ಒಂದೇ ಬಾರಿಗೆ ಘೋಷಿಸಬೇಕು ಎನ್ನುವ ಬಿಜೆಪಿಯವರು ಮಾನದಂಡ ಬದಲಿಸುವಂತೆ ಕೇಂದ್ರವನ್ನು ಒತ್ತಾಯಿಸಲಿ- ಶಿವರಾಜ ತಂಗಡಗಿ ಆಗ್ರಹ
ಕೊಪ್ಪಳ: ಸೆ.17 : ಜಿಲ್ಲೆಯ ತಾಲೂಕುಗಳ ಬರ ಘೋಷಣೆ ವಿಚಾರದನನ್ನಫ
ಯಾವುದೇ ತಾರತಮ್ಯ, ರಾಜಕೀಯ ಮಾಡಿಲ್ಲ. ಕೇಂದ್ರದ ಮಾನದಂಡಗಳ ಪ್ರಕಾರ ಘೋಷಿಸುತ್ತಿದ್ದು, ಸದ್ಯದಲ್ಲೇ ಕೊಪ್ಪಳದ ಉಳಿದ ಎಲ್ಲಾ ತಾಲೂಕುಗಳಲ್ಲೂ ನಿಯಮಗಳ ಪ್ರಕಾರ ಬರ ಘೋಷಿಸಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕಲ್ಯಾಣ ಕರ್ನಾಟಕದ 79ನೇ ವರ್ಷದ ಉತ್ಸವದಲ್ಲಿ ಭಾಗಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಮೊದಲನೇ ಹಂತದಲ್ಲಿ ಕನಕಗಿರಿ, ಗಂಗಾವತಿ, ಕಾರಟಗಿಯಲ್ಲಿ ಬರ ಘೋಷಿಸಲಾಗಿದೆ. ಸದ್ಯದಲ್ಲೇ ಉಳಿದೆಡೆ ಬರ ಘೋಷಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದರು.
ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳಿವೆ. ಎಲ್ಲಿ ತೇವಾಂಶ ಇಲ್ಲ, ಡ್ರೈ ಸ್ಪೆಲ್ ಇದೆ, ಎಷ್ಟು ವಾರಗಳ ಕಾಲ ಮಳೆಯಾಗಿಲ್ಲ, ಎಷ್ಟು ಕೊರತೆಯಾಗಿದೆ, ಬೆಳೆ ಹಾನಿ ಆಗಿದೆ ಎಂಬಿತ್ಯಾದಿ ಅಂಶಗಳನ್ನು ಪರಿಶೀಲಿಸಿ ತಳಮಟ್ಟದ ವರದಿ ಆಧಾರದ ಮೇಲೆ ಮಾಡಬೇಕಾಗುತ್ತದೆ.
ಇದರಲ್ಲಿ ಯಾವುದೇ ತಾರತಮ್ಯ, ರಾಜಕಾರಣ ಮತ್ತೊಂದು ಇಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಾಡಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಡ್ರೈ ಸ್ಪೆಲ್ ಆಧಾರದ ಮೇಲೆ ಮಾಡಬೇಕು ಎಂದು ಉಪಕರಣಗಳನ್ನು ಕೊಟ್ಟಿದ್ದಾರೆ. ಒಂದೇ ಹಂತದಲ್ಲಿ ಮಾಡಬೇಕಾದರೆ ಬಿಜೆಪಿಯವರು ಕೇಂದ್ರ ಸರ್ಕಾರದ ಮಾನದಂಡ ಬದಲಿಸಲು ಒತ್ತಡ ಹೇರಲಿ ಎಂದು ಆಗ್ರಹಿಸಿದರು.
ಬರದ ವಿಚಾರದಲ್ಲಿ ರಾಜಕೀಯ ಸಲ್ಲ; ಕುಷ್ಟಗಿ ಮಾಡಿಲ್ಲ ಅದು ಮಾಡಿಲ್ಲ ಇದು ಮಾಡಲ್ಲ ಎಂದು ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ.
ಗಂಗಾವತಿಯಲ್ಲಿ ನೀರಾವರಿ ಇದ್ದರೂ ಘೋಷಣೆ ಮಾಡಿದ್ದೇವೆ ಎನ್ನುತ್ತೀರಿ. ಅಲ್ಲಿ ಮಳೆ -73 ಎಂ.ಎಂ. ಆಗಿದೆ. ಕೊಪ್ಪಳ -53, ಕುಷ್ಟಗಿ -46 ಆಗಿದೆ. ಕುಷ್ಟಗಿಯಲ್ಲಿ ವಿರೋಧಪಕ್ಷದ ಮುಖ್ಯಸಚೇಕರಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಕೇಂದ್ರದ ಬಳಿ ಮಾನದಂಡ ಬದಲಿಸಲಿ. ಆದರೂ ಕುಷ್ಟಗಿ ತಾಲೂಕನ್ನೂ ಬರಪೀಡಿತ ಎಂದು ಘೋಷಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಬಿಜೆಪಿಯ ರೈತರ ಸಂವಾದ ನೋಡಿದ್ದೇನೆ. ಅದರಲ್ಲಿ ಇಬ್ಬರು ಇಸ್ಪೀಟು ರೈತರಿದ್ದರು. ಅವರನ್ನು ಇಸ್ಪೀಟು ರೈತರನ್ನಾಗಿ ಮಾಡಿದವರು ಯಾರು? ಬಿಜೆಪಿಯವರು, ಇದೇ ಬಸವರಾಜ ಧಡೆಸಗೂರು ಅಲ್ಲವೇ?
ಶಿವರಾಜ ತಂಗಡಗಿ ಹೆಸರು ಹೇಳಿದರೆ ನಾನು ಬಹಳ ದೊಡ್ಡವನಾಗ್ತೀನಿ ಎಂದುಕೊಂಡು ಮಾತನಾಡಿದ್ದಾರೆ.
ಅದರೆ ನಮ್ಮ ಕಡೆ ಒಂದು ಶಾಸ್ತ್ರ ಇದೆ. ಸಗಣಿ ಹುಳ ಏಳು ಅಡಿ ನಾಗರ ಹಾವಿಗೆ ಧಮ್ಕಿ ಹಾಕಿತ್ತಂತೆ. ಕಚ್ಚಿದರೆ ಬಾಯೆಲ್ಲಾ ಸಗಣಿ ಆಗುತ್ತದೆ ಎಂದು ನಾಗಪ್ಪ ಸುಮ್ಮನೆ ಹೋಯಿತಂತೆ. ಅದಕ್ಕೆ ಸಗಣಿ ಹುಳ ನನಗೆ ಹೆದರಿ ಹೋಗಿದೆ ಎಂದು ಅಹಂಕಾರ ಮೆರೆಯಿತಂತೆ. ಹಾಗೆ ಆಗಿದೆ ಇವರ ಕತೆ ಎಂದು ಲೇವಡಿ ಮಾಡಿದರು.
ಅಂಥಹ ಹುಳ ಎರಡು ಕ್ಷೇತ್ರದಲ್ಲಿ ಇವೆ.
ನಮ್ಮಲ್ಲಿ ರೈತರ ಹೋರಾಟಗಾರರು, ರೈತರ ಸಮಸ್ಯೆ ಹೇಳುವವರು ಸುಮಾರು ಜನ ಇದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವವರು ಇದ್ದಾರೆ. ನನ್ನ ಕ್ಷೇತ್ರದಲ್ಲೂ ಇದಾರೆ. ಆದರೆ ಈ ಇಬ್ಬರು ಇಸ್ಪೀಟ್ ರೈತರ ಬಗ್ಗೆ ವಿಜಯೇಂದ್ರ ಅವರು ಪಕ್ಕದಲ್ಲಿದ್ದ ಉಂಡಾಡಿ ಗುಂಡನ ಕೇಳಿದರೆ ಹೇಳಿಬಿಡುತ್ತಿದ್ದ ಎಂದು ವ್ಯಂಗ್ಯವಾಡಿದರು.

