ಸದ್ಯ ಜೀವನ ಚೆನ್ನಾಗಿದೆ. ಜೀವನ ಚೆನ್ನಾಗಿ ನಡೆಯುತ್ತಿದೆ. ಸಿನಿಮಾ ಕೆಲಸಗಳು ನಡೆಯುತ್ತಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದೇನೆ. ನಾನೀಗ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಮನಸ್ಥಿತಿಯಲ್ಲಿದ್ದೇನೆ ಎಂದು ಲವ್ ಮಾಕ್ಟೇಲ್, ಬಡವ ರಾಸ್ಕಲ್, ಹೊಯ್ಸಳ, ಪಾಪ್ ಕಾರ್ನ್ ಮಂಕಿ ಟೈಗರ್, ಅಬ್ಬಬ್ಬಾ, ಲವ್ ಮಾಕ್ಟೇಲ್-2 ಚಿತ್ರಗಳ ನಾಯಕಿ, ನಟಿ ಅಮೃತ ಅಯ್ಯಂಗಾರ್ ಹೇಳಿದ್ದಾರೆ.
ಅಷ್ಟಕ್ಕೂ ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ತಲೆಕೆಡಿಸಿಕೊಂಡಿರುವುದು ಸಾಕು. ಬೇಜಾರಾಗಿರುವುದು ಸಾಕು. ಬೇಜಾರಾಗಿದ್ದರೆ ಅಲ್ಲಿಯೇ ಕುಳಿತಿರುತ್ತೇವೆ. ಈಗ ತುಂಬಾ ಕಾಂಪಿಟೇಷನ್ ಇದೆ. ಹೀಗಾಗಿ ಬೇಜಾರು ಮಾಡಿಕೊಂಡು ಡಿಪ್ರೆಷನ್‌ನಲ್ಲಿ ಕೂರಲು ಸಮಯ ಇಲ್ಲ ಎಂದು ಮನವರಿಕೆಯಾಗಿ ಮುಂದೇನು ಕೆಲಸ ಮಾಡಬೇಕು ಮುಂದಿನ ಗುರು ಏನು ಎನ್ನುವುದರ ಬಗ್ಗೆ ಆಲೋಚನೆ ಇದೆ ಎಂದರು.