ಯಾದಗಿರಿ: KTPP ನಿಯಮಗಳ ಪ್ರಕಾರ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯಡಿ ಟೆಂಡರ್ ಪಡೆಯುವ ಸಂಸ್ಥೆಗಳು ಕಡ್ಡಾಯವಾಗಿ ಮಾನವ ಸಂಪನ್ಮೂಲ ಪೂರೈಕೆ ಎಂದೇ ಸ್ಪಷ್ಟವಾಗಿ ನೊಂದಾಯಿತವಾಗಿರಬೇಕು.
ಆದರೆ ಈ ಟೆಂಡರ್ನಲ್ಲಿ ಮಣೆ ಹಾಕಲು ಹೊರಟಿರುವ ‘ಶಾಪ್ ವಾಚ್ ಇನ್ವೆಸ್ಟ್ಮೆಂಟ್ ಸರ್ವಿಸಸ್’ ಸಂಸ್ಥೆಯ ದಾಖಲೆಯಲ್ಲಿ ಕೇವಲ ಸೆಕ್ಯುರಿಟಿ/ಹೌಸ್ ಕೀಪಿಂಗ್ ಎಂದಷ್ಟೇ ಇದ್ದು, ಟೆಂಡರ್ಗೆ ಅತ್ಯಂತ ಕಡ್ಡಾಯವಾಗಿಬೇಕಾದ ‘ಮ್ಯಾನ್ ಪವರ್ ಸಪ್ಲೈ’ ಎಂಬ ಮೂಲ ನೊಂದಣಿಯೇ ಇಲ್ಲ!
ಇಂತಹ ಅರ್ಹತೆ ಇಲ್ಲದ, ಇಂತಹ ಅನರ್ಹ ಸಂಸ್ಥೆಗಳಿಗೆ ಕೋಟ್ಯಂತರ ರೂ. ಸಾರ್ವಜನಿಕ ಹಣದ ಗುತ್ತಿಗೆ ನೀಡಲು ಅಧಿಕಾರಿಗಳು ಹುನ್ನಾರ ನಡೆಸಿರುವುದು ಗಂಭೀರ ವಂಚನೆಯಾಗಿದೆ.ಕಡತ ನಾಶಪಡಿಸಿರುವ ಇತಿಹಾಸವಿರುವ ಭ್ರಷ್ಟ ಅಧಿಕಾರಿಗಳು:
ಇದೇ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಿಂದೆ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳನ್ನು ಸ್ವೀಕರಿಸಿ, ಸರ್ಕಾರಿ ಕಡತದ ಟಿಪ್ಪಣಿ ಹಾಳೆಗಳನ್ನು (ನೋಟ್ ಶೀಟ್ಸ್) ಸಂಪೂರ್ಣವಾಗಿ ನಾಶಪಡಿಸಿ, ದಾಖಲೆಗಳನ್ನು ತಿರುಚಿರುವುದು ಜಿಲ್ಲಾ ಪಂಚಾಯತ್ ಅಧಿಕೃತ ತನಿಖಾ ವರದಿಯಲ್ಲೇ ಬಹಿರಂಗವಾಗಿದೆ.
ಇದು ಮಾತ್ರವಲ್ಲದೆ ದಾಖಲೆಗಳಿಗೆ ಮುಖ್ಯ ಲೆಕ್ಕಾಧಿಕಾರಿಗಳ ಸಹಿಯೇ ಇಲ್ಲ ಕೋಟಿಗಟ್ಟಲೆ ಹಣಕಾಸು ಹಾಗೂ ಸಾರ್ವಜನಿಕ ನಿಧಿ ವ್ಯವಹರಿಸುವ ಇಂತಹ ಪ್ರಮುಖ ಟೆಂಡರ್ ಕಡತದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳ ಕಡ್ಡಾಯ ಅನುಮೋದನೆ ಮತ್ತು ಸಹಿ ಇರಲೇಬೇಕು. ಆದರೆ ಈ ಕಡತದಲ್ಲಿ ಮುಖ್ಯ ಲೆಕ್ಕಾಧಿಕಾರಿಗಳ ಸಹಿಯೇ ಇಲ್ಲದಿರುವುದು ಬಹಿರಂಗವಾಗಿ ನಿಯಮಾವಳಿ ಉಲ್ಲಂಘನೆಯಾಗಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿ ಅವರು ಆರೋಪಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ತಮ್ಮ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮಗೆ ಬೇಕಾದ ಆಯ್ಕೆಭ್ರಷ್ಟ ಸಂಸ್ಥೆಗಳಿಗೆ ಈ ಗುತ್ತಿಗೆಯನ್ನು ಕಲ್ಪಿಸಿಕೊಡಲು ತೆರೆಮರೆಯಲ್ಲಿ ನಡೆಸಿರುವ ವ್ಯವಸ್ಥಿತ ಶಾಮೀಲು ಮತ್ತು ಸ್ವಜನಪಕ್ಷಪಾತವಾಗಿದೆ.
ಆದ್ದರಿಂದ ಈ ಎಲ್ಲ ಗಂಭೀರ ಸ್ವರೂಪದ ಕರ್ತವ್ಯಲೋಪ, ಕಡತ ತಿರುಚುವುದು, ನೀತಿ ಸಂಹಿತೆ ಉಲ್ಲಂಘನೆ ಮತ್ತು ನಕಲಿ ದಾಖಲೆಗಳ ಹಗರಣದ ಬಗ್ಗೆ ಈಗಾಗಲೇ ನಾನು ಮಾನ್ಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಅಧಿಕೃತವಾಗಿ ಸಾಕ್ಷೇ ಸಮೇತ ದೂರು ದಾಖಲಿಸಿರುವುದಾಗಿ ತಿಳಿಸಿದರು.
ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಉನ್ನತ ಮಟ್ಟದ ಕೂಲಂಕುಷ ತನಿಖೆ ನಡೆಸಬೇಕು.
ಒಂದುವೇಳೆ ಜಿಲ್ಲಾಡಳಿತ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲವಾದರೆ, ಸಾರ್ವಜನಿಕರ ಪರವಾಗಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಗಂಭೀರವಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯರ್ಶಿ ಎಸ್. ನಿಜಲಿಂಗಪ್ಪ ಪೂಜಾರಿ, ಅಲ್ಪಸಂಖ್ಯಾತರ ಜಿಲ್ಲಾ ಪ್ರಧಾನ ಕಾರ್ಯರ್ಶಿ ಮೊಹಮ್ಮದ್ ರಫೀಕ್, ಯುವ ಘಟಕದ ಜಿಲ್ಲಾಧ್ಯಕ್ಷ ಚಾಂದಪಾಷ ಮನಗನಾಳ, ತಾಲ್ಲೂಕು ಅಧ್ಯಕ್ಷ ತಾಯಪ್ಪ ಇದ್ದರು.

