ನಾನು ಗೋಕಾಕ ಶಾಸಕ ಜಾರಕಿಹೊಳಿ… ಎಂದು ಪೊಲೀಸರಿಗೇ ಧಮ್ಕಿ ಹಾಕಿದ್ದವ ಅಂದರ್

ಬೆಳಗಾವಿ : ನಾನು ಗೋಕಾಕ ಶಾಸಕ ಜಾರಕಿಹೊಳಿ ಎಂದು ಹೇಳಿ ಪೊಲೀಸರಿಗೆ ಧಮ್ಕಿ ಕೊಟ್ಟಿದ್ದ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ ಮಾಹಿತಿ ನೀಡಿದ್ದಾರೆ. ಅರಬಾವಿಯ ಸುನೀಲ ದಾಸರ್ ಬಂಧಿತ ವ್ಯಕ್ತಿ. ಈತ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸಂದರು, ಮುಖ್ಯಮಂತ್ರಿಗಳ ಹೆಸರನ್ನು ಸಹ ಬಳಸಿಕೊಂಡು ಪೊಲೀಸರಿಗೆ ಪೋನ್ ಮಾಡಿ ಬೆದರಿಕೆ ಹಾಕಿದ್ದ. ನಾನು ಹೇಳಿದಂತೆ ಮಾಡದಿದ್ದಲ್ಲಿ ನಿಮ್ಮನ್ನೆಲ್ಲ ಎತ್ತಂಗಡಿ ಮಾಡಿಸುತ್ತೇನೆ ಎಂದು ಆವಾಜ್ ಹಾಕಿದ್ದ.2019ರಲ್ಲಿ ಲೋಕಸಭಾ […]
ಕರಾವಳಿಯ ವಿಶಿಷ್ಟ ಆಚರಣೆ ಸಮುದ್ರ ಪೂಜೆ ಮೀನುಗಾರರ ವೈಶಿಷ್ಟ್ಯ ಕಾರ್ಯಕ್ರಮ

ಮಂಗಳೂರು, ಅಗಸ್ಟ್ : ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಸಮುದ್ರ ಪೂಜೆಯ ಮಂಗಳೂರಿನ ತಣ್ಣಿರು ಬಾವಿ ಕಡಲ ಕಿನಾರೆಯಲ್ಲಿ ನೆರವೇರಿಸಲಾಯಿತು. ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ದ ವತಿಯಿಂದ ಪರಂಪರೆಯಂತೆ ಸಮುದ್ರ ಪೂಜೆ ನೆರವೇರಿಸಲಾಯಿತು. ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಹೊಯಿಗೆ ಬಜಾರ್, ಬೋಳಾರ, ಜಪ್ಪು, ನೀರೇಶ್ವಾಲ್ಯ, ಪಡು ಹೊಯಿಗೆ, ಮೊಗವೀರ ಪಟ್ಣ ಸಭೆಗಳ ಒಳಪಟ್ಟ ಮೋಗವೀರರು ಕದ್ರಿಯ ಸುವರ್ಣ ಕದಳೀ ಮಠಾಧೀಶ ಶ್ರೀ ರಾಜಯೋಗಿ ನಿರ್ಮಲಾನಾಥಜೀ ಮಹಾರಾಜ್ ಅವರ ನೇತೃತ್ವದಲ್ಲಿ ಸಮುದ್ರ ಪೂಜೆ ನೆರವೇರಿಸಿದರು. ಇಂದು ಚಂದ್ರ […]
Severe drought in Karnataka : ಕರ್ನಾಟಕದಲ್ಲಿ ತೀವ್ರ ಬರಗಾಲ, ರೈತರು, ಜನರಿಗೆ ಸಂಕಷ್ಟ!

ಬೆಂಗಳೂರು: 2023 ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲದ ವರ್ಷವಾಗಲಿದೆ. ರಾಜ್ಯದಲ್ಲಿ 2001 ರಿಂದ ಇಲ್ಲಿಯವರೆಗೆ 16 ಬರಗಾಲದ ವರ್ಷಗಳು ದಾಖಲಾಗಿದ್ದರೂ, ಈ ಬಾರಿ ಕಳೆದ 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಈ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ಗಳು ಕಡಿಮೆ ಮಳೆಯನ್ನು ದಾಖಲಿಸಿವೆ, ಇದರ ಪರಿಣಾಮವಾಗಿ 236 ತಾಲ್ಲೂಕುಗಳ ಪೈಕಿ 223 ಬರಪೀಡಿತ ಎಂದು ಘೋಷಿಸಲಾಗಿದೆ. ಈ ವರ್ಷವೂ ರಾಜ್ಯ ‘ಹಸಿರು ಬರ’ ಕಂಡಿದೆ. ಕರ್ನಾಟಕಕ್ಕೆ ಬರ ಪರಿಸ್ಥಿತಿ ಅವಲೋಕಿಸಲು ಅಂತರ್ಸಚಿವಾಲಯದ ಕೇಂದ್ರ ತಂಡ ಆಗಮಿಸಿದ್ದಾಗ ಕಂದಾಯ […]
Karnataka Govt Holidays : 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

ಬೆಂಗಳೂರು : ಮುಂಬರುವ ವರ್ಷ 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನ (Public Holidays) ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲಾ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳು ರಜೆ ಇರಲಿವೆ. ಇವುಗಳು ಸೇರಿದಂತೆ ಸರ್ಕಾರದ ಕ್ಯಾಲೆಂಡರ್ ಪ್ರಕಾರ ಘೊಷಿಸಲಾಗಿರುವ ಸಾರ್ವತ್ರಿಕ ರಜಾ (Government Holidays) ದಿನಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಜನವರಿ 15, ಸೋಮವಾರ : ಉತ್ತರಾಯಣ ಪುಣ್ಯಕಾಲ, ಮಕರ ಸಕ್ರಾಂತಿ ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ ಮಾರ್ಚ್ 8, ಶುಕ್ರವಾರ: ಮಹಾ ಶಿವರಾತ್ರಿ […]
ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರನ್ನ ಭೇಟಿ ಮಾಡಿದ ಹೆಚ್.ಡಿ.ಕೆ

ನವದೆಹಲಿ : ಡಿಸೆಂಬರ್ :22: ಇಂದು ಬೆಳಗ್ಗೆ ದೆಹಲಿಯಲ್ಲಿ ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರನ್ನು ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮೀ ಭೇಟಿ ಮಾಡಿ, ರಾಜ್ಯದ ವಿವಿಧ ವಿಷಯಗಳ ಬಗ್ಗೆ ದೀರ್ಘ ಸಮಾಲೋಚನೆ ನಡೆಸಿದರು. ಕರ್ನಾಟಕದ ಒಳಿತಿಗಾಗಿ ಸದಾ ಕೇಂದ್ರ ಸರಕಾರದ ಬೆಂಬಲ ಇರುತ್ತದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ -ಬಿಜೆಪಿ ಮೈತ್ರಿ ಸೇರಿ ಕರ್ನಾಟಕಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ […]
Toilet cleaning : ಬೆಂಗಳೂರು ಶಾಲೇಲಿ ಮಕ್ಕಳಿಂದ ಟಾಯ್ಲೆಟ್ ಕ್ಲೀನಿಂಗ್ : ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು : ಡಿ. 22; ಕೋಲಾರ ಜಿಲ್ಲೆಯ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ (Manual Scavenging) ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ (Toilet Cleaning) ಮಾಡಿಸಲಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರು ಬಿಬಿಎಂಪಿ, ಶಿಕ್ಷಣ ಇಲಾಖೆ ಅಧಿಕಾರಿಗಳ […]
‘Majawadi CM has fun in private jet’ : ‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ, ಪ್ರೈವೇಟ್ ಜೆಟ್ ನಲ್ಲಿ ಮಜವಾದಿ ಸಿಎಂ ಮೋಜು ಮಸ್ತಿ’

ಬೆಂಗಳೂರು: ಡಿಸೆಂಬರ್.22: ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ ಒಳಗೆ ಮೋಜು ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣುಕಿಸುತ್ತಿರುವುದಕ್ಕೆ ಈ ಅವತಾರವೇ ಸಾಕ್ಷಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಇತ್ತೀಚಿಗೆ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಅಧಿಕಾರಕ್ಕೆ ಬಂದು ಆರು ತಿಂಗಳು ಮುಗಿದರೂ […]
ಜೆಡಿಎಸ್-ಬಿಜೆಪಿ ಮೈತ್ರಿ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ಮಾಡಿದ ದಳಪತಿಗಳು!

ಬೆಂಗಳೂರು: D.21: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಪ್ರಕಟವಾದ ನಂತರ ಇದೇ ಮೊದಲ ಬಾರಿಗೆ ಜೆಡಿಎಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಇಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪುತ್ರರಾದ ಎಚ್.ಡಿ ಕುಮಾರಸ್ವಾಮಿ ಮತ್ತು ಎಚ್.ಡಿ ರೇವಣ್ಣ ಅವರ ಜೊತೆ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಈ ವಿಚಾರವನ್ನು ಪ್ರಧಾನಿ ಮೋದಿ ಎಕ್ಸ್ ( ಟ್ವಿಟರ್ ) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರದ ಪ್ರಗತಿಗೆ ದೇವೇಗೌಡ ಜಿ ಅವರ ಅನುಕರಣೀಯ […]
CM Ibrahim vs HD Devegowda : ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಪ್ರಶ್ನಿಸಿ ಕಾನೂನು ಹೋರಾಟಕ್ಕಿಳಿದ ಸಿ.ಎಂ ಇಬ್ರಾಹಿಂ

ಬೆಂಗಳೂರು : ಡಿ .21: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ (HD Devegowda) ಅವರು ಮಕ್ಕಳ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗುತ್ತಿದ್ದಂತೆ, ಸಿ.ಎಂ ಇಬ್ರಾಹಿಂ (CM Ibrahim) ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮಾಡಿದ ವರಿಷ್ಠರ ಕ್ರಮ ಪ್ರಶ್ನಿಸಿ ಇಬ್ರಾಹಿಂ ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ ಅವರನ್ನು ಪ್ರತಿವಾದಿಯಾಗಿಸಿದ್ದಾರೆ. ಜೆಡಿಎಸ್ ವರಿಷ್ಠರು ಯಾವುದೇ […]
No restrictions on Christmas : ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಯಾರೊಬ್ಬರೂ ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಇಂದು ಕೋವಿಡ್ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಮಾರ್ಗಸೂಚಿ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ಹೊಸ […]