KRGRV
Tuesday, October 20, 2026
Homeರಾಜಕೀಯಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ

ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಇಡೀ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರ. ಮೋದಿ ಅವರು ಬಂದ ಮೇಲೆ ಎಂಎಸ್ ಪಿ ತಂದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಥೆನಾಲ್ ಉತ್ಪಾದನೆಗೆ ಮೋದಿ ಅವರು ಅವಕಾಶ ನೀಡಿದರು. ಕಬ್ಬು ಅರೆಯುವ ಕಾರ್ಖಾನೆಗಳಿಗೆ ಅನುಕೂಲ ಆಗುವ ನೀತಿಯನ್ನು ಜಾರಿ ಮಾಡಿದರು. ಹಣಕಾಸು ಸಹಾಯ ಸೇರಿದಂತೆ ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು.

ಕಬ್ಬು ಬೆಳೆಗಾರರ ಅನೇಕ ದೂರುಗಳಲ್ಲಿ ಕಾರ್ಖಾನೆಗಳಲ್ಲಿ ಸರಿಯಾಗಿ ತೂಕ ಮಾಡುತ್ತಿಲ್ಲ ಎಂಬುದು ಮುಖ್ಯವಾಗಿದೆ. ರಿಕವರಿ ಸೇರಿದಂತೆ ಅನೇಕ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈಗಾಗಲೇ ಸಮಿತಿ ರಚನೆ ಮಾಡಿದ್ದಾರೆ. ಆ ಸಮಿತಿ ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದರು.

ಕಬ್ಬಿನ ಸಮಸ್ಯೆ ರಾಜ್ಯಕ್ಕೆ ಸೀಮಿತವಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಿದೆ ಎಂದು ವಿವರಿಸಿದರು.

ಕೇಂದ್ರ ದೂರುವುದೇ ಕೆಲಸವಾಗಿದೆ…
ಮುಖ್ಯಮಂತ್ರಿ ಡಿಕೆಶಿ ಅವರ ಬುಡ ಅಲ್ಲಾಡುತ್ತಿದೆ. ಅವರದೇ ಶಾಸಕರು ದಂಗೆ ಏಳುವ ಸ್ಥಿತಿಗೆ ಬಂದಿದ್ದಾರೆ. ಹತಾಶರಾಗಿ ಪದೇ ಪದೇ ಕೇಂದ್ರ ಸರ್ಕಾರ ದೂರುತ್ತಾರೆ. ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಬರವನ್ನೂ ಸರಿಯಾಗಿ ನಿರ್ವಹಿಸಲಿಲ್ಲ. ಅಭಿವೃದ್ಧಿ ಸಹ ಇಲ್ಲವಾಗಿದೆ. ಎಲ್ಲಕ್ಕು ಪ್ರತಿಭಟನೆ ನಡೆಯುತ್ತಿವೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಕೇಂದ್ರ ದೂರುತ್ತಾರೆ. ಕೇಂದ್ರಕ್ಕೆ ನಿಯೋಗ ಹೋಗುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಅನಿರೀಕ್ಷಿತ ಭೇಟಿ…
ಬಸವನಗೌಡ ಪಾಟೀಲ್ ಅವರೊಂದಿಗಿನ ಭೇಟಿ ಅನಿರೀಕ್ಷಿತವಾಗಿ ನಡೆಯಿತು. ಖಾಸಗಿ ಕಾರ್ಯಕ್ರಮದಲ್ಲಿ ಸಿಕ್ಕರು. ಮುಂದೆ ಏನಾಗಲಿದೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಈಗ ವಿರೋಧ ಪಕ್ಷದಲ್ಲಿ ದೆ. ಜನ ನಮ್ಮನ್ನು ವಿರೋಧ ಪಕ್ಷದಲ್ಲಿ ಇಟ್ಟಿದ್ದಾರೆ. ಇನ್ನೂ ಉಳಿದ ಅವಧಿಗೂ ವಿರೋಧ ಪಕ್ಷದಲ್ಲಿ ಇರ್ತೆವೆ‌. ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಿ ಸಿಎಂ ಬೀಳಿಸುವ ಅಗತ್ಯ ಇಲ್ಲ. ಮೂರನೇ ಸಿಎಂ ಬಗ್ಗೆ ಸದ್ಯದಲ್ಲೇ ತಿಳಿಯಲಿದೆ ಎಂದರು.

ಹೆಚ್ಚಿನ ಸುದ್ದಿ