KRGRV
Sunday, August 2, 2026
Homeರಾಜಕೀಯರಸ್ತೆ ಅಪಘಾತ; ಕಾಂಗ್ರೆಸ್ ಮುಖಂಡ ಚೇತನ ಕಡಕೋಳ ಗೆ ಗಂಭೀರ ಗಾಯ

ರಸ್ತೆ ಅಪಘಾತ; ಕಾಂಗ್ರೆಸ್ ಮುಖಂಡ ಚೇತನ ಕಡಕೋಳ ಗೆ ಗಂಭೀರ ಗಾಯ

ರಾಯಚೂರು : ಜಿಲ್ಲಾ ಕಾಂಗ್ರೆಸ್ ಯುವ ಮುಖಂಡ ಚೇತನ ಕಡಗೋಲ ಅವರ ಕಾರು ಅಪಘಾತವಾಗಿದ್ದು, ಅವರ ಕೈ-ಕಾಲು, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ತೆಲಂಗಾಣದ ಹಿಂದುಪುರ ಬಳಿ(ಟೈರ್ ರೋಡ್ ಸಮೀಪ) ನಡೆದಿದೆ.

ಚೇತನ ಕಡಗೋಲ ಹಾಗೂ ಅವರ ಸ್ನೇಹತರೊಬ್ಬರು ಜೇವರ್ಗಿಯಿಂದ ರಾಯಚೂರಿಗೆ ಬರುವಾಗ ಟೈರ್ ರೋಡ್ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆಯಿಂದ ಹಾರಿ ಮನೆಯ ಕಾಂಪೌಂಡ್ ಗೋಡೆ ಧ್ವಂಸಗೊಳಿಸಿ ಮನೆಗೆ ನುಗ್ಗಿದೆ.

ರಸ್ತೆಯ ಬದಿಯಲ್ಲಿ ಗುಂಡಿ ಇದೆ ಎಂದು ಪಕ್ಕದಲ್ಲಿ ಕಾರು ತಿರುಗಿಸಿದಾಗ ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಪಕ್ಕದ ಮನೆಯ ಕಾಂಪೌಂಡ್ ನುಗ್ಗಿದೆ ಎನ್ನಲಾಗಿದೆ.

ಘಟನೆಯ ಬಳಿಕ ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಸುದ್ದಿ