ಧಾರವಾಡ: ಬೆಳೆಗಾರರ ಪ್ರಮುಖ ಬೇಡಿಕೆಯಾದ ಟನ್ ಕಬ್ಬಿಗೆ 5,500 ರು. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಹಿಸಿಕೊಂಡು ಒಂದು ಸಮಿತಿಯನ್ನು ರಚಿಸಿ ರಾಷ್ಟ್ರಾದ್ಯಂತ ಎಲ್ಲರಿಗೂ ಅನುಕೂಲ ಆಗುವಂತೆ ಬೆಲೆ ನಿಗದಿ ಮಾಡಲಾಗುವುದು ಎಂದು ಮಧ್ಯ ರಾತ್ರಿ ನಡೆದ ಸಭೆಯಲ್ಲಿ ತಿಳಿಸಿದರು.
ಕಬ್ಬು ಬೆಳೆಗೆ ದರ ನಿಗದಿ ಮತ್ತು ರಾಜ್ಯದಲ್ಲಿ ಕಬ್ಬು ಕಾರ್ಖಾನೆಗಳು ಕಬ್ಬು ನುರಿಸುವಂತಿಲ್ಲ ಎಂಬ ಎರಡು ಷರತ್ತುಗಳೊಂದಿಗೆ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ತಮ್ಮ ಪಾದಯಾತ್ರೆಯನ್ನು ಕಬ್ಬು ಬೆಳೆಗಾರರು ಸ್ಥಗಿತಗೊಳಿಸಿದ್ದಾರೆ.
ರೈತರ ಹೋರಾಟ ತಾತ್ಕಾಲಿಕವಾಗಿ ಸ್ಥಗಿತ
ಭರವಸೆ ಈಡೇರಿಕೆಗೆ ನೀಡಿದ್ದ ಗಡುವಿನೊಳಗೆ ಕೇಂದ್ರ ಸರ್ಕಾರ ಭರವಸೆ ನೀಡದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಬೆಳಗಾವಿಯ ಕಿತ್ತೂರಿನಿಂದ ಪುನಾರಂಭಗೊಂಡ ರೈತರ ಪಾದಯಾತ್ರೆ ರಾತ್ರಿ ವೇಳೆ ಧಾರವಾಡ ಗಡಿ ಗ್ರಾಮ ತೇಗೂರಿಗೆ ಬಂದು ತಲುಪಿತು. ಅಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೇಂದ್ರ ಸರ್ಕಾರದ ಪರವಾಗಿ ನೀಡಿದ ಕೆಲವು ಭರವಸೆಗಳ ಹಿನ್ನೆಲೆಯಲ್ಲಿ ರೈತ ಮುಖಂಡ ಚೂನಪ್ಪ ಪೂಜಾರ ಅವರು ರೈತರ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಜಿಲ್ಲಾಧಿಕಾರಿ ಮೇಲಿನ ನಂಬಿಕೆಯಿಂದ ಸದ್ಯಕ್ಕೆ ಈ ಹೋರಾಟ ಸ್ಥಗಿತ ಮಾಡುತ್ತಿದ್ದೇವೆ. ಶೀಘ್ರವೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಇಲ್ಲದೇ ಹೋದಲ್ಲಿ ಮತ್ತೆ ಹೋರಾಟ ಶುರುವಾಗಲಿದೆ ಎಂದು ಎಚ್ಚರಿಸಿದರು.
ಸಕ್ಕರೆ ಕಾರ್ಖಾನೆ ಆರಂಭಿಸುವುದಿಲ್ಲ
ಎಂಎಸ್ಪಿ ನಿಗದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಭೆ ಕರೆಯಬೇಕು. ಆ ಸಭೆಗೆ ರೈತರನ್ನು ಆಹ್ವಾನಿಸಬೇಕು ಎಂದು ರೈತ ಮುಖಂಡರು ಷರತ್ತು ಹಾಕಿದರು. ಇದಕ್ಕೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಪರಿಹಾರ ಕೊಡಿಸುವ ಜವಾಬ್ದಾರಿ ತಮ್ಮದು ಎಂದು ಹೇಳಿದರು. ಅಲ್ಲದೆ, ಸಮಸ್ಯೆ ಬಗೆಹರಿಯುವವರೆಗೆ ಸಕ್ಕರೆ ಕಾರ್ಖಾನೆ ಆರಂಭಿಸುವುದಿಲ್ಲ ಎಂದು ಭರವಸೆ ನೀಡಿದರು.
ಕಳೆದ ಅ.14ರಂದು ಬೆಳಗಾವಿಯ ಹತ್ತರಗಿ ಟೋಲ್ಗೇಟ್ ನಿಂದ ರೈತರ ಪಾದಯಾತ್ರೆ ಆರಂಭ ಆಗಿತ್ತು. ಐದನೇ ದಿನ ಭಾನುವಾರ ಧಾರವಾಡ ಪ್ರವೇಶ ಆಗಿತ್ತು. ಬೇಡಿಕೆ ಈಡೇರಿಕೆ ಆಗದೇ ಹೋದಲ್ಲಿ ಅ.22ರಂದು ಧಾರವಾಡದಲ್ಲಿ ಲಕ್ಷಗಟ್ಟಲೇ ರೈತರನ್ನು ಸೇರಿಸಿ ದೊಡ್ಡ ಹೋರಾಟ ಮಾಡುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದ್ದರು.
ಕಬ್ಬು ರೈತರ ಹೋರಾಟಕ್ಕೆ ತಾತ್ಕಾಲಿಕ ತೆರೆ!
ಮಧ್ಯ ರಾತ್ರಿ ನಡೆದ ಸಭೆ ಯಶಸ್ವಿ
ಸಂಧಾನ ಯಶಸ್ವಿಯಾದ ಹಿನ್ನಲೆಯಲ್ಲಿ ರೈತರ ಎರಡು ಬೇಡಿಕೆಗಳ ಈಡೇರಿಕೆ ಹೊಣೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಗಲಿಗೆ. ಮುಂದಿನ ಬೆಳವಣಿಗೆಗಳ ಮೇಲೆ ರೈತರ ಗಮನ! ರಾಷ್ಟ್ರದ ಎಲ್ಲಾ ರೈತರು ಒಳಗೊಂಡಂತೆ ಒಂದೇ ಬೆಲೆ ನಿಗದಿ ಮಾಡಬೇಕು ಆದರಿಂದ ಸಮಿತಿ ರಚನೆ ಮಾಡಲಾಗಿದೆ, ಸಮಿತಿಯ ವರದಿಯನ್ನು ಆಧರಿಸಿ ಜಾರಿಗೆ ತರಲು ಮುಂದಾಗುತ್ತೇನೆ ಎಂದ ನಮ್ಮ ಮಾನ್ಯ ಪ್ರಹ್ಲಾದ ಜೋಶಿಯವರು ರೈತರಿಗೆ ಮಾತು ನೀಡಿದರು
ಸಂಪಾದಕರು: ರಾಮಚಂದ್ರಪ್ಪ ಪೂಜೇರ

