KRGRV
Wednesday, August 19, 2026
Homeಜಿಲ್ಲಾ ಸುದ್ದಿಗಳುಅಖಿಲ ಕರ್ನಾಟಕ ರಾಜ್ಯ ದಳಪತಿಗಳ ಸಂಘಕ್ಕೆ ಗುಂಡಪ್ಪ ಹನಮಂತ ಕೆ. ಮಾಲಿಪಾಟೀಲ ಸದಸ್ಯತ್ವ

ಅಖಿಲ ಕರ್ನಾಟಕ ರಾಜ್ಯ ದಳಪತಿಗಳ ಸಂಘಕ್ಕೆ ಗುಂಡಪ್ಪ ಹನಮಂತ ಕೆ. ಮಾಲಿಪಾಟೀಲ ಸದಸ್ಯತ್ವ

ಲಿಂಗಸುಗೂರು: ಅಖಿಲ ಕರ್ನಾಟಕ ರಾಜ್ಯ ದಳಪತಿಗಳ ಸಂಘದ ರಾಜ್ಯ ಸಂಘದ ಸಾಮಾನ್ಯ ಸದಸ್ಯತ್ವವನ್ನು ಗುಂಡಪ್ಪ ಹನಮಂತ ಕೆ. ಮಾಲಿಪಾಟೀಲ ಹಟ್ಟಿ ನಿವಾಸಿಯಾದ ಇವರಿಗೆ ನೀಡಲಾಗಿದೆ.
2026ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ಕರ್ನಾಟಕ ನೋಂದಣಿ ಕಾಯ್ದೆ–1960ರ ನಿಯಮಾನುಸಾರ ಸಂಘದ ಸದಸ್ಯತ್ವವನ್ನು ನೀಡಲಾಗಿದ್ದು, ಸದಸ್ಯತ್ವದ ಅವಧಿ ಮೂರು ವರ್ಷಗಳಾಗಿರುತ್ತದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಘದ ಅಧ್ಯಕ್ಷರಾದ ಶರಣಬಸನಗೌಡ ಹೊರಪೇಟಿ, ವಿಶೇಷ ಅಧಿಕಾರಿಯಾದ ಮಂಜುನಾಥ ಎಸ್. ಅರಕೇರಿ ವಕೀಲರು ಹಾಗೂ ಕಾರ್ಯದರ್ಶಿ ನಿಂಗಪ್ಪ ಹಳ್ಳೂರ ಅವರು ಸದಸ್ಯತ್ವವನ್ನು ದೃಢಪಡಿಸಿದ್ದಾರೆ.
ಸಂಘದ ನಿಯಮಾವಳಿ ಹಾಗೂ ಉದ್ದೇಶಗಳಿಗೆ ಬದ್ಧರಾಗಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೂತನ ಸದಸ್ಯರಿಗೆ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.

ಹೆಚ್ಚಿನ ಸುದ್ದಿ