KRGRV
Sunday, December 22, 2024
Homeಜಿಲ್ಲಾ ಸುದ್ದಿಗಳುರೈತರಿಗೆ ಅನ್ಯಾಯ ಮಾಡಿದ ನೈಸ್ ಪರ ಡಿಸಿಎಂ ಡಿಕೆಸಿ ವಕಾಲತ್ತು ರೈತ ಸಂಘದಿಂದ ಪ್ರತಿಭಟನೆ

ರೈತರಿಗೆ ಅನ್ಯಾಯ ಮಾಡಿದ ನೈಸ್ ಪರ ಡಿಸಿಎಂ ಡಿಕೆಸಿ ವಕಾಲತ್ತು ರೈತ ಸಂಘದಿಂದ ಪ್ರತಿಭಟನೆ

ಕರ್ನಾಟಕ ಪ್ರಾಂತ ರೈತ ಸಂಘ (KPRS), ನೈಸ್ ಭೂ ಸಂತ್ರಸ್ಥರ ರೈತರ ಹೋರಾಟ ಸಮಿತಿಯಿಂದ ಪ್ರತಿಬನಟನೆ

ಬೆಂಗಳೂರು : ಕಳಂಕಿತ ನೈಸ್ ಸಂಸ್ಥೆ ಪರ ವಕಾಲತ್ತು ವಹಿಸಿರುವ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರ ಹೇಳಿಕೆ ಖಂಡಿಸಿ ಹಾಗೂ ಬಿಎಂಐಸಿ-ನೈಸ್ ಯೋಜನೆ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸಿ ಸಲ್ಲಿಸುತ್ತಿರುವ ಹಕ್ಕೋತ್ತಾಯಗಳ ಮನವಿ ಸಲ್ಲಿಸುತ್ತಿದ್ದೇವೆ ಎಂದು ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ತಿಳಿಸಿದ್ದಾರೆ.

ನೈಸ್ ಸಂಸ್ಥೆಯ ಹಗರಣಗಳ ಒಂದು ಸಂಸ್ಥೆಯಾಗಿದೆ ಎಂದು ಸನ್ಮಾನ್ಯ ಶ್ರೀ.ಟಿ.ಬಿ. ಜಯಚಂದ್ರ ರವರ ಅಧ್ಯಕ್ಷತೆಯ ಸದನ ಸಮಿತಿ ವಿವರವಾಗಿ ಅಧ್ಯಯನ ನಡೆಸಿ ವರದಿಯನ್ನು ಶಾಸಕಾಂಗಕ್ಕೆ ಸಲ್ಲಿಸಿ ಈಗ ಅದು ಸದನದ ಆಸ್ತಿಯಾಗಿದೆ. ಆದರೆ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳು ಕಪ್ಪು ಪಟ್ಟಿಯಲ್ಲಿ ಇರಬೇಕಾದ ನೈಸ್ ಕಂಪನಿ ಪರ ವಕಾಲತ್ತು ವಹಿಸಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಮತ್ತು ರೈತರ ಮೇಲೆ ನಡೆಯುತ್ತಿರುವ ಅನ್ಯಾಯ, ಮೋಸ, ವಂಚನೆಗಳನ್ನು ಮುಂದುವರೆಸುವ ಸೂಚನೆಯಾಗಿ ತಪ್ಪು ಸಂದೇಶವನ್ನು ನೀಡುತ್ತದೆ. ಅದ್ದರಿಂದ ಈ ಕೆಳಗಿನ ಹಕ್ಕೋತ್ತಾಯಗಳನ್ನು ಈಡೇರಿಸಲು ಈ ಪ್ರತಿಭಟನಾ ಧರಣಿ ಮೂಲಕ ತಮ್ಮನ್ನು ಆಗ್ರಹಿಸಲಾಗುತ್ತಿದೆ.

ಹಕ್ಕೊತ್ತಾಯಗಳು

ಕಳಂಕಿತ ನೈಸ್ ಕಂಪನಿ ಪರ ಉಪಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು. .

ಬಿ.ಎಂ.ಐ.ಸಿ. ಯೋಜನೆಯ ನೈಸ್ ಕಂಪನಿ ಪಾಲುದಾರಿಕೆಯನ್ನು ರದ್ದುಗೊಳಿಸಬೇಕು.

ನೈಸ್ ಕಂಪನಿಯ ಭೂ ಸ್ವಾದಿನ ಹಾಗೂ ರಸ್ತೆ ನಿರ್ಮಾಣದ ಹಗರಣವನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಬೇಕು.

ರೈತರ ಒಪ್ಪಿಗೆ ಇಲ್ಲದೆ ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು.

ನೈಸ್ ಅಕ್ರಮ ಕುರಿತು ಸದನ ಸಮಿತಿ ಮತ್ತು ಸಂಪುಟ ಉಪಸಮಿತಿಗಳ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು.

ಕೆಐಎಡಿಬಿ ಹಾಗೂ ನೈಸ್ ಕಂಪನಿಯ ಆಕ್ರಮ ಮೈತ್ರಿಯಿಂದ ಹಗಲು ದರೋಡೆ ಮಾಡಿರುವ ಎಲ್ಲಾ ಹೆಚ್ಚುವರಿ ಭೂಮಿಯನ್ನು ವಾಪಸ್ಸು ಪಡೆದುಕೊಳ್ಳಬೇಕು.

ಭೂ ಸ್ವಾಧೀನ ಪ್ರಕಟಣೆ ಮತ್ತು ಕೋರ್ಟ್ ತೀರ್ಮಾನಗಳ ಹೆಸರಿನಲ್ಲಿ ರೈತರ ಮೇಲೆ ನೈಸ್ ಕಂಪನಿಯ ದಬ್ಬಾಳಿಕೆ ದೌರ್ಜನ್ಯ ನಿಲ್ಲಿಸಲು ಅಗತ್ಯ ಕ್ರಮ ವಹಿಸಬೇಕು.

ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದಂತೆ ಹೆಚ್ಚಿನ ಪರಿಹಾರ ಹಾಗೂ ನಿವೇಶನ ಒದಗಿಸಬೇಕು.

ಬಿ.ಎಂ.ಐ.ಸಿ. ಯೋಜನೆಯ ನೆಪದಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿಬರ್ರಧಿಸಲು ಹಾಗೂ ಶಿಕ್ಷಿಸಬೇಕು.

ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ರಾಜ್ಯ ಸಮಿತಿ ಸದಸ್ಯರು ಜೆ ಗಾಯಿತ್ರಿ, ನೈಸ್ ಭೂ ಸಂತ್ರಸ್ಥರ ರೈತರ ಹೋರಾಟ ಸಮಿತಿಯ ಅಧ್ಯಕ್ಷ ಎನ್., ವೆಂಕಟಚಲಯ್ಯ , ವೆಂಕಟಚಲಪ್ಪ, ಉಮಾಶಂಕರ್, ಚಂದ್ರಶೇಖರ್,ಹನುಮಂತಪ್ಪ,ವೆಂಕಟೇಶಪ್ಪ ಸೇರಿದಂತೆ ಅನೇಕ ಗಣ್ಯರು ಭಾಗಿ.

ಹೆಚ್ಚಿನ ಸುದ್ದಿ