KRGRV
Tuesday, December 24, 2024
HomeUncategorizedರಾಜ್ಯಪಾಲರ ನಡೆ ಖಂಡನೀಯ ಮುಖ್ಯಮಂತ್ರಿಗಳಿಗೆ ನೀಡಿರುವ ನೋಟೀಸನ್ನು ವಾಪಸ್ ಪಡೆಯಬೇಕು ಸಚಿವ: ಮುನಿಯಪ್ಪ.

ರಾಜ್ಯಪಾಲರ ನಡೆ ಖಂಡನೀಯ ಮುಖ್ಯಮಂತ್ರಿಗಳಿಗೆ ನೀಡಿರುವ ನೋಟೀಸನ್ನು ವಾಪಸ್ ಪಡೆಯಬೇಕು ಸಚಿವ: ಮುನಿಯಪ್ಪ.

ಸಿದ್ದರಾಮಯ್ಯ ರವರು ಮೂಡಾ ಅಗರಣದಲ್ಲಿ ನಿರಪರಾಧಿ.

ಬಿಜೆಪಿ ಮತ್ತು ಜೆಡಿಎಸ್ ನವರ ಮೈತ್ರಿಯಿಂದ ನಮ್ಮ ಸುಭದ್ರ ಸರ್ಕಾರವನ್ನು ಕೆಡಿಸಲು ಸಾಧ್ಯವಿಲ್ಲ ನಮ್ಮಸರ್ಕಾರ ಐದು ವರ್ಷ ಗಳ ಕಾಲ ಜನಪರವಾಗಿ ,ಬಡವರಪರವಾಗಿ ನಡೆಯುತ್ತದೆ.

ರಾಮನಗರ.03

ಕೇಂದ್ರದ ಎನ್ ಡಿಎ ನೇತೃತ್ವದ ಬಿಜೆಪಿ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ದ ರಾಮ ನಗರದಲ್ಲಿ ಹಮ್ಮಿಕೊಂಡಿದ್ದ ಜನಾಂದೋಲನ ಸಮಾವೇಶದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪನವರು ಭಾಗವಹಿಸಿ ಮಾತನಾಡಿದರು.

ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣವನ್ನು ನೀಡದೇ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದಾರೆ.

ನಮಗೆ ಈ ರಾಜ್ಯದ ಜನ ಸ್ಪಷ್ಟವಾದ ಬಹುಮತ 136 ಸ್ಥಾನಗಳನ್ನು ಗೆಲ್ಲಿಸಿದ್ದಾರೆ.
ನಮ್ಮ ಸರ್ಕಾರ ಜನಪರವಾಗಿ ಬಡವರ ಪರವಾಗಿ ಉತ್ತಮ ಕೆಲಸ ಮಾಡುತ್ತಿದೆ ಇವರು ಮೂಡಾ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದರೆ ಇವರು ಮಾಡುತ್ತಿರುವ ಪಾದಯಾತ್ರೆ ಗೆ ಯಾವುದೇ ಕಿಮ್ನತ್ತಿಲ್ಲ.

ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಪಾತ್ರ ಇಲ್ಲಾ ಅವರು ಈ ವಿಷಯದಲ್ಲಿ ನಿರಪರಾಧಿ

ರಾಜ್ಯಪಾಲರು ನೀಡಿರುವ ನೋಟೀಸ್ ಅನ್ನು ವಾಪಸ್ ಪಡೆಯಬೇಕು ರಾಜ್ಯಪಾಲರು ಬಿಜೆಪಿ ಪಕ್ಷದ ಪರವಾಗಿ ಕೆಲಸಮಾಡುತ್ತಿದ್ದಾರೆ ಇದು ಖಂಡನೀಯ ಅವರು ತಕ್ಷಣ ನೋಟೀಸ್ ಅನ್ನು ವಾಪಸ್ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ,ಬೈರತಿ ಸುರೇಶ್, ರಹೀಂಖಾನ್,ಶರಣಪ್ರಕಾಶ್ ಪಾಟೀಲ್, ಎಂ ಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್,ಸಂತೋಷ್ ಲಾಡ್, ರಾಜ್ಯಸಭಾ ಸದಸ್ಯರಾದ ಜಿಸಿ.ಚಂದ್ರಶೇಕರ್, ಶಾಸಕರು ಮಾಜಿ ಸಂಸದರಾದ ಡಿಕೆ ಸುರೇಶ್, ಕೆಪಿಸಿಸಿ ಪಧಾದಿಕಾರಿಗಳು,ಮುಖಂಡರು ಕಾರ್ಯಕರ್ತರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ