವೊಂದರಲ್ಲಿ ಬಿದ್ದ ಹಿಮಪಾತದ ನಡುವೆಯೂ ಸೇನಾ ಸಿಬ್ಬಂದಿ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. […]