ಮುದ್ದೇಬಿಹಾಳ: ಕರ್ನಾಟಕ ಮಾಧ್ಯಮ ಒಕ್ಕೂಟ(ರಿ), ಬೆಂಗಳೂರು ಇದರ ವಿಜಯಪುರ ಜಿಲ್ಲಾ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಹಿರಿಯ ಪತ್ರಕರ್ತ ದಿ. ಡಾ. ನಾಗರಾಜ ಬಿ. ಜಮಖಂಡಿ ಅವರ ಸ್ಮರಣಾರ್ಥ ಮಾಧ್ಯಮ ರತ್ನ, ಮಾಧ್ಯಮ ಸಾಧಕ ರತ್ನ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ಪಟ್ಟಣದ ಶ್ರೀ ವಿಜಯ ಮಹಾಂತೇಶ ಮಂಗಳ ಕಾರ್ಯಾಲಯದ ದಾಸೋಹ ಭವನದಲ್ಲಿ ಅ.25ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಅವರು ಹೇಳಿದರು.
ಒಕ್ಕೂಟದ ತಾಳಿಕೋಟಿ ತಾಲೂಕಾದ್ಯಕ್ಷ ಅಂಭಾಜಿ ಘೋರ್ಪಡೆ ಹಾಗೂ ಮುದ್ದೇಬಿಹಾಳ ತಾಲೂಧ್ಯಕ್ಷ ಪರಶುರಾಮ ಕೊಣ್ಣೂರ ಮಾತನಾಡಿ, ಜಮಖಂಡಿ ಪರಿವಾರ ಸಮಾಜ ಸೇವಾ ಪ್ರತಿಷ್ಠಾನ(ರಿ), ಮುದ್ದೇಬಿಹಾಳ ಹಾಗೂ ಡಾ. ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್ (ರಿ), ಬೆಂಗಳೂರು ಇವರ ಸಹಯೋಗದಲ್ಲಿ ಕೊಡಮಾಡುವ ಜೀವಮಾನ ಮಾಧ್ಯಮ ಸಾಧಕ ರತ್ನ ಪ್ರಶಸ್ತಿಗೆ ಬೆಳಗಾವಿಯ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ‘ಗಡಿ ಕನ್ನಡಿಗ’ ದಿನಪತ್ರಿಕೆಯ ಸಂಪಾದಕರಾದ ಮುರುಗೇಶ ಬಾಬುರಾವ ಶಿವಪೂಜಿ ಅವರನ್ನು ಆಯ್ಕೆ ಮಾಡಲಾಗಿದೆ.
ಹಾಗೂ ಮಾಧ್ಯಮ ರತ್ನ ಪ್ರಶಸ್ತಿಗೆ ಸುವರ್ಣ ನ್ಯೂಸ್ ಮುಖ್ಯ ನಿರೂಪಕಿ ಶ್ವೇತಾ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಮತ್ತು ಮಾಧ್ಯಮ ಸಾಧಕ ರತ್ನ ಪ್ರಶಸ್ತಿಗೆ ಉದಯವಾಣಿ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಮಲ್ಲಿಕಾರ್ಜುನ ತಿಪ್ಪಾರ ಹಾಗೂ ವಿಜಯವಾಣಿ ಜಿಲ್ಲಾ ವಿಶೇಷ ವರದಿಗಾರ ಪರಶುರಾಮ ಬಾಸಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಗ್ರಾಮದ ಭಾವೈಕ್ಯತಾ ಸಂಸ್ಥಾನ ಮಠದ ಗುರು ಚನ್ನವೀರ ಶಿವಾಚಾರ್ಯರರು ವಹಿಸಲಿದ್ದು, ತಾಳಿಕೋಟೆಯ ಖಾಸಾಗತೇಶ್ವರ ಮಠದ ಶ್ರೀ ಬಾಲಶಿವಯೋಗಿ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕನ್ನಡಪ್ರಭ ತಾಲೂಕು ವರದಿಗಾರ ನಾರಾಯಣ ಮಾಯಾಚಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಜಿ.ಪಂ. ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಆರ್.ಎಸ್. ಪಾಟೀಲ, ಹನುಮಂತಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಮಲ್ಲಿಕಾರ್ಜುನ ಮದರಿ, ಸಿ.ಬಿ. ಅಸ್ತಿ, ಗುರಣ್ಣ ತಾರನಾಳ, ಜಿ.ಟಿ. ಘೋರ್ಪಡೆ, ಪ್ರಭುರಾಜ ಕಲಬುರ್ಗಿ, ರಾಯನಗೌಡ ತಾತರೆಡ್ಡಿ, ವೈ.ಎಚ್. ವಿಜಯಕರ, ಕಾಮರಾಜ ಬಿರಾದಾರ, ಸಿಕಂದರ್ ಜಾನ್ನೇಕರ ಹಾಗೂ ಬಸವರಾಜ ನಾಲತವಾಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪತ್ರಕರ್ತರಿಗೆ ಪ್ರಶಸ್ತಿ ಗೌರವ:
ಸಂಯುಕ್ತ ಕರ್ನಾಟಕದ ವಿಜಯಪುರ ಜಿಲ್ಲಾ ವರದಿಗಾರ ಶರಣು ಮರನೂರ, ಕನ್ನಡಪ್ರಭದ ನಾಲತವಾಡ ಗ್ರಾಮೀಣ ವರದಿಗಾರ ಯುನುಸ್ ಮೂಲಿಮನಿ, ಚಕ್ರವರ್ತಿ ನ್ಯೂಸ್ ಸಂಪಾದಕ ಹಾಗೂ ನ್ಯಾಯವಾದಿ ಚೇತನ ಶಿವಶಿಂಪಿ, ಉತ್ತರ ಟುಡೆ ನ್ಯೂಸ್ ಡಿಜಿಟಲ್ ಮೀಡಿಯಾ ಸುದ್ದಿ ಸಂಪಾದಕ ಚೇತನ ಕೆಂದೂಳಿ, ಉದಯಕಾಲ ದಿನಪತ್ರಿಕೆಯ ಜಿಲ್ಲಾ ವರದಿಗಾರ ಮಕಬೂಲ್ ಬನ್ನೆಟ್ಟಿ, ‘ಭೀಮ ಸಂಸ್ಕೃತಿ’ ಸಂಪಾದಕ ಯಲ್ಲಾಲಿಂಗ ಪೂಜಾರಿ(ಮೌರ್ಯ) ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನವಾಗಲಿದೆ.
ಪತ್ರಿಕಾ ವಿತರಕರಿಗೂ ಪ್ರಶಸ್ತಿ:
ಪತ್ರಿಕೋದ್ಯಮದ ಜೊತೆಗೆ ಪತ್ರಿಕಾ ವಿತರಣಾ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರವಿ ಕುಂಬಾರ ಹಾಗೂ ಚಂದ್ರಶೇಖರ ಮುಖಿಹಾಳ ಅವರಿಗೆ ಅತ್ಯುತ್ತಮ ಪತ್ರಿಕಾ ವಿತರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಗೌರವ:
ಕಾರ್ಯಕ್ರಮದಲ್ಲಿ ಗುಪ್ತಚರ ಪೊಲೀಸ್ ಇಲಾಖೆಯ ಬೆಳಗಾವಿ ಡಿವೈಎಸ್ಪಿ ರಾಘವೇಂದ್ರ ಹವಾಲ್ದಾರ, ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕ ಶರಣು ಸಜ್ಜನ, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ, ಪ್ರಗತಿಪರ ರೈತ ಹಿತಚಿಂತಕ ಅರವಿಂದ ಕೊಪ್ಪ, ಕರ್ನಾಟಕ ಕೋ-ಆಪ್ ಬ್ಯಾಂಕ್ ಉಪಾಧ್ಯಕ್ಷ ಶ್ರೀಕಾಂತ ಚಲವಾದಿ, ತಾಳಿಕೋಟೆಯ ಯುವ ವರದಿಗಾರ್ತಿ ಸ್ನೇಹಾ ಹಣಮಂತ ನಲವಡೆ ಹಾಗೂ ಕ್ರೀಡಾ ಸಾಧಕರಾದ ಕುಮಾರ ವಿಕ್ರಾಂತ ಮತ್ತು ಕುಮಾರಿ ಶಕುಂತಲಾ ಶಿವಕುಮಾರ ಶಾರದಳ್ಳಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯತ್ ಸಿಇಒ ಆನಂದ ಪ್ರಕಾಶ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಡಿಎಚ್ಒ ಡಾ.ಮಲ್ಲನಗೌಡ ಬಿರಾದಾರ, ಹುಬ್ಬಳ್ಳಿ-ಧಾರವಾಡ ಪಾಲಿಕೆ ವಲಯ ಉಪ ಆಯುಕ್ತ ಅರವಿಂದ ಜಮಖಂಡಿ, ಕನ್ನಡಪ್ರಭ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ, ‘ಹಸಿರು ಕ್ರಾಂತಿ’ ಸಂಪಾದಕ ಸಂಪತ್ತಕುಮಾರ ಮುಚಳಂಬಿ, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಆಗಮಿಸÀಲಿದ್ದಾರೆ ಎಂದು ಒಕ್ಕೂಟದ ಸರ್ವ ಸದಸ್ಯರು ತಿಳಿಸಿದ್ದಾರೆ.
ಫೋಟೊ:18ಎಂಬಿಎಲ್1: ಕರ್ನಾಟಕ ಮಾಧ್ಯಮ ಒಕ್ಕೂಟದಿಂದ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು.

