KRGRV
Wednesday, November 19, 2025
Homeಜಿಲ್ಲಾ ಸುದ್ದಿಗಳುನಾನು ಗೋಕಾಕ ಶಾಸಕ ಜಾರಕಿಹೊಳಿ… ಎಂದು ಪೊಲೀಸರಿಗೇ ಧಮ್ಕಿ ಹಾಕಿದ್ದವ ಅಂದರ್

ನಾನು ಗೋಕಾಕ ಶಾಸಕ ಜಾರಕಿಹೊಳಿ… ಎಂದು ಪೊಲೀಸರಿಗೇ ಧಮ್ಕಿ ಹಾಕಿದ್ದವ ಅಂದರ್

ಬೆಳಗಾವಿ : ನಾನು ಗೋಕಾಕ ಶಾಸಕ ಜಾರಕಿಹೊಳಿ ಎಂದು ಹೇಳಿ ಪೊಲೀಸರಿಗೆ ಧಮ್ಕಿ ಕೊಟ್ಟಿದ್ದ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ ಮಾಹಿತಿ ನೀಡಿದ್ದಾರೆ.

ಅರಬಾವಿಯ ಸುನೀಲ ದಾಸರ್ ಬಂಧಿತ ವ್ಯಕ್ತಿ. ಈತ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸಂದರು, ಮುಖ್ಯಮಂತ್ರಿಗಳ ಹೆಸರನ್ನು ಸಹ ಬಳಸಿಕೊಂಡು ಪೊಲೀಸರಿಗೆ ಪೋನ್ ಮಾಡಿ ಬೆದರಿಕೆ ಹಾಕಿದ್ದ. ನಾನು ಹೇಳಿದಂತೆ ಮಾಡದಿದ್ದಲ್ಲಿ ನಿಮ್ಮನ್ನೆಲ್ಲ ಎತ್ತಂಗಡಿ ಮಾಡಿಸುತ್ತೇನೆ ಎಂದು ಆವಾಜ್ ಹಾಕಿದ್ದ.
2019ರಲ್ಲಿ ಲೋಕಸಭಾ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಂದು ಗೊತ್ತಾಗಿದೆ.

ಈ ಕುರಿತು ವಿಚಾರಣೆ ನಡೆಸಿದಾಗ, ಈತನ ತಾಯಿ ವಿರುದ್ಧ 2 ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ಆತ ಈ ರೀತಿ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಇನ್ನೂ ಯಾರಿಗಾದರೂ ಈತ ಬೆದರಿಕೆ ಹಾಕದ್ದನೋ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಯಾರಾದರೂ ದೌರ್ಜನ್ಯಕ್ಕೊಳಗಾಗಿದ್ದರೆ ದೂರು ನೀಡಿ ಎಂದು ಎಸ್ಪಿ ಭೀಮಾ ಶಂಕರ ಗುಳೇದ ಕೋರಿದ್ದಾರೆ.

ಹೆಚ್ಚಿನ ಸುದ್ದಿ