KRGRV
Sunday, October 11, 2026
Homeಜಿಲ್ಲಾ ಸುದ್ದಿಗಳುಮೂಲ ಬೋವಿಗಳು ಎಸ್‌ಸಿ ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ

ಮೂಲ ಬೋವಿಗಳು ಎಸ್‌ಸಿ ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ

ಕುಷ್ಟಗಿ: ತಾಲೂಕಿನ ಪಲ್ಲಕ್ಕಿ ಹೊರುವ ಬೆಸ್ತ–ಭೋವಿ ಜನಾಂಗದವರು ಪರಿಶಿಷ್ಟ ಜಾತಿ (SC) ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ, ಈ ರೀತಿಯ ಬೇಡಿಕೆ ಹಾಗೂ ಹೋರಾಟವು ಕಾನೂನುಬದ್ಧವಾಗಿದೆಯೇ ಎಂಬುದರ ಕುರಿತು ಪರಿಶೀಲನೆ ಅಗತ್ಯವಾಗಿದೆ.

ಭೋವಿ–ವಡ್ಡರ ಸಮುದಾಯವು 1976ರಲ್ಲಿ ಪರಿಶಿಷ್ಟ ಜಾತಿ (SC) ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಿದೆ. ಆದರೆ, ಪಲ್ಲಕ್ಕಿ ಹೊರುವ ಬೆಸ್ತ–ಭೋವಿ ಸಮುದಾಯದವರು “ನಾವೇ ನಿಜವಾದ ಭೋವಿಗಳು” ಎಂಬ ವಾದವನ್ನು ಮುಂದಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ವಿಷಯದ ಗಂಭೀರತೆಯನ್ನು ಅರಿತು, ಕುಷ್ಟಗಿ ತಾಲೂಕಿನ ಸಮುದಾಯದ ಪ್ರಮುಖರು ಕುಷ್ಟಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ಸಮಸ್ಯೆ ಬಗೆಹರಿಯದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಮುನ್ಸೂಚನೆಯನ್ನು ನೀಡಿದ್ದಾರೆ.

✍️ ಪರಸಪ್ಪ ಅಮರಾವತಿ

ಹೆಚ್ಚಿನ ಸುದ್ದಿ