KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಕಬ್ಬಲಿಗ-ಅಂಬಿಗ ಜಾತಿಗಳನ್ನು ಎಸಟಿ ಸೇರಿಸಲು ಹೋರಾಟ ಮಾಡಿದ ವಿಟಿ ಜೀ ಮಾರ್ಗದರ್ಶನದಲ್ಲಿ ಸಮಾಜ ಸಾಗಬೇಕು :...

ಕಬ್ಬಲಿಗ-ಅಂಬಿಗ ಜಾತಿಗಳನ್ನು ಎಸಟಿ ಸೇರಿಸಲು ಹೋರಾಟ ಮಾಡಿದ ವಿಟಿ ಜೀ ಮಾರ್ಗದರ್ಶನದಲ್ಲಿ ಸಮಾಜ ಸಾಗಬೇಕು : Mlc ಸಾಯಬಣ್ಣ ತಳವಾರ

ಕಲಬುರಗಿ ಡಿ 03 : ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಕಲಬುರಗಿ ರವರು ಕಬ್ಬಲಿಗ – ಅಂಬಿಗ ಸಮಾಜದ ದಿಮಂತ ನಾಯಕ ದಿವಂಗತ ವಿಠ್ಠಲ ಹೆರೂರ ರವರ 11 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸ್ವಾಭಿಮಾನಿ ಶ್ರೀ ವಿಠ್ಠಲ ಹೇರೂರ ಮೆಟ್ರಿಕ್ ನಂತರದ ಬಾಲಕರ ಉಚಿತ ವಸತಿ ನಿಲಯ ಹಮ್ಮಿಕೊಂಡಿದರು.
ದಿವಂಗತ ವಿಠ್ಠಲ ಹೇರೂರ ರವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಂಎಲ್ ಸಿ ಸಾಯಬಣ್ಣ ತಳವಾರ ರವರು ಕಬ್ಬಲಿಗ- ಅಂಬಿಗ ಸಮಾಜವನ್ನು ಎಸ ಟಿ ಸೇರಿಸಲು ನಿರಂತರ ಹೋರಾಟವನ್ನು ವಿಟಿ ಜೀ ಮಾಡಿದ್ದಾರೆ.ರಾಜ್ಯಾದ್ಯಂತ ಸಮಾಜವನ್ನು ಸಂಘಟಿಸಿ ಸಮಾಜದ ಶಕ್ತಿಯ ಎಂತದು ಎಂದು ತೋರಿಸಿಕೊಟ್ಟಿದ್ದಾರೆ ಅವರನು ನಾವುಗಳು ಸಮಾಜದ ಶಕ್ತಿಯಾಗಿ ಸ್ಮರಿಸಬೇಕಾಗಿದೆ ಡಾ,ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಶೋಷಿಸಿತ ಸಮುದಾಯಗಳು ಮೀಸಲಾತಿ ಪಡೆದುಕೋಳಬೇಕು ಅನುವ ಆಶಯದಂತೆ ವಿಟಿಜಿ ಕಬ್ಬಲಿಗ-ಅಂಬಿಗ ಜಾತಿಗಳನ್ನು ಎಸ ಟಿ ಸೇರಿಸಲು ನಿರಂತರ ಶ್ರಮಿಸಿದ್ದಾರೆ ಅವರು ಸಮಾಜವನ್ನು ಎಸ ಟಿ ಸೇರಿಸಲು ಇರುವ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ಒಗ್ಗೂಡಿಸಿ ಸಾಗಬೇಕು ವಿಟಿಜೀ ಕನಸನು ಸಾಕಾರಗೋಳಿಸಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಕೋಲಿ‌-ಬೆಸ್ತ ಹಿರಿಯ ಸಮಾಜದ ಮುಖಂಡರು ಚಿಂತಕರು ಮಾರ್ಗದರ್ಶಕರಾದ ಡಾ.ಮುಕ್ಕ ರವರು ಸಮಾಜ ಮುಖಂಡರು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಹಾಜರಿದ್ದರು.

ಹೆಚ್ಚಿನ ಸುದ್ದಿ