KRGRV
Sunday, July 5, 2026
Homeವೈರಲ್ ಸುದ್ದಿಭೀಮಾತೀರದಲ್ಲಿ 6 ಜನರ ಹತ್ಯಾಕಾಂಡ ಕರ್ತವ್ಯ ಲೋಪ ಚಡಚಣ ಪಿಎಸ್‌ಐ ಗೆಜ್ಜಿ ಅಮಾನತು.!

ಭೀಮಾತೀರದಲ್ಲಿ 6 ಜನರ ಹತ್ಯಾಕಾಂಡ ಕರ್ತವ್ಯ ಲೋಪ ಚಡಚಣ ಪಿಎಸ್‌ಐ ಗೆಜ್ಜಿ ಅಮಾನತು.!

ವಿಜಯಪುರ: ಭೀಮಾತೀರವನ್ನು ನಡುಗಿಸಿದ್ದ ಭೀಕರ 6 ಜನರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಚಡಚಣ ಪಿಎಸ್‌ಐ ಸೋಮೇಶ ಗೆಜ್ಜಿ ಅವರನ್ನು ಅಮಾನತುಗೊಳಿಸಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಲಕ್ಷ್ಮಣ ನಿಂಬರಗಿ ಶನಿವಾರ ಆದೇಶ ಹೊರಡಿಸಿದ್ದಾರೆ.

​ಮೇ 29 ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಭೀಕರ ಹತ್ಯಾಕಾಂಡ ನಡೆದಿತ್ತು. ಈ ಘಟನೆಗೂ ಮುನ್ನವೇ ಸಂತ್ರಸ್ತ ನಿರಾಳೆ ಹಾಗೂ ಪಾಟೀಲ್ ಕುಟುಂಬಗಳು ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದವು ಎಂದು ತಿಳಿದುಬಂದಿದೆ.

​ಆದರೆ, ಉಭಯ ಕುಟುಂಬಗಳ ನಡುವಿನ ಜಗಳ ಹಾಗೂ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಪಿಎಸ್‌ಐ ಸೋಮೇಶ ಗೆಜ್ಜಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳ ಈ ಬೇಜವಾಬ್ದಾರಿತನವೇ ಭೀಕರ ಕೊಲೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿಎಸ್‌ಐ ಅವರನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ.

ಹೆಚ್ಚಿನ ಸುದ್ದಿ