KRGRV
Wednesday, November 19, 2025
Homeಜಿಲ್ಲಾ ಸುದ್ದಿಗಳುವೈಧ್ಯಕೀಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ಒತ್ತಿ ಉರಿಯುತ್ತಿರವ ಪಶ್ಚಿಮ ಬಂಗಾಳ ರಾಜ್ಯ

ವೈಧ್ಯಕೀಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ಒತ್ತಿ ಉರಿಯುತ್ತಿರವ ಪಶ್ಚಿಮ ಬಂಗಾಳ ರಾಜ್ಯ

ಕಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದಂತೆ ಮರಣೋತ್ತರ ವರದಿಯಲ್ಲಿ ಕೆಲವು ವಿಚಾರಗಳು ಬಹಿರಂಗಗೊಂಡಿದೆ. ಆತ ಕನ್ನಡಕಕ್ಕೆ ಗುದ್ದಿದ್ದರಿಂದ ಅದು ಒಡೆದು ಕಣ್ಣಿಗೆ ಚುಚ್ಚಿಕೊಂಡು ಆಕೆಯ ಕಣ್ಣಲ್ಲಿ ರಕ್ತ ಬಂದಿತ್ತು ಎಂದು ಗೊತ್ತಾಗಿದೆ.

ಪ್ರಾಥಮಿಕ ಶವ ಪರೀಕ್ಷೆ ವರದಿಯು ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಕೊಲೆ ಮಾಡಲಾಗಿದೆ ಎಂಬುದನ್ನು ಸೂಚಿಸಿದ್ದು, ಆತ್ಮಹತ್ಯೆ ಎಂಬುದನ್ನು ತಳ್ಳಿಹಾಕಿದೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ, ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗೊಂದಲದ ವಿವರಗಳು ಹೊರಬಿದ್ದಿವೆ. ಅವರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಜೋಯ್ ರಾಯ್ ಆಕೆಯ ಕನ್ನಡಕ ಒಡೆದು ಹೋಗುವ ಹಾಗೆ ಹೊಡೆದಿದ್ದರಿಂದ ಕನ್ನಡಕದ ಚೂರುಗಳು ಕಣ್ಣುಗಳಿಗೆ ಚುಚ್ಚಿದ್ದವು ಎಂಬುದನ್ನು ಮರಣೋತ್ತರ ವರದಿ ತಿಳಿಸಿದೆ.

ಪ್ರಾಥಮಿಕ ಶವ ಪರೀಕ್ಷೆ ವರದಿಯು ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಕೊಲೆ ಮಾಡಲಾಗಿದೆ ಎಂಬುದನ್ನು ಸೂಚಿಸಿದ್ದು, ಆತ್ಮಹತ್ಯೆ ಎಂಬುದನ್ನು ತಳ್ಳಿಹಾಕಿದೆ. ವರದಿಯಲ್ಲಿ ಆಕೆಯ ಕಣ್ಣು ಹಾಗೂ ಬಾಯಿಯಿಂದ ರಕ್ತಸ್ರಾವವಾಗಿದ್ದು, ಮುಖದ ಮೇಲೂ ಗಾಯಗಳಾಗಿದ್ದವು, ಸಂತ್ರಸ್ತೆಯ ಖಾಸಗಿ ಭಾಗಗಳಲ್ಲೂ ರಕ್ತಸ್ರಾವವಾಗಿತ್ತು, ಹೊಟ್ಟೆ, ಎಡಗಾಲು, ಉಂಗುರದ ಬೆರಳು ಮತ್ತು ತುಟಿಗಳಲ್ಲಿ ಗಾಯಗಳಾಗಿದ್ದವು.
ಶುಕ್ರವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಸರ್ಕಾರಿ ಸ್ವಾಮ್ಯದ ಆರ್​ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಆಸ್ಪತ್ರೆ ಆವರಣಕ್ಕೆ ಆಗಾಗ ಬರುತ್ತಿದ್ದ ಸಂಜಯ್ ರಾಯ್ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ.

ಅಪರಾಧ ಎಸಗಿದ ನಂತರ ಆರೋಪಿಯು ಪೊಲೀಸ್ ಬ್ಯಾರಕ್‌ಗೆ ಹೋಗಿ ಶುಕ್ರವಾರ ಬೆಳಗಿನ ಜಾವದವರೆಗೂ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಸಂದರ್ಭದಲ್ಲಿ ಆತ ತನ್ನ ಪತ್ನಿ ಮೇಲೆಯೂ ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಮೂರು ಮದುವೆಯಾಗಿದ್ದಾನೆ. ಆದರೆ ಆ ಸಂಬಂಧ ಕೂಡ ಹೆಚ್ಚು ಕಾಲ ಉಳಿದಿರಲಿಲ್ಲ. ಅವರ ತಾಯಿ ಮಾಲತಿ ರಾಯ್ ಅವರು ಆರೋಪಗಳನ್ನು ತಳ್ಳಿಹಾಕಿದರು, ತಮ್ಮ ಮಗ ಮುಗ್ಧ ಎಂದು ವಾದಿಸಿದ್ದಾರೆ.

ಈ ಪ್ರಕರಣದ ಕುರಿತು ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿನ ನಿವಾಸಿ ವೈದ್ಯರು ಸೋಮವಾರ ಪ್ರತಿಭಟನೆ ನಡೆಸಿದರು, ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿನವರು ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ