KRGRV
Thursday, October 22, 2026
Homeರಾಜಕೀಯಲಿಡಕರ್ ಸಂಸ್ಥೆಯ ವಿಶೇಷ ವಸ್ತು ಮಳಿಗೆ ಉದ್ಘಾಟನೆ ಮಾಡಿದ ಸಮಾಜ ಕಲ್ಯಾಣ ಸಚಿವ:- ಕೆಹೆಚ್ ‌ಮುನಿಯಪ್ಪ

ಲಿಡಕರ್ ಸಂಸ್ಥೆಯ ವಿಶೇಷ ವಸ್ತು ಮಳಿಗೆ ಉದ್ಘಾಟನೆ ಮಾಡಿದ ಸಮಾಜ ಕಲ್ಯಾಣ ಸಚಿವ:- ಕೆಹೆಚ್ ‌ಮುನಿಯಪ್ಪ

ಮೈಸೂರು.21 (ವಸ್ತು ಪ್ರದರ್ಶನ ಆವರಣ )
👇
*ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ * ವತಿಯಿಂದ ನಿರ್ಮಿಸಿರುವ ವಸ್ತು ಪ್ರದರ್ಶನ ಮಳಿಗೆಯನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು .

ನಿಗಮಕ್ಕೆ 50 ವಸಂತಗಳು ಪೂರೈಸುತ್ತಿರುವ ಹಿನ್ನಲೆಯಲ್ಲಿ ಚರ್ಮ ಕುಶಲಕರ್ಮಿಗಳ ಪಾರಂಪರಿಕ ಇತಿಹಾಸದ ಬಗ್ಗೆ ಮಳಿಗೆಯಲ್ಲಿ ಪರಿಚಯಿಸಿದ್ದು ವಿಶೇಷವಾಗಿತ್ತು .

ಮಾರುಕಟ್ಟೆಯಲ್ಲಿ ಚರ್ಮದ ವಸ್ತುಗಳಿಗೆ ಬಾರಿ ಬೇಡಿಕೆ ಇದ್ದು ಇವುಗಳನ್ನು ಕೊಂಡುಕೊಳ್ಳುಲು ಗ್ರಾಹಕರ ಗಮನ ಸೆಳೆಯುತ್ತಿತ್ತು

ಈ ಲಿಡಕರ್ ಸಂಸ್ಥೆಗೆ ಇದೆ ತಿಂಗಳ ಅಕ್ಟೋಬರ್‌ 28ಕ್ಕೆ 50 ವರ್ಷಗಳು ಪೂರೈಸುತ್ತಿರುವ ಹಿನ್ನಲೆಯಲ್ಲಿ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಈ ಸಂದರ್ಭದಲ್ಲಿ ಸಚಿವರಾದ ರಘುಮೂರ್ತಿ, ಸರ್ಕಾರದ ಕಾರ್ಯದರ್ಶಿ ಮೊಹನ್ ರಾಜ್, ಆಯುಕ್ತರಾದ ನಾಗರಾಜು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ಆದಿಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅಶೋಕ ಸಾಲಪ್ಪ, ಅಲೆಮಾರಿ ಅರೆ ಅಲೆಮಾರಿ ಅ.ನಿ.ಅಧ್ಯಕ್ಷರಾದ ಪಲ್ಲವಿ ಹಾಗೂ ಲಿಡಕರ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಹೆಚ್.ನಟರಾಜ್ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ