KRGRV
Wednesday, October 14, 2026
Homeಬೆಂಗಳೂರುಮೂಡಲ ಪಾಳ್ಯದಚಂದ್ರಮ್ಮ ಅವರ ಗೊಂಬೆ ಮನೆಯಲ್ಲಿ 9 ದಿನಗಳ ಕಾಲ ನವರಾತ್ರಿ ಹಬ್ಬ ಆಚರಣೆ

ಮೂಡಲ ಪಾಳ್ಯದಚಂದ್ರಮ್ಮ ಅವರ ಗೊಂಬೆ ಮನೆಯಲ್ಲಿ 9 ದಿನಗಳ ಕಾಲ ನವರಾತ್ರಿ ಹಬ್ಬ ಆಚರಣೆ

ಬೆಂಗಳೂರು,ಅ.14: ವಿಜಯನಗರದ ಮೂಡಲ ಪಾಳ್ಯದಚಂದ್ರಮ್ಮ ಅವರ ಗೊಂಬೆ ಮನೆಯಲ್ಲಿ 9 ದಿನಗಳ ಕಾಲ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ.

ಗೊಂಬೆ ಮನೆ ಚಂದ್ರಮ್ಮ ಎಂದೇ ಖ್ಯಾತಿ ಪಡೆದಿರುವ ಚಂದ್ರಮ್ಮ ಅವರ ನಿವಾಸದಲ್ಲಿ ಎರಡು ಮಹಡಿಗಳ ತುಂಬ ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಶಾಶ್ವತವಾಗಿ ಪ್ರದರ್ಶಿಸಲಾಗುತ್ತಿದೆ. ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಗೊಂಬೆ ಪ್ರದರ್ಶನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಬಟ್ಟೆ, ಹತ್ತಿ, ಕಂಬಿಗಳು, ಫೈಬರ್, ಮಣ್ಣು ಹೀಗೆ ಹಲವು ವಿಧ ವಿಧವಾದ ಕಚ್ಚಾವಸ್ತುಗಳಿಂದ ಮಾಡಿದ
ಗೊಂಬೆಗಳನ್ನು ಚಂದ್ರಮ್ಮ ಅವರು ಪ್ರತಿ ವರ್ಷವೂ ತಾವೇ ತಯಾರಿಸಿ ನವರಾತ್ರಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ ಸಾವಿರಾರು

ಗೊಂಬೆ ಪ್ರಿಯರು ಪ್ರತಿನಿತ್ಯ ತಂಡೋಪತಂಡವಾಗಿ ಆಗಮಿಸಿ ಗೊಂಬೆಗಳನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ.
ಇಂದು ಸಿರಿ ಬೆಳಕು ಸಂಸ್ಥೆಯ ಪ್ರೇಮ ಶಾಂತವೀರಯ್ಯ, ವಿಜಯನಗರ ಲಲಿತ ಸಹಸ್ರನಾಮ ತಂಡ
ಮತ್ತಿತರರು ಭೇಟಿ ನೀಡಿದ್ದರು.

ಹೆಚ್ಚಿನ ಸುದ್ದಿ