ಬಾಗಲಕೋಟೆ: ಅಮಿತ್ ಶಾ ಮಾತು ಕೇಳಿ ತಪ್ಪು ಮಾಡಿ ಬಿಟ್ನಾ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿ ಬೇಸರಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಯಣ್ಣ ಬ್ರಿಗೇಡ್‌ಗೆ ಹಿಂದುಳಿದವರು, ದಲಿತರು ಹಾಗೂ ಸಮಸ್ತ ಹಿಂದೂ ಸಮಾಜ ಬೆಂಬಲ ನೀಡಿತ್ತು.
ಎಲ್ಲಾ ಪಕ್ಷದವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಇದನ್ನು ಸಹಿಸದ ಕೆಲವರು ಅಮಿತ್ ಶಾ ಅವರಲ್ಲಿ ದೂರು ನೀಡಿದ್ದರು.
ಆಗ ಕೇಂದ್ರ ನಾಯಕರಾದ ಅಮಿತ್ ಶಾ ನನ್ನನ್ನು ಕರೆದು ರಾಯಣ್ಣ ಬ್ರಿಗೇಡ್ ಯಾಕೆ ಬೇಕು? ಇದೆಲ್ಲ ಬೇಡ ಅಂತ ನನಗೆ ಹೇಳಿದ್ದರು. ಹಿರಿಯರ ಮಾತನ್ನು ಕೇಳಬೇಕು ಎಂಬುದು ನನಗೆ ಮುಂಚೆಯಿಂದ ಬಂದ ಸ್ವಭಾವ. ಆದರೆ ಈಗ ಅವರ ಮಾತನ್ನು ನಾನು ಕೇಳಿದ್ದೇ ತಪ್ಪಾಯ್ತಾ ಎಂದು ಅನಿಸುತ್ತಿದೆ ಎಂದು ಬೇಸರಿಸಿಕೊಂಡಿದ್ದಾರೆ.
ಈ ಸಂಘಟನೆ ಹೀಗೆ ಮುಂದುವರೆದಿದ್ದರೆ ದಲಿತರಿಗೆ ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತು ಎನ್ನುವ ಭಾವನೆ ನನ್ನದು. ಈ ಸಂಘಟನೆ ನಿಂತುಹೋಯಿತು. ಆದರೆ ಈಗ ಆರಂಭವಾಗಿರುವ ಬ್ರಿಗೇಡ್ ಅನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದಿದ್ದಾರೆ.