KRGRV
Monday, November 17, 2025
Homeಜಿಲ್ಲಾ ಸುದ್ದಿಗಳುಮೀನುಗಾರ ಮುಖಂಡ ರಾಜು ತಾಂಡೆಲ್ ವಿಧಿವಶ : ಆಜಾದ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರ

ಮೀನುಗಾರ ಮುಖಂಡ ರಾಜು ತಾಂಡೆಲ್ ವಿಧಿವಶ : ಆಜಾದ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರ

ಕಾರವಾರ ಅ 20 :: ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫಡರೇಶನ್ ಅಧ್ಯಕ್ಷರೂ ಹಾಗೂ ಕಾರವಾರ ಚಿತ್ತಾಕುಲ ಗ್ರಾಮ‌ ಪಂಚಾಯತ್ ಅಧ್ಯಕ್ಷರೂ,ಪರ್ಶಿನ್ ಬೋಟ್ ಯೂನಿಯನ್ ಅಧ್ಯಕ್ಷರೂ ಆಗಿರುವ ರಾಜು ಎಲ್ ತಾಂಡೇಲ್ ಆಕಸ್ಮಿಕವಾಗಿ ವಿಧಿವಶರಾಗಿದ್ದು ಅವರಿಗೆ ಆಗಸ್ಟ್ 20 ರಂದು ಮಂಗಳವಾರ ಬೆಳಿಗ್ಗೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಅವರ ಪಾರ್ಥಿವ ಶರೀರದ ಅಂತಿಮ ನಮನ ಮತ್ತು ಭಾವ ಪೂರ್ಣ ವಿದಾಯದ ಕಾರ್ಯಕ್ರಮದ ವಿವರ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕರಿಗೆ ರಾಜು ತಾಂಡೇಲ್ ರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಾರವಾರ ಸದಾಶಿವಗಡದ ಆಜಾದ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 9.30 ಗಂಟೆಗೆ ಕಾರವಾರ ಜಿಲ್ಲಾಸ್ಪತ್ರೆಯಿಂದ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ಹೊರಟು ಕಾರವಾರ ನಗರದಿಂದ ಸಾಗಲಿದೆ. ಅಲ್ಲಿಂದ ಕಾರವಾರ ಸದಾಶಿಗಡದ ಆಜಾದ್ ಮೈದಾನಕ್ಕೆ ತೆರಳಲಿದೆ. ಆಜಾದ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ‌ ನಮನದ ನಂತರ ಮೆರವಣಿಗೆ ಚಿತ್ತಾಕುಲ ಸೀಬಡ್ ೯ ಕಾಲನಿಯ ರಾಜು ತಾಂಡೇಲ್ ರ ಸ್ವಗೃಹಕ್ಕೆ ತೆರಳಲಿದೆ ಎಂದು ಮೀನುಗಾರರ ಸಮಾಜದ ಪ್ರಮುಖರು ತಿಳಿಸಿದ್ದಾರೆ. ಮೀನುಗಾರರ ಸಮಾಜದವರು, ಸಾರ್ವಜನಿಕರು ಅಂತಿಮ ನಮನದಲ್ಲಿ ಪಾಲ್ಗೊಳ್ಳಿತ್ತಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಸುದ್ದಿ