KRGRV
Tuesday, September 22, 2026
Homeಬೆಂಗಳೂರುಹಗರಣ, ಭ್ರಷ್ಟಾಚಾರವನ್ನೂ ಚರ್ಚಿಸಿ:ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಹಗರಣ, ಭ್ರಷ್ಟಾಚಾರವನ್ನೂ ಚರ್ಚಿಸಿ:ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಬೆಂಗಳೂರು: ರಾಜ್ಯ ಸರಕಾರವು ಈ ಅಧಿವೇಶನದಲ್ಲಿ ಹಗರಣಗಳು, ಭ್ರಷ್ಟಾಚಾರ, ಕಾನೂನು- ಸುವ್ಯವಸ್ಥೆಯಂಥ ವಿಚಾರಗಳನ್ನೂ ಚರ್ಚಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಅಧಿವೇಶನದಲ್ಲಿ ಕೇವಲ ಕಸ್ತೂರಿರಂಗನ್ ಅವರ ವರದಿಯ ವಿಚಾರ ಮತ್ತು ಬರ ಪರಿಸ್ಥಿತಿಯ ಎರಡೇ ವಿಚಾರಗಳನ್ನು ಚರ್ಚೆ ಮಾಡಬೇಕು ಅನ್ನುವುದು ಇದು ಸರ್ಕಾರದ ವಾದ. ಇದು ವಿಶೇಷ ಅಧಿವೇಶನ ಎಂದಿದ್ದಾರೆ. ಕಾನೂನು ಪ್ರಕಾರ ಇದು ವಿಶೇಷ ಅಧಿವೇಶನ ಅಲ್ಲ ಎಂದು ತಿಳಿಸಿದರು.

24ನೇ ಆಗಸ್ಟ್ 2026 ರಂದು ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಲಾಗಿದ್ದ ವಿಧಾನ ಪರಿಷತ್ತಿನ 159ನೇ ಅಧಿವೇಶನದ ಮುಂದುವರೆದ ಉಪವೇಶನವು ಅಂತ ಇದೆ. ಆದ್ದರಿಂದ ಇದು 24 ಕ್ಕೆ ಅನಿರ್ದಿಷ್ಟ ಕಾಲ ಮುಂದೂಡಿದ ಅಧಿವೇಶನದ ಮುಂದುವರೆದ ಭಾಗ ಎಂದಾಗುತ್ತದೆ.

ಅಂದಮೇಲೆ ಇದು ವಿಶೇಷ ಅಧಿವೇಶನ ಆಗಲಿಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದರು. ಅಗತ್ಯ ವಿಧಿವಿಧಾನ ಪೂರ್ಣವಾಗಿಲ್ಲ; ಈ ವಿಧಿವಿಧಾನ ಪೂರ್ಣಗೊಳ್ಳಲು ಮಾನ್ಯ ರಾಜ್ಯಪಾಲರು ಅಂಕಿತ ಹಾಕಬೇಕಿತ್ತು. ಆದರೆ, ಅದು ಆಗಿಲ್ಲ. ಅದರ ಮಧ್ಯದಲ್ಲಿ ಇವರು ವಿಶೇಷ ಅಧಿವೇಶನ ಕರೆಯಲಿಕ್ಕೆ ಬರುವುದೇ ಇಲ್ಲ. ಕೇವಲ ಎರಡೇ ವಿಷಯ ಚರ್ಚೆ ಮಾಡಬೇಕು ಅಂತಂದ್ರೆ ಅದನ್ನು ನಾವು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂದರು.

ಅನೇಕ ವಿಚಾರಗಳು ಮತ್ತು ಸಮಸ್ಯೆಗಳು ರಾಜ್ಯದಲ್ಲಿವೆ. ಭ್ರμÁ್ಟಚಾರದ ವಿಚಾರಗಳಿವೆ. ಪೆÇಲೀಸ್, ಸುಲಿಗೆ, ಅತ್ಯಾಚಾರಗಳ ವಿಚಾರಗಳಿವೆ. ಇನ್ನು ಅನೇಕ ವಿಷಯಗಳ ಬಗ್ಗೆ ಚರ್ಚೆ ಆಗಬೇಕಾಗಿರುವುದರಿಂದ ನಾವು ಯಾವುದೇ ಚರ್ಚೆಯನ್ನು ಎತ್ತಿಕೊಳ್ಳಬಹುದು. ಸರ್ಕಾರ ಒಂದು ತಪ್ಪು ಮಾಹಿತಿಯನ್ನು ಕಿವಿಯಲ್ಲಿ ಇಟ್ಟುಕೊಂಡ ಹಾಗಿದೆ. ನಾವು ಹೇಳಿದ್ದೇ ಆಗಬೇಕು ಅನ್ನೋದು ಇದೆಯಲ್ಲ.. ಇದು ತಪ್ಪು ಕಲ್ಪನೆ. ಸದನ ಸರ್ಕಾರದ ಆಸ್ತಿ ಅಲ್ಲ. ಸದನ ಯಾವತ್ತೂ ಸದಸ್ಯರು ಮತ್ತು ಸದಸ್ಯರ ಪ್ರಾಪರ್ಟಿ ಆಗುತ್ತದೆ ಎಂದು ತಿಳಿಸಿದರು.
ಒಂದು ಸಾರಿ ಕರೆದ ಮೇಲೆ ಸದಸ್ಯರ ಆಲೋಚನೆಗಳನ್ನು ಮನದಲ್ಲಿ ಇಟ್ಟುಕೊಂಡು ಚರ್ಚೆಗಳಾಗಬೇಕಾಗುತ್ತದೆ.

ಯಾಕೆಂದರೆ ಅದು ಜನಸಾಮಾನ್ಯರ ವಿಷಯಗಳನ್ನು ಚರ್ಚೆ ಮಾಡತಕ್ಕಂತ ವೇದಿಕೆ. ಆ ಕಾರಣದಿಂದ ನಾವು ಇದನ್ನು ಒಪ್ಪಲಿಕ್ಕೆ ಸಾಧ್ಯ ಇಲ್ಲ ಎಂದರು. ಇವತ್ತು ಯುವಕರು ಸಂಕಷ್ಟದಲ್ಲಿದ್ದಾರೆ ಕೆಪಿಎಸ್ಸಿ ಹಗರಣಗಳಿವೆ. ಹಲವು ವಿಷಯಗಳನ್ನು ನಾವು ಚರ್ಚೆ ಮಾಡಲೇಬೇಕಾಗಿದೆ; ಅವನ್ನು ನಾವು ಅಲ್ಲಿ ಎತ್ತಲಿದ್ದೇವೆ ಎಂದರು.

ಹೆಚ್ಚಿನ ಸುದ್ದಿ