KRGRV
Tuesday, November 3, 2026
Homeಜಿಲ್ಲಾ ಸುದ್ದಿಗಳುದೋರನಹಳ್ಳಿಯಲ್ಲಿ ನಮ್ಮ ಕರ್ನಾಟಕ ಸೇನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಕನ್ನಡಾಭಿಮಾನಿಗಳ ಸಂಭ್ರಮ

ದೋರನಹಳ್ಳಿಯಲ್ಲಿ ನಮ್ಮ ಕರ್ನಾಟಕ ಸೇನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಕನ್ನಡಾಭಿಮಾನಿಗಳ ಸಂಭ್ರಮ

ದೋರನಹಳ್ಳಿ: ಸ್ಥಳೀಯ ಪಟ್ಟಣದಲ್ಲಿ ನಮ್ಮ ಕರ್ನಾಟಕ ಸೇನೆ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಂಭ್ರಮದಿಂದ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಇಂದಿ ಅವರು ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.

ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಕನ್ನಡದ ಅಸ್ಮಿತೆ ಹಾಗೂ ಭಾಷಾಭಿಮಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಅಭಿಪ್ರಾಯಪಟ್ಟರು.

ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸಾರ್ವಜನಿಕರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ದೋರನಹಳ್ಳಿ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಇಂದಿ, ಶರಣಪ್ಪ ದಿಗ್ಗಿ, ಭೀಮಶಂಕರ ಅಣಿಬಿ, ರಾಯಪ್ಪ ಬೇವಿನಹಳ್ಳಿ, ಅಮರೇಶ ತೇಲಗೂರ, ಸದ್ದಾಂ ಹುಸೇನ್ ಮಠ, ಸಾಯಿಬಣ್ಣ ಮಾಲಿ ಪಾಟೀಲ್, ನಮ್ಮ ಕರ್ನಾಟಕ ಸೇನೆ ಹೋಬಳಿ ಅಧ್ಯಕ್ಷ ದೋರನಹಳ್ಳಿ ಬೀರಪ್ಪ ಕೊಂತಲ್, ಹಯ್ಯಾಳಪ್ಪ ಗುಂಟ್ನೂರು, ಅಂಬಣ್ಣ ನಾಟೇಕಾರ್, ಸಿದ್ದು ಹೂಗಾರ್, ಮಾಂತೇಶ್ ಮಲ್ಗೊಂಡ, ರಾಜು ಗಾಟಿನ್, ದಶವಂತ್ ದೊರೆ, ಅಮರ್ ಘನತೆ, ಬಾಬು ಶೇಕಬಾಯಿ, ಸಾಗರ್ ಸಗರ್, ಸಾಯಿಬಣ್ಣ ಟೋಕಾಪುರ, ಶಿವು ಕಲಾಲ್, ಕಿರಣ್ ಗುಂಟ್ನೂರು, ಮಲ್ಲು ವನಿಗೇರಿ, ಭೀಮರಾಯ ಪಂಚಾಯತಿ, ರೆಡ್ಡಿ ಕುರುಕುಂದಿ, ದೇವರಾಜ್ ಕಲಾಲ್, ದೇವು ಶಹಾಪುರ, ಅಯ್ಯಪ್ಪ ದೊರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ