ಬೆಂಗಳೂರು : ಒಂದೆಡೆ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಇದರ ನಡುವೇ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸರ್ಕಾರಿ ವಸತಿಗೃಹದಲ್ಲಿ ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ
ಡಿಕೆಶಿ ಸಿಎಂ ಮಾಡಲು ಒಳಒಪ್ಪಂದ ಆಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆರೋಪ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿ, ಅವರು ಹೇಳಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ, ಹೀಗಾಗಿ ಈ ವಿಷಯದ ಬಗ್ಗೆ ಮಾತನಾಡಲ್ಲ ಎಂದು ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು
ಮುಡಾ ವಿರೋಧಿಸಿ ಬಿಜೆಪಿ-ಜೆಡಿಎಸ್ ನಾಯಕರು ಮಾಡಿದ್ದ ಪಾದಯಾತ್ರೆ ವೇಳೆ ಡಿಕೆಶಿ-ಹೆಚ್ಡಿಕೆ ನಡುವೇ ಹೆಚ್ಚು ವಾಕ್ಸಮರ ನಡೆದಿತ್ತು. ಆಗ ಹೆಚ್‌ಡಿಕೆ, ಡಿಕೆಶಿ ಇಷ್ಟೊಂದು ಆವೇಶಭರಿತವಾಗಿ ಮಾತನಾಡುವುದು ತಪ್ಪು ಎನ್ನುತಲೇ ಡಿಕೆಶಿ ಹೇಳಿಕೆಗಳನ್ನು ನಯವಾಗಿ ಜಾರಕಿಹೊಳಿಯವರ ಖಂಡಿಸಿದ್ದರು. ಇದೀಗ ಭೇಟಿಯಾಗಿದ್ದು ಮತ್ತೆ ಕುತೂಹಲ ಮೂಡಿಸಿದೆ.
ಒಂದೆಡೆ ಮುಂದಿನ ಸಿಎಂ ಆಗಲು ಸತೀಶ್ ಜಾರಕಿಹೊಳಿ ಅವರು ಸಜ್ಜಾಗುತ್ತಿದ್ದಾರೆ ಎಂದು ಮುಡಾ ಸದ್ದಿನ ನಡುವೆಯೇ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಡಿಕೆಶಿ, ಜಾರಕಿಹೊಳೆ ಭೇಟಿ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಮೇಲ್ನೋಟಕ್ಕೆ ಹಲವು ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಚರ್ಚಿಸಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಭವಿಷ್ಯದ ಮುಖ್ಯಮಂತ್ರಿಗಳು ನೀವೇ.. ಭಾವಿ ಸಿಎಂ ಡಿಕೆ ಅಣ್ಣ ಅಂತಾ ಕೆಲ ನೆಟ್ಟಿಗಳು ಡಿಕೆಶಿ ಅವರು ಹಂಚಿಕೊಂಡ ಭೇಟಿ ಕುರಿತಾದ ಫೋಟೋಗೆ ಕಮೆಂಟಿಸುತ್ತಿದ್ದಾರೆ