KRGRV
Friday, October 16, 2026
Homeಬೆಂಗಳೂರುಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ: ರೈತರ ನೋವಿಗೆ ಸರ್ಕಾರ ಸ್ಪಂದಿಸಲಿ ಇವನಎಂದ ಲಕ್ಷಣ ಹೂಗಾರ

ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ: ರೈತರ ನೋವಿಗೆ ಸರ್ಕಾರ ಸ್ಪಂದಿಸಲಿ ಇವನಎಂದ ಲಕ್ಷಣ ಹೂಗಾರ

ಬೆಂಗಳೂರು: ಕಬ್ಬು ಬೆಳೆಗಾರರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಹಿರಿಯ ಪತ್ರಕರ್ತ ಹಾಗೂ ರೈತಪರ ಹೋರಾಟಗಾರ ಲಕ್ಷಣ ಹೂಗಾರ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಕಬ್ಬು ಬೆಳೆಗಾರರ ಧೀರೋದ್ದಾತ, ಚಾರಿತ್ರಿಕ ಹೋರಾಟಕ್ಕೆ ಜಯವಾಗಲಿ. ಕೋಮಾದಲ್ಲಿ ಇರುವ ರೈತರನ್ನು ಉಳಿಸಿ, ಬೀದಿಯಲ್ಲಿ ಬಿಟ್ಟು ಬರೀ ಕಣ್ಣೊರೆಸುವ ನಾಟಕ ಮಾಡಿದರೆ ರೈತರ ಶಾಪ ತಟ್ಟದೇ ಬಿಡೋದಿಲ್ಲ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು. ಕೇವಲ ಭರವಸೆ ನೀಡದೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ವಿವಿಧ ರೈತ ಸಂಘಟನೆಗಳು ಹಾಗೂ ರೈತಪರ ಚಿಂತಕರು ಬೆಂಬಲ ವ್ಯಕ್ತಪಡಿಸುತ್ತಿದ್ದು, ಸರ್ಕಾರದ ಮುಂದಿನ ಕ್ರಮದತ್ತ ಎಲ್ಲರ ಗಮನ ನೆಟ್ಟಿದೆ.

ಹೆಚ್ಚಿನ ಸುದ್ದಿ