KRGRV
Saturday, August 15, 2026
Homeಜಿಲ್ಲಾ ಸುದ್ದಿಗಳುಮೂಲಭೂತ ಸೌಲಭ್ಯ ಕಲ್ಪಿಸುವಂತೆ ಅಲ್ಪಸಂಖ್ಯಾತರ ಹಾಸ್ಟೆಲ್ ಬಾಲಕರ ಆಗ್ರಹ.

ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಅಲ್ಪಸಂಖ್ಯಾತರ ಹಾಸ್ಟೆಲ್ ಬಾಲಕರ ಆಗ್ರಹ.

  ಜೇವರ್ಗಿ ಅ4 ::  ಜೇವರ್ಗಿ ಪಟ್ಟಣದಲ್ಲಿನ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಅಲ್ಲಿನ ಬಾಲಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲು ತೊಡಗಿಕೊಂಡಿದ್ದರು,

ತಕ್ಷಣ ಸಾಮಾಜಿಕ ಹೋರಾಟಗಾರ ಈರಣ್ಣಗೌಡ ಪಾಟೀಲ ಮತ್ತು ತಂಡ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು
ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಜೇವರ್ಗಿ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯ ದೊರೆಯುತ್ತಿಲ್ಲ ಅನೇಕ ಸಮಸ್ಯೆಗಳಿವೆ. 1.ವಿದ್ಯಾರ್ಥಿಗಳೇ ಓದಲು ಯಾವುದೇ ರೀತಿಯ ಪುಸ್ತಕಗಳು ಲಭ್ಯವಿಲ್ಲ

2. ಮೆನು ಚಾಟ್ ಪ್ರಕಾರ  ಊಟ ನೀಡುತ್ತಿಲ್ಲ.

3. ಸೋಲಾರ್ ನ ಬಿಸಿ ನೀರು ಸೌಲಭ್ಯ ದೊರಕುತ್ತಿಲ್ಲ ಆರು ತಿಂಗಳಾದರೂ ಸೋಲಾರ್ ರಿಪೇರಿ ಆಗಿಲ್ಲ.

4. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ.

5. ವಾಷಿಂಗ್ ಮಷೀನ್ ಬಂದಾಗಿ ಒಂದು ವರ್ಷವಾದರೂ ರಿಪೇರಿ ಆಗಿಲ್ಲ.

6. ಆಟವಾಡಲು ಯಾವುದೇ ರೀತಿಯ ಕ್ರೀಡೆ ಸಾಮಗ್ರಿಗಳು ನೀಡುತ್ತಿಲ್ಲ.

7. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇಲ್ಲ.

8. ಕಲ್ಬುರ್ಗಿ ಟು ಶಹಪುರ್ ಎಂ ಎಚ್ ರೋಡ್ ದಿಂದ ಹಾಸ್ಟೆಲ್ ಗೆ ಹೋಗಲು ವಿದ್ಯುತ್ ಇಲ್ಲ ಮತ್ತು ರೋಡ್ ಸರಿಯಿಲ್ಲ.


ಈ ಎಲ್ಲಾ ಸಮಸ್ಯೆಗಳು ಬಗೆಹರಿಸಬೇಕು ಒಂದು ವೇಳೆ ಬಗೆಹರಿಸಿದ ಪಕ್ಷದಲ್ಲಿ ಮುಖ್ಯ ಹೆದ್ದಾರಿಯನ್ನು ಬಂದ್ ಮಾಡಿ ಹೋರಾಟ ಮಾಡುವುದಾಗಿ ಎಚ್ಚರಿಕೆ. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಈರಣ್ಣಗೌಡ ಪಾಟೀಲ ಗುಳ್ಯಾಳ, ಖಾಲಿದ್, ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ